ಮಡಿಕೇರಿ, ಜೂ. ೩೦: ಸೇಕ್ರೆಡ್ ಹಾರ್ಟ್ ಶಾಲೆಯ ಶಿಕ್ಷಕವೃಂದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದ್ದು, ಸೇಕ್ರೆಡ್ ಹಾರ್ಟ್ ಶಾಲೆ ವಿರುದ್ಧ ಶಿಕ್ಷಕಿ ಮಮತ ಚಿಣ್ಣಪ್ಪ ಅವರು ಮಾಡಿರುವ ಆರೋಪಕ್ಕೆ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಿದೆ.
ಮಮತ ಅವರು ಹಲವು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ೨೦೧೧ರಲ್ಲಿ ಮುಖ್ಯ ಶಿಕ್ಷಕಿ ಹುದ್ದೆ ಖಾಲಿ ಇದ್ದಾಗ ಆ ಸ್ಥಾನದ ಆಕಾಂಕ್ಷಿಯಾಗಿದ್ದ ಮಮತ ಅವರು, ತಮಗೆ ಮುಖ್ಯ ಶಿಕ್ಷಕಿ ಹುದ್ದೆ ಸಿಗಲಿಲ್ಲವೆಂದು ಬೇಸರಗೊಂಡು ೨ ವರ್ಷಗಳ ಕಾಲ ಬೇರೆ ಶಾಲೆಗೆ ತೆರಳಿದ್ದರು. ೨೦೧೩ರಲ್ಲಿ ಮತ್ತೆ ನಮ್ಮ ಶಾಲೆಗೆ ಸೇರಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕರ್ತವ್ಯ ಲೋಪದ ಕಾರಣ ಹಲವು ಬಾರಿ ಮನವಿ ಮಾಡಿದರೂ ಸರಿಮಾಡಿಕೊಳ್ಳದ ಕಾರಣ ಅವರನ್ನು ಮುಖ್ಯ ಶಿಕ್ಷಕಿ ಹುದ್ದೆಯಿಂದ ವಿಜ್ಞಾನ ಶಿಕ್ಷಕಿಯಾಗಿ ಮುಂದುವರೆಯುವAತೆ ಆದೇಶಿಸಲಾಗಿತ್ತು. ಇದರಿಂದ ಬೇಸತ್ತು ಅವರು, ಶಾಲೆಯನ್ನು ಬಿಟ್ಟಿದ್ದಾರೆ.