ಗೋಣಿಕೊಪ್ಪಲು, ಜೂ. ೩೦: ರೂ. ೧೮.೫೦ ಲಕ್ಷ ವೆಚ್ಚದಲ್ಲಿ ಶ್ರೀಮಂಗಲದಲ್ಲಿ ಕಂದಾಯ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಜಿ. ಬೋಪಯ್ಯ, ರೈತರ ಪೋಡಿ ಹಾಗೂ ಪೌತಿ ಖಾತೆಗೆ ಒತ್ತು ನೀಡಿ ಅಧಿಕಾರಿಗಳು ಈ ಸಂಬAಧದ ಕೆಲಸವನ್ನು ಯಾವುದೇ ಸಮಸ್ಯೆ ಇಲ್ಲದಂತೆ ಮಾಡಿಕೊಡಬೇಕು. ಆರ್‌ಟಿಸಿಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ಆರ್‌ಟಿಸಿ ನೀಡಬೇಕು. ಈ ಕೆಲಸಕ್ಕೆ ಅಧಿಕಾರಿಗಳು ಅನಾವಶ್ಯಕ ವಾಗಿ ಕಚೇರಿಗೆ ಅಲೆದಾಡಿಸದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೂತನ ಕಟ್ಟಡದ ಪ್ರಯೋಜನವನ್ನು ಈ ಭಾಗದ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸರ್ಕಾರ ಜನರ ಪರವಾಗಿದ್ದು ಉತ್ತಮ ಕಟ್ಟಡದಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಕಷ್ಟು ಅನುದಾನವನ್ನು ಹೋಬಳಿ ಕಚೇರಿಯ ಕಟ್ಟಡಕ್ಕೆ ವಿನಿಯೋಗಿಸಿದೆ. ಹೀಗಾಗಿ ಈ ಭಾಗದಲ್ಲಿ ನೂತನ ಕಟ್ಟಡ ಗೋಣಿಕೊಪ್ಪಲು, ಜೂ. ೩೦: ರೂ. ೧೮.೫೦ ಲಕ್ಷ ವೆಚ್ಚದಲ್ಲಿ ಶ್ರೀಮಂಗಲದಲ್ಲಿ ಕಂದಾಯ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಜಿ. ಬೋಪಯ್ಯ, ರೈತರ ಪೋಡಿ ಹಾಗೂ ಪೌತಿ ಖಾತೆಗೆ ಒತ್ತು ನೀಡಿ ಅಧಿಕಾರಿಗಳು ಈ ಸಂಬAಧದ ಕೆಲಸವನ್ನು ಯಾವುದೇ ಸಮಸ್ಯೆ ಇಲ್ಲದಂತೆ ಮಾಡಿಕೊಡಬೇಕು. ಆರ್‌ಟಿಸಿಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ಆರ್‌ಟಿಸಿ ನೀಡಬೇಕು. ಈ ಕೆಲಸಕ್ಕೆ ಅಧಿಕಾರಿಗಳು ಅನಾವಶ್ಯಕ ವಾಗಿ ಕಚೇರಿಗೆ ಅಲೆದಾಡಿಸದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೂತನ ಕಟ್ಟಡದ ಪ್ರಯೋಜನವನ್ನು ಈ ಭಾಗದ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸರ್ಕಾರ ಜನರ ಪರವಾಗಿದ್ದು ಉತ್ತಮ ಕಟ್ಟಡದಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಕಷ್ಟು ಅನುದಾನವನ್ನು ಹೋಬಳಿ ಕಚೇರಿಯ ಕಟ್ಟಡಕ್ಕೆ ವಿನಿಯೋಗಿಸಿದೆ. ಹೀಗಾಗಿ ಈ ಭಾಗದಲ್ಲಿ ನೂತನ ಕಟ್ಟಡ ನೇಮಿಸಿಕೊಳ್ಳಲು ಅವರ ದಾಖಲಾತಿಗಳನ್ನು ಪರಶೀಲನೆ ನಡೆಸಲಾಗಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ ನಂತರವೇ ಉಳಿದ ತಾಲೂಕಿಗೆ ಇವರನ್ನು ನೇಮಿಸಲಾಗುವುದು. ಎರಡು ತಾಲೂಕುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಕಂದಾಯ ಕಚೇರಿಗೆ ಇವರನ್ನು ನೇಮಕ ಮಾಡಲಾಗುವುದು ಎಂದರು.

ಪೊನ್ನAಪೇಟೆ ತಾಲೂಕಿನ ಕಚೇರಿ ಸಿಬ್ಬಂದಿಗಳ ವಿಚಾರದಲ್ಲಿ ಸ್ಥಳೀಯ ನಾಗರಿಕ ವೇದಿಕೆಯು ವಹಿಸುತ್ತಿರುವ ವಿಶೇಷ ಕಾಳಜಿಗೆ ಜಿಲ್ಲಾಧಿಕಾರಿ ಡಾ. ಸತೀಶ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರು, ಹೋರಾಟಗಾರರಾದ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಕಂದಾಯ ಇಲಾಖಾ ಕಚೇರಿ ಶಿಥಿಲಾವಸ್ಥೆಯಲ್ಲಿದ್ದ ಸಂದರ್ಭ ನೂತನ ಕಟ್ಟಡ ನಿರ್ಮಾಣಕ್ಕೆ ಇಲ್ಲಿನ ನಾಗರಿಕರು ಸಂಘ ಸಂಸ್ಥೆಯ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಡ ಹೇರಿದ್ದರೂ. ಇದರ ಫಲವಾಗಿ ನೂತನ ಕಟ್ಟಡ ನಿರ್ಮಾಣವಾಗಿದೆ ಎಂದರು.

ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಜಯ ಖಾಲಿ ಇರುವ ಸ್ಥಳದಲ್ಲಿ ಮುಂದಿನ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್, ಜೆ.ಸಿ. ವಿದ್ಯಾಸಂಸ್ಥೆಯ ಕೊಟ್ರಮಾಡ ಸುಬ್ರಮಣಿ, ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸರಿತಾ ತಮ್ಮಯ್ಯ, ಕುಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪ್ರತೀಶ್ ಗಣಪತಿ, ಉಪಾಧ್ಯಕ್ಷೆ ದಿವ್ಯ, ಸದಸ್ಯರಾದ ತೀತಿರ ತೀರ್ಥ ಮಂಜುನಾಥ್, ಕೆ. ಬಾಡಗ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಚೆಪ್ಪುಡೀರ ರೀಟಾ ವಿಜಯ್, ಸದಸ್ಯರಾದ ಮುಕ್ಕಾಟೀರ ರಿತೇಶ್ ಬಿದ್ದಪ್ಪ, ಶ್ರೀಮಂಗಲ ಗ್ರಾ.ಪಂ. ಸದಸ್ಯರುಗಳಾದ ಜಮುನಾ, ಸಾವಿತ್ರಿ ಸೇರಿದಂತೆ ಗ್ರಾಮದ ಪ್ರಮುಖರಾದ ಅಜ್ಜಮಾಡ ಚಂಗಪ್ಪ, ತೀತಿರ ರಾಜ, ಕಟ್ಟೇರ ಈಶ್ವರ್, ಪೆಮ್ಮಣಮಾಡ ನವೀನ್, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಅಕ್ಕಮ್ಮ, ರೆವಿನ್ಯೂ ಅಧಿಕಾರಿ ಶಿವಕುಮಾರ್, ಗ್ರಾಮ ಲೆಕ್ಕಿಗರಾದ ದೇವಯ್ಯ, ಬಸವನಗೌಡ, ಪೂಣಚ್ಚ, ಅನೀಶ್‌ಕುಮಾರ್, ಸಿಬ್ಬಂದಿಗಳಾದ ಸಿ.ಪಿ. ಕರುಂಬಯ್ಯ, ಶಂಕರ್ ನಾರಾಯಣ್, ನೇತ್ರಾವತಿ, ಮಹೇಶ್, ತರುಣ್ ನಂಜಪ್ಪ, ತಿಮ್ಮಯ್ಯ, ಕಾವ್ಯ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಭೂ ಮಾಪನ ಇಲಾಖೆಯ ಅಧೀಕ್ಷಕ ಬಾನಂಡ ಅರುಣ್ ಸ್ವಾಗತಿಸಿ, ವಂದಿಸಿದರು.