ಗುಡ್ಡೆಹೊಸೂರು, ಜು. 2: ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ತಡಸಲು ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಕುಶಾಲನಗರ ವಲಯ ಅರಣ್ಯಾಧಿಕಾರಿಗಳು ಮರ ಸಹಿತ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ತಾ. 1ರ ರಾತ್ರಿ 8.15 ಗಂಟೆ ಸುಮಾರಿಗೆ ದೊಡ್ಡಬೆಟ್ಟಗೇರಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸಿದ್ದಾಪುರ ಕಡೆಯಿಂದ ಪಿಕ್ ಅಪ್ ವಾಹನ (ಕೆಎ 03 ಬಿ 1680) ಕಪ್ಪು ಟಾರ್ಪಲ್ನ್ನು ಮುಚ್ಚಿಕೊಂಡು ಬರುತ್ತಿರುವುದನ್ನು ಕಂಡು ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಲಾಗಿ ಪಿಕ್ಅಪ್ ವಾಹನದಲ್ಲಿ ತಡಸಲು ಮರದ 3 ನಾಟಾಗಳು ಇರುವುದು ಕಂಡುಬಂದಿದೆ. ವಾಹನದ ಚಾಲಕನ ಬಳಿ ಸೊತ್ತುಗಳನ್ನು ಸಾಗಿಸಲು ಇಲಾಖಾ ಅನುಮತಿ ಪತ್ರ ಕೇಳಲಾಗಿ, ಅನುಮತಿ ಪತ್ರ ಇಲ್ಲವೆಂದು ವಾಹನದ ಚಾಲಕ ಟಿ.ಎಂ. ಅಬ್ದುಲ್ ಸಮದ್ (42) ಹೇಳಿದ ಮೇರೆಗೆ ಅಕ್ರಮವಾಗಿ ಸೊತ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಸಂಬಂಧ ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ: 07/2022-23ನ್ನು ದಾಖಲಿಸಲಾಗಿದೆ.
ಪಿಕ್ ಅಪ್ ವಾಹನ ಹಾಗೂ ತಡಸಲು ಮರದ 3 ನಾಟಾಗಳನ್ನು ಇಲಾಖಾ ಪರ ವಶಪಡಿಸಿಕೊಳ್ಳಲಾಗಿದೆ. ವಾಹನ ಹಾಗೂ ತಡಸಲು ಮರದ ನಾಟಾಗಳನ್ನು ಭದ್ರತೆಗಾಗಿ ಗಂಧದ ಕೋಠಿಯಲ್ಲಿ ಇಡಲಾಗಿದ್ದು, ತಡಸಲು ಮರದ ನಾಟಾ ಮತ್ತು ವಾಹನದ ಅಂದಾಜು ಮೌಲ್ಯ ರೂ. 5 ಲಕ್ಷಗಳಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಂಗಪ್ಪ ಇವರ ಮಾರ್ಗದರ್ಶನದಲ್ಲಿ ಶಿವರಾಮ್ ಕೆ.ವಿ., ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್. ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಂಗಪ್ಪ ಇವರ ಮಾರ್ಗದರ್ಶನದಲ್ಲಿ ಶಿವರಾಮ್ ಕೆ.ವಿ., ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್. ದೇವಯ್ಯ, ಅರಣ್ಯ ರಕ್ಷಕರಾದ ಸಿದ್ದರಾಮ ನಾಟಿಕಾರ್, ವಾಹನ ಚಾಲಕ ನಾರಾಯಣ ರೈ, ಅರಣ್ಯ ವೀಕ್ಷಕ ಎಂ.ಎನ್. ಮೇದಪ್ಪ, ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.