ಮಡಿಕೇರಿ, ಜು. 2: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ನೂತನ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಎಂ.ಪಿ.ಕೇಶವ ಕಾಮತ್ ಮತ್ತು ಖಜಾಂಚಿಯಾಗಿ ಕೆ. ತಿಮ್ಮಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದ ಬಿ.ಎನ್. ಮನುಶೆಣೈ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಎಂ.ಪಿ. ಕೇಶವ ಕಾಮತ್ ಅವರನ್ನು ಮತ್ತು ತೆರವಾಗಿದ್ದ ಖಜಾಂಚಿ ಸ್ಥಾನಕ್ಕೆ ಕೆ. ತಿಮ್ಮಪ್ಪ ಅವರನ್ನು ಟ್ರಸ್ಟ್ನ ಸಭೆಯಲ್ಲಿ ಆಯ್ಕೆ ಮಾಡಲಾಯಿತು.