ವೀರಾಜಪೇಟೆ, ಜು. 2: ರೋಟರಿ ಮಡಿಕೇರಿ ವುಡ್ಸ್ ಮತ್ತು ಪ್ರಥಮ ದರ್ಜೆ ಕಾಲೇಜು ಮೂರ್ನಾಡಿನ ರಾ.ಸೇ.ಯೋ. ಘಟಕದ ಸಹಯೋಗದಲ್ಲಿ ರೋಟರಿ ವರ್ಷಾರಂಭದ ಪ್ರಯುಕ್ತ ಹಣ್ಣು ಮತ್ತು ಹೂವಿನ ಗಿಡಗಳನ್ನು ನೆಡಲಾಯಿತು.
ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ರೊಟೇರಿಯನ್ ಸಂಪತ್ ಕುಮಾರ್, ರೊಟೇರಿಯನ್ ಪದ್ಮನಾಭ ಶೆಟ್ಟಿ, ರೊಟೇರಿಯನ್ ಬೋಪಣ್ಣ ಕೆ.ಕೆ., ರೊಟೇರಿಯನ್ ಹರೀಶ್ ಕಿಗ್ಗಾಲು, ಕಾಲೇಜಿನ ಪ್ರಾಂಶುಪಾಲ ಪೆÇ್ರ. ಪಟ್ಟಡ ಪೂವಣ್ಣ, ಉಪನ್ಯಾಸಕ ನವೀನ್ ಉಪನ್ಯಾಸಕಿಯರಾದ ವಿಲ್ಮ, ಪೂವಮ್ಮ, ಕುಮಾರಿ ಭವಾನಿ ಸೇರಿದಂತೆ ರಾ.ಸೇ. ಯೋಜನಾ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು.