ಮಡಿಕೇರಿ, ಜೂ. ೨೯: ಹೋಬಳಿ ಮಟ್ಟದ ಪೌತಿ ಖಾತೆ ಆಂದೋಲನ ತಾ. ೩೦ ರಂದು (ಇಂದು) ಸುಂಟಿಕೊಪ್ಪ ನಾಡ ಕಚೇರಿಯಲ್ಲಿ ನಡೆಯಲಿದೆ. ಆಂದೋಲನದಲ್ಲಿ ಸಾರ್ವಜನಿಕರು ಅರ್ಜಿಗಳೊಂದಿಗೆ ‘ಫ್ಯಾಮಿಲಿ ಟ್ರೀ’, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್ ದಾಖಲಾತಿಗಳನ್ನು ಸಲ್ಲಿಸಿ ಸಂಬAಧಿಸಿದ ಪೌತಿ ಖಾತೆಯ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.