ಮಡಿಕೇರಿ, ಜು. ೧: ೨೦೨೨-೨೩ನೇ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ವಿ.ಎಸ್.ಎಸ್.ಎಸ್.ಎನ್ ಸಂಭಾಗಣ ಕಕ್ಕಬೆಯಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷಿö್ಮÃ ಉಪಸ್ಥಿತಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ - ಅಹವಾಲುಗಳನ್ನು ಮುಂದಿರಿಸಿದರು.
ಯವಕಪಾಡಿ ಗ್ರಾಮ ಸಭೆಯಲ್ಲಿ ಚೆಕ್ಪೋಸ್ಟ್ನಲ್ಲಿ ಅರಣ್ಯ ಇಲಾಖೆಯವರು ಸುಂಕ ವಸೂಲು ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಚರ್ಚೆಯ ಮೂಲಕ ವಸೂಲಾತಿ ಯಾದ ಶೇ. ೫೦ ರಷ್ಟು ಗ್ರಾಮ ಪಂಚಾಯಿತಿಗೆ ವರ್ಗಾಯಿಸಬೇಕು ಅಲ್ಲದೆ ಸ್ಥಳೀಯರಿಂದ ಸುಂಕ ವಸೂಲಾತಿ ಮಾಡದಂತೆ ನಿರ್ಣಯಿಸಲಾಯಿತು. ನಾಲಡಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಮೊಬೈಲ್ ಟವರ್ ನಿರ್ಮಿಸಿಕೊಡಲು ಪ್ರಸ್ತಾವನೆಯನ್ನು ಕಳಿಸಿಕೊಡುವುದಾಗಿ ತೀರ್ಮಾನಿ ಸಲಾಯಿತು. ಮರಂದೋಡ, ನಾಲಡಿ, ಯವಕಪಾಡಿಯಲ್ಲಿ ಕಾಡಾನೆ ಹಾವಳಿಯು ಹೆಚ್ಚಾಗಿದ್ದು, ಆನೆಯನ್ನು ಹಿಡಿಯುವಂತೆ, ನಾಡಿಗೆ ಬಂದ ಆನೆಯನ್ನು ಕಾಡಿಗೆ ಅಟ್ಟುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಲಾಯಿತು. ವಿಶೇಷ ಚೇತನರಿಗೆ ಗ್ರಾ. ಪಂ. ಹಾಗೂ ಇತರ ಇಲಾಖೆ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ಆಗ್ರಹಿಸ ಲಾಯಿತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಕ್ಕಬೆಯವರು ಸ್ಥಳೀಯವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಎಂದು ಚಕಾರ ಎತ್ತಲಾಯಿತು. ವಿದ್ಯುತ್ ಸಂಪರ್ಕ ಸರಿಯಾಗಿ ಪೂರೈಕೆಯಾಗದರ ಬಗ್ಗೆ ಚೆಸ್ಕಾಂ ಇಲಾಖೆಯವರನ್ನು ಗ್ರಾಮ ಸ್ಥರು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವುದರ ಬಗ್ಗೆ ನಿರ್ಣಯವನ್ನು ಕೈಗೊಂಡು, ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಸ್ವಸಹಾಯ ಸಂಘದವರು ಬಟ್ಟೆ ಬ್ಯಾಗ್ನ್ನು ತಯಾರಿಸಿಕೊಡುವಂತೆ ಉತ್ತೇಜನ ನೀಡಲಾಯಿತು.
ಇದೇ ಸಂದರ್ಭದಲ್ಲಿ ರಸ್ತೆ, ನೀರು ಸೇರಿದಂತೆ ವಿವಿಧ ಸಮಸ್ಯೆಯನ್ನು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿ, ವಿವಿಧ ಇಲಾಖಾವಾರು ಅಧಿಕಾರಿಯವರಿಂದ ಮಾಹಿತಿಯನ್ನು ಪಡೆದುಕೊಂಡರು. ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿಯು "ಜನಸ್ನೇಹಿ ಪಂಚಾಯಿತಿ" ಪ್ರಶಸ್ತಿಯನ್ನು ಪಡೆದುಕೊಂಡ ಕುರಿತಾಗಿ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿ, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಉತ್ತಮ ರೀತಿಯಾಗಿ ಸ್ಪಂದನ ನೀಡುತ್ತಿದ್ದಾರೆ ಎಂದು ಶ್ಲಾಘಿಸಿ, ಅಭಿವೃದ್ಧಿ ನಿಟ್ಟಿನಲ್ಲಿ ಸಹಕರಿಸುವದಾಗಿ ಹೇಳಿದರು.
ಗ್ರಾಮ ಸಭೆಯಲ್ಲಿ ಪಿ.ಡಿ.ಓ. ಅಶೋಕ್, ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿ ವರ್ಗದವರು, ಗ್ರಾ.ಪಂ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.