ಮಡಿಕೇರಿ, ಜೂ. ೨೯: ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಗಾಲದ ರುಚಿಕರ ಏಡಿ ವ್ಯಾಪಾರ ಜೋರಾಗಿ ಕಂಡುಬರುತ್ತಿದೆ. ಮಳೆಗಾಲ ಬಂದೊಡನೆ ಮಾಲೆಯಂತೆ ಬಡಿಗೆಯಲ್ಲಿ ತೂಗುಹಾಕಲಾಗುತ್ತಿರುವ ಏಡಿಗಳಿಗೆ ‘ಡಿಮಾಂಡೊ ಡಿಮಾಂಡ್...’
ಈ ಬಾರಿಯೂ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಸರಕಾರಿ ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯದಾರಿಯ ಬದಿಯಲ್ಲಿ ಹಾರಂಗಿ ಹಿನ್ನೀರಿನಿಂದ ಹಿಡಿದು ತಂದ ಏಡಿ ಮಾರಲಾಗುತ್ತಿದೆ. ಹಲವಾರು ಮಂದಿ ಮಳೆಯ ನಡುವೆ ಏಡಿ ಖರೀದಿಯಲ್ಲಿ ತೊಡಗಿರುವುದು ಕಂಡುಬAದಿದೆ.
- ಕರುಣ್ ಕಾಳಯ್ಯ