ಕರಿಕೆ, ಜು. ೧: ಮಳೆಗಾಲ ಆರಂಭವಾಯ್ತೆAದರೆ ಪ್ರವಾಸಿಗರ ಚಿತ್ತ ಕರಿಕೆಯತ್ತ. ಇದಕ್ಕೆ ಕಾರಣ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮನಮೋಹಕ ಜಲಪಾತಗಳು ತುಂಬಿ ಧುಮ್ಮಿಕ್ಕುವ ದೃಶ್ಯ. ಈ ಬಾರಿ ವರುಣ ಕೊಂಚ ತಡವಾಗಿ ಕಾಲಿಟ್ಟರೂ ಇದೀಗ ದಿಢೀರ್ ಬಿರುಸುಗೊಂಡ ಕಾರಣ ನೀರಿಲ್ಲದೆ ಕಳೆಗುಂದಿದ ಜಲ ಕನ್ಯೆಯರು ಮೈದುಂಬಿ ಪರಿಸರ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿವೆ. ಪ್ರಕೃತಿಯ ಹಚ್ಚ ಹಸುರಿನ ಸುಂದರ ತಾಣ ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ತಲಕಾವೇರಿ ಅಭಯಾರಣ್ಯದ ವ್ಯಾಪ್ತಿಯ ಹಕ್ಕಿಕಂಡಿ, ಬಾಚಿಮಲೆ, ಮೇಲಡ್ಕದವರೆಗೆ ಸುಮಾರು ಹದಿನೈದು ಕಿ.ಮಿ. ಉದ್ದಕ್ಕೆ ಸಂಚರಿಸುವಾಗ ಇಪ್ಪತ್ತೆöÊದಕ್ಕೂ ಅಧಿಕ ಜಲಪಾತಗಳು ಇದೀಗ ಮೈದುಂಬಿ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ. ಪ್ರವಾಸಿಗರು ಇದರ ವೀಕ್ಷಣೆಗೆ ಮಳೆಗಾಲದಲ್ಲಿ ಆಗಮಿಸುತ್ತಿದ್ದು, ಜಲಪಾತದ ಸೌಂದರ್ಯವನ್ನು ತಮ್ಮ ಮೊಬೈಲ್ ಹಾಗೂ ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ. ಜಲಪಾತದ ಸೌಂದರ್ಯವನ್ನು ಸವಿದಷ್ಟೇ ಕಾಳಜಿಯನ್ನು ಸುತ್ತಲಿನ ಪ್ರಕೃತಿ ಪರಿಸರದ ಸ್ವಚ್ಛತಾ ಕಾರ್ಯದತ್ತಲೂ ಗಮನ ಹರಿಸಬೇಕಿದೆ.

- ಸುಧೀರ್ ಹೊದ್ದೆಟ್ಟಿ