*ಗೋಣಿಕೊಪ್ಪ, ಜೂ. ೩೦: ಸದಾ ಸಾಲದಲ್ಲಿ ಮುಳುಗುತ್ತಿದ್ದ ಭಾರತ ದೇಶ ಇಂದು ಇತರ ದೇಶಗಳಿಗೆ ಸಾಲ ನೀಡುವಷ್ಟು ಆರ್ಥಿಕ ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಚಾರ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದರು.

ಬಾಳೆಲೆ ಕೊಡವ ಸಮಾಜದಲ್ಲಿ ನಡೆದ ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮತ್ತು ಜನ್‌ಧನ್ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವದ ಭಾರತ ದೇಶದ ಆಡಳಿತವನ್ನು ಪ್ರಪಂಚದಾದ್ಯAತ ದೇಶಗಳು ಗೌರವಿಸುತ್ತಿವೆ. ಆ ನೆಲಗಟ್ಟಿನಲ್ಲಿ ಗುರುತಿಸುವ ಪ್ರಮುಖ ಪಾತ್ರ ಮೋದಿ ಸರ್ಕಾರದ ಎಂಟು ವರ್ಷದ ಕಾರ್ಯಸಾಧನೆಯಾಗಿದೆ ಎಂದು ಶ್ಲಾಘಿಸಿದರು.

ತೈಲ ಉತ್ಪಾದನೆಯಲ್ಲಿ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಸುಮಾರು ೩೦೦ ಕೋಟಿ ಸಾಲ ನೀಡುವ ಮೂಲಕ ಭಾರತ ಶ್ರೀಲಂಕದ ಆರ್ಥಿಕ ಚೇತರಿಕೆಗೆ ಸಹಕರಿಸಿದೆ.

ಮೋದಿ ಸರ್ಕಾರದ ಎಂಟು ವರ್ಷ ಆಡಳಿತದಲ್ಲಿ ಭಾರತದ ಆರ್ಥಿಕತೆಯು ಬಲಾಡ್ಯವಾಗಿ ಬೆಳೆಯುತ್ತಿದೆ.

ಶಿಕ್ಷಣ, ವಸತಿ, ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಯುವಕರಲ್ಲಿ ಭಾರತದ ಬಗ್ಗೆ ದೇಶಭಕ್ತಿಯೊಂದಿಗೆ ಅಭಿಮಾನ ಬೆಳೆಸಿಕೊಳ್ಳುವ ಕಾರ್ಯವನ್ನ ಸರ್ಕಾರ ನಡೆಸುತ್ತಿದೆ. ಯುವ ಸಮುದಾಯ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಗ್ನಿಪಥ್ ಯೋಜನೆಗಳನ್ನು ರೂಪಿಸಿ ಯುವಕರಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದರು.

ಸರ್ಕಾರ ಜನ ಪರವಾಗಿ ಅನುಷ್ಠಾನಗೊಳಿಸಿದ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಗಮನ ಸೆಳೆಯಬೇಕಾಗಿದೆ. ಮುಂದಿನ ಚುನಾವಣೆಗೆ ಜನರಲ್ಲಿ ಮತಯಾಚಿಸಿದಾಗ ಕಾರ್ಯಕರ್ತರು ಮಾನಸಿಕವಾಗಿ ತಯಾರಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ದೇಶದಲ್ಲಿ ರಾಷ್ಟç ವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು ಘೋರಕೃತ್ಯ. ರಾಜಸ್ಥಾನದಲ್ಲಿ ಅಮಾಯಕ ವ್ಯಕ್ತಿಯ ಶಿರಚ್ಚೇದÀ ವೀಡಿಯೋ ಮಾಡಿ ಹರಿಯ ಬಿಟ್ಟಿರುವುದು ಖಂಡನಿಯ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ರಾಜೇಶ್ ಅಧ್ಯಕ್ಷತೆಯಲ್ಲಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಜ್ಯೋತಿ ಬೆಳಗಿಸಿ ಜನ್‌ಧನ್ ಯೋಜನಾ ಸಮಾವೇಶ ಮತ್ತು ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಚಾಲನೆ ನೀಡಿದರು.

ತಾಲೂಕು ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಗಣೇಶ್, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೆರ ಸೂರ್ಯ ಅಯ್ಯಪ್ಪ, ಸದಸ್ಯ ಕಾಟಿಮಾಡ ಶರೀನ್, ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಪ್ರಮುಖರಾದ ಅಳೆಮಂಗಡ ಬೋಸ್ ಮಂದಣ್ಣ, ಚಿಮ್ಮಣಮಾಡ ಕೃಷ್ಣಗಣಪತಿ, ವಿನು ಚಂಗಪ್ಪ, ಬಿ.ಎನ್. ಪ್ರಕಾಶ್ ಸೇರಿದಂತೆ ಹಿಂದುಳಿದ ವರ್ಗದ ಪದಾಧಿಕಾರಿಗಳು ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾಳಲೆ ಗಣಪತಿ ದೇವಸ್ಥಾನದ ಗುಡಿಯಿಂದ ಕೊಡವ ಸಮಾಜದವರೆಗೆ ಚಂಡೆವಾದ್ಯಗಳೊAದಿಗೆ ಮೆರವಣಿಗೆ ನಡೆಸಿ ಸರ್ಕಾರದ ಸವತ್ತುಗಳ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.