ಮಡಿಕೇರಿ, ಜು. ೧: ನಗರದ ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ (ಸನ್ನಿಸೈಡ್) ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿದರು.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ ತಿಮ್ಮಯ್ಯ ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶ. ದೇಶದ ರಕ್ಷಣೆಗೆ ಅವರು ಅಪಾರವಾಗಿ ಶ್ರಮಿಸಿದ್ದಾರೆ. ಯುವಪೀಳಿಗೆಗೆ ಅವರ ಬದುಕು ಪ್ರೇರಣೆಯಾಗಿದ್ದು, ಸ್ಮಾರಕ ಅವರನ್ನು ಇನ್ನೂ ಜೀವಂತ ವಾಗಿಟ್ಟಿದೆ. ದೇಶದ ಮಹಾನ್ ಸೇನಾಧಿಕಾರಿಯ
(ಮೊದಲ ಪುಟದಿಂದ) ಜೀವನ ಬಿಂಬಿಸುವ ಸ್ಮಾರಕ ಭವನ ಭೇಟಿಯಿಂದ ದೇಶಪ್ರೇಮ ವೃದ್ಧಿಸುತ್ತದೆ. ಸನ್ನಿಸೈಡ್ ದೇಶದ ಏಕತೆಯ ಸಂದೇಶ ಸಾರುತ್ತಿದೆ ಎಂದ ಅವರು, ದೇಶದ ಪ್ರತಿಯೊಬ್ಬರು ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿದರು.
ಮೊದಲು ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದ ರಾಜ್ಯಪಾಲರು ಸನ್ನಿಸೈಡ್ ಆವರಣದಲ್ಲಿ ಯುದ್ಧ ವಿಮಾನ, ಯುದ್ಧ ನೌಕೆ ಮಾದರಿಯನ್ನು ಕಣ್ತುಂಬಿಕೊAಡರು.
ನAತರ ಜನರಲ್ ತಿಮ್ಮಯ್ಯ ಹುಟ್ಟಿ, ಬೆಳೆದು, ನಿವೃತ್ತಿ ಜೀವನ ಕಳೆದ ಅವರ ಮನೆಯನ್ನು ನೋಡಿ ಪುಳಕಿತರಾದರು. ಅವರ ಅಪರೂಪದ ಭಾವಚಿತ್ರ, ಕೊಡವ ಸಂಸ್ಕೃತಿ ಸಾರುವ ಪರಿಕರ, ವಸ್ತುಗಳನ್ನು ನೋಡಿ ಖುಷಿ ಪಟ್ಟರು. ಪತ್ನಿ ಅನಿತಾ ಗೆಹ್ಲೋಟ್ ಜೊತೆಗೆ ಇಡೀ ಸ್ಮಾರಕವನ್ನು ವೀಕ್ಷಿಸಿದರು.
ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ರಾಜ್ಯಪಾಲರಿಗೆ ಸ್ಮಾರಕದ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ರಾಜ್ಯಪಾಲರು ಬರೆದರು.