ವೀರಾಜಪೇಟೆ, ಜೂ. ೩೦: ಕೊಡಗಿನ ಯುವ ಜನತೆ ಮುಂದೆ ಬರಬೇಕಾದರೆ ಗುರಿಯನ್ನು ಮುಂದಿರಿಸಿಕೊಳ್ಳಬೇಕು. ನಮ್ಮಲ್ಲೂ ರಾಷ್ಟಿçÃಯ ಮಟ್ಟದ ಯುವ ಕ್ರೀಡಾಪಟುಗಳಿದ್ದು, ಇವರನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಆಲ್ ಇಂಡಿಯಾ ಕರಾಟೆ ಫೆಡರೇಶನ್ ದಕ್ಷಿಣ ವಲಯದ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅರುಣ್ ಮಾಚಯ್ಯ ಅವರು ಕೊಡವ ಸಂಪ್ರದಾಯ ವಿಶಿಷ್ಟವಾಗಿದ್ದು ಪ್ರತಿಯೊಂದರಲ್ಲೂ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ಇದು ಮುಂದಿನ ಪೀಳಿಗೆಗೂ ಮುಂದುವರೆಯಬೇಕು. ಈ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವು ದರಿಂದ ಮಕ್ಕಳು ಕೂಡಾ ಇದನ್ನು ಪಾಲನೆ ಮಾಡುವ ಮನಸ್ಸು ಬೆ¼ಯುತ್ತದೆ. ಜತೆಗೆ ಆಚರಣೆಗಳ ಮಹತ್ವ ತಿಳಿದುಕೊಳ್ಳುವಂತಾಗುತ್ತದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ನೆಲೆ ಇದ್ದರೆ ಬೆಲೆ ಇರುತ್ತದೆ, ಆ ನೆಲೆಯನ್ನು ನಾವು ಉಳಿಸಿಕೊಳ್ಳಬೇಕು. ಇಲ್ಲಿರುವ ತಾಯಂದಿರು ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು, ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು ಮಕ್ಕಳಲ್ಲಿ ಸಹಾಯ ಹಸ್ತ ಚಾಚುವ ಗುಣ ಬೆಳೆಸಬೇಕು. ಶಾಲೆಗಳಲ್ಲಿ ಮೊದಲು ಜೀವನ ಪಾಠ ಕಲಿಸಬೇಕು, ಒಳ್ಳೆಯತನಕ್ಕೆ ಕೈ ಜೋಡಿಸುವ ಪ್ರವೃತ್ತಿ ಬೆಳೆಸಬೇಕು ಎಂದರು.

ಅತಿಥಿಗಳಾದ ಚಾಂದಿನಿ ಮಾಚಯ್ಯ ಮಾತನಾಡಿ ಪ್ರಕೃತಿ ರಮಣೀಯ ತಾಣವಾದ ಕೊಡಗು ತನ್ನದೇ ಆದ ವಿಶಿಷ್ಠ ಸಂಸ್ಕöÈತಿ, ಉಡುಗೆ-ತೊಡುಗೆ ಆಚಾರಗಳನ್ನು ಹೊಂದಿದೆ. ಇಲ್ಲಿಯ ಪದ್ಧತಿ, ಆಚಾರ, ಆಚರಿಸುವ ಹಬ್ಬಗಳು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. ಕೊಡವರ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಗಳಲ್ಲಿ ಒಂದಾದ ಪೊಮ್ಮಕ್ಕಡ ಕೂಟ ಉತ್ತಮ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಪೊಮ್ಮಕ್ಕ ಎಂಬುದೇ ನಮ್ಮ ಹೆಮ್ಮೆ. ಕೂಟದ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದು, ನಮ್ಮಲ್ಲಿರುವ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಉದ್ಯೋಗ, ಜೀವನ ನಿರ್ವಹಣೆ ಸೇರಿದಂತೆ ನಾನಾ ಕಾರಣಗಳಿಂದ ಹೆಚ್ಚಿನ ಕೊಡವರು ಇಂದು ಹೊರಗಡೆ ನೆಲೆಸಿದ್ದಾರೆ.

ಕೊಡಗಿನವರು ಕೊಡಗಿನಲ್ಲಿಯೇ ನೆಲೆಗೊಳ್ಳುವಂತೆ ಆಗಬೇಕು. ಯುವಜನತೆ ತಮ್ಮ ಜೀವನವನ್ನು ಹಾಳುಗೆಡÀದೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು. ಮಕ್ಕಳ ಭವಿಷ್ಯ ರೂಪುಗೊಳಿಸುವುದರಲ್ಲಿ ತಾಯಿಯ ಪಾತ್ರ ಬಹುಮುಖ್ಯ, ಕಣ್ಣಿಗೆ ಕಾಣುವ ದೇವರು ಎಂದರೆ ಅದು ತಾಯಿ ಮಾತ್ರ, ಪ್ರತಿಯೊಂದು ಮನೆಯ ಆಧಾರ ಸ್ಥಂಭ ಹೆಣ್ಣೇ ಆಗಿರುವುದರಿಂದ ಮಕ್ಕಳ ಭವಿಷ್ಯದ, ಸಂಸ್ಕಾರದ ಹಿಂದೆ ತಾಯಿಯ ಕಾಳಜಿ ಶ್ರಮ ಅಧಿಕ. ಅದನ್ನು ಇಲ್ಲಿರುವ ಪ್ರತಿಯೊಬ್ಬರೂ ಪಾಲಿಸುವಂತಾಗ ಬೇಕು, ಹೀಗಾದಲ್ಲಿ ಯುವಜನತೆ ನಮ್ಮ ಆಚಾರ ವಿಚಾರ ಪದ್ಧತಿ ಪರಂಪರೆ ಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾದ್ಯವಾಗಲಿದೆ ಎಂದರು. ಚುಮ್ಮಕ್ಕ ಗ್ರೂಪಿನ ಅಧ್ಯಕ್ಷೆ ಉದ್ದಪಂಡ ವಿಮಲ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲೇ ವಿಭಿನ್ನ ಸಂಸ್ಕöÈತಿ, ಆಚಾರಗಳನ್ನು ಹೊಂದಿರುವ ಕೊಡವರ ಸಂಪ್ರಾದಾಯಿಕ ಪದ್ಧತಿಯಂತೆ ಗೆಜ್ಜೆತಂಡ್ ಹಾಗೂ ಕಾವೇರಿ ಮಾತೆಗೆ ನಮಿಸುವುದರ ಮುಖಾಂತರ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭ ಮುಖ್ಯ ಅತಿಥಿಗಳಾದ ಚೆಪ್ಪುಡಿರ ಅರುಣ್ ಮಾಚಯ್ಯ, ಚಾಂದಿನಿ ಮಾಚಯ್ಯ ದಂಪತಿಯ ಹಾಗೂ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮತ್ತು ಕೊಡವ ಸಮಾಜದ ಆಡಳಿತ ಮಂಡಳಿ ಚುನಾವಣೆಯಲ್ಲಿ ವಿಜೇತರಾದ ಪೊಮ್ಮಕ್ಕಡ ಒಕ್ಕೂಟದ ಸದಸ್ಯರಾದ ಮೇರಿಯಂಡ ಗಾಯತ್ರಿ, ಚೋಕಂಡ ರೇಖಾ, ಮುಲ್ಲೆಂಗಡ ಶೀಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚುಮ್ಮಕ್ಕ ಗುಂಪಿನ ಸದಸ್ಯರು ಕೊಡವ ನೃತ್ಯಗಳನ್ನು ಮಾಡಿ ಗಮನಸೆಳೆದರು. ಇದೇ ಸಂದರ್ಭ ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಅಮ್ಮುಣಿಚಂಡ ಗಂಗಮ್ಮ, ಖಜಾಂಚಿ ತಾತಂಡ ಯಶು ಕಬೀರ್, ಹಿರಿಯರಾದ ಕುಪ್ಪಂಡ ಪುಷ್ಪ ಮುತ್ತಣ್ಣ ಉಪಸ್ಥಿತರಿದ್ದರು. ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿ ನಿರೂಪಿಸಿದರು, ಸಲಹಾ ಸಮಿತಿ ಸದಸ್ಯರಾದ ನಾಯಕಂಡ ಬೇಬಿ ಚಿಣ್ಣಪ್ಪ ವಂದಿಸಿದರು.

ಸಮಾರAಭದಲ್ಲಿ ವಿವಿಧ ಖಾದ್ಯಗಳನ್ನು ಮಾಡಲಾಗಿತ್ತು. ನಾನಾ ತರದ ಪದಾರ್ಥಗಳನ್ನು ಮಹಿಳೆಯರು ಸವಿದರು, ಜೊತೆಗೆ ಎಲ್ಲರೂ ಒಂದಾಗಿ ವಿವಿಧ ಸಾಂಸ್ಕöÈತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಿಳೆಯರು ಸಂಭ್ರಮಿಸಿ ದರು. ವಿವಿಧ ಭಾಗಗಳಿಂದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯ ಕ್ರಮದ ಯಶಸ್ವಿಗೆ ಸಾಕ್ಷಿಭೂತರಾದರು.