ಸೋಮವಾರಪೇಟೆ, ಜು. ೧: ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ೨೧ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದಲ್ಲಿ ನಡೆಯಿತು.
ಸಂಘದಲ್ಲಿ ೧೨೩ ಜನ ಸದಸ್ಯರಿದ್ದಾರೆ. ಸದಸ್ಯರ ಕುಟುಂಬಕ್ಕೆ ಸಹಕಾರ ನೀಡುವ ಉದ್ದೇಶದಿಂದ ಮರಣನಿಧಿ ಸ್ಥಾಪಿಸಲಾಗಿದೆ. ೨೦೨೧-೨೨ನೇ ಸಾಲಿನಲ್ಲಿ ೬ ಮಂದಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಮರಣನಿಧಿಯ ಹಣವನ್ನು ನೀಡಲಾಗಿದೆ ಎಂದು ಮಲ್ಲಪ್ಪ ಹೇಳಿದರು.
ತಾ.೮ರಂದು ಬೆಂಗಳೂರಿನಲ್ಲಿ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತಾಗಬೇಕು. ಆ ಮೂಲಕ ರಾಜ್ಯಮಟ್ಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.
ಸಭೆಯಲ್ಲಿ ಹಿರಿಯ ಸದಸ್ಯರಾದ ಎಚ್.ಎಸ್. ಕೊಮಾರಿಗೌಡ, ಹೆಚ್.ಕೆ. ಬಸವರಾಜು, ಇ.ಎನ್. ನರಸಯ್ಯ, ಎಂ.ಆರ್. ಪುಟ್ಟಸ್ವಾಮಿ, ಸುಜಾತ ಶ್ರೀಕಂಠಯ್ಯ ಅವರುಗಳನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಮಾದಮ್ಮಯ್ಯ, ತಾಲೂಕು ಉಪಾಧ್ಯಕ್ಷ ಹೆಚ್.ಜಿ. ಕುಟ್ಟಪ್ಪ, ಗೌರವಾಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ, ಕಾರ್ಯದರ್ಶಿ ಬಿ.ಎಂ. ಆನಂದ, ನಿರ್ದೇಶಕರುಗಳಾದ ಬಿ.ಎಸ್. ನಿರ್ಮಲ, ಟಿ.ಕೆ. ಮಾಚಯ್ಯ, ಎಸ್.ಬಿ. ರಾಜಪ್ಪ, ಕೆ. ಚಂದ್ರಹಾಸ ಭಟ್ ಇದ್ದರು.