ಮಡಿಕೇರಿ, ಜೂ. ೩೦: ಟೆಂಪೋ ಟ್ರಾವೆಲರ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಡಿಕೇರಿ ಸಮೀಪದ ತಾಳತ್ತ್ಮನೆ ಜಂಕ್ಷನ್ನಲ್ಲಿ ನಡೆದಿದೆ. ಉಡೋತ್ಮೊಟ್ಟೆ ನಿವಾಸಿ ಉದಿಯಂಡ ಶಂಭು ಮಂದಣ್ಣ (೫೮) ಮೃತ ದುರ್ಧೈವಿ.
ಮಡಿಕೇರಿಯಿಂದ ತಮ್ಮ ಮನೆಗೆ ಬೈಕ್ನಲ್ಲಿ ತೆರಳುವ ಸಂದರ್ಭ ಮಂಗಳೂರಿನಿAದ ಭಾಗಮಂಡಲಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಪಡಿಸಿದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಶಂಭು ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.