ಸೋಮವಾರಪೇಟೆ,ಜೂ.೩೦: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕ್ಲಬ್ ರಸ್ತೆಯಲ್ಲಿ ಎರಡು ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಕ್ಲಬ್ ರಸ್ತೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಸ್ಥಳದಲ್ಲಿ ಚರಂಡಿಯ ಗುಂಡಿ ಬಲಿಗಾಗಿ ಕಾಯುತ್ತಿದ್ದರೆ, ಕೃಷ್ಣ ಮೆಡಿಕಲ್‌ನ ಮುಂಭಾಗವಿರುವ ಗುಂಡಿಗೆ ಈಗಾಗಲೇ ಹಲವಷ್ಟು ಮಂದಿ ಬಿದ್ದು, ಕೈಕಾಲು ಮುರಿದುಕೊಂಡಿದ್ದಾರೆ.ಚರAಡಿ ನಿರ್ಮಾಣದ ನಂತರ ಸ್ಲಾö್ಯಬ್‌ಗಳನ್ನು ಅಳವಡಿಸದೇ ಇರುವುದರಿಂದ ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದ್ದರೂ ಎಂದಿನAತೆ ನಿರ್ಲಕ್ಷö್ಯ ವಹಿಸಲಾಗಿದೆ ಎಂದು ಅಂಗಡಿ ಮಾಲೀಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಪ್ರತಿ ದಿನ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯ ಜನಪ್ರತಿನಿಧಿಗಳು, ಮುಖ್ಯಾಧಿ ಕಾರಿಗಳು ಸಂಚರಿಸುತ್ತಿದ್ದಾರೆ. ಆದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರಾಣಹಾನಿಯಾಗುವ ಮುನ್ನ ಗುಂಡಿಗಳಿಗೆ ಸ್ಲಾö್ಯಬ್ ಹಾಕಲು ಪ.ಪಂ. ಮುಂದಾಗ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.