ಮಡಿಕೇರಿ, ಜೂ. ೩೦: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಮಡಿಕೇರಿಯಲ್ಲಿ ಹಿಂದೂ ಪರ ಸಂಘಟನೆಗಳಿAದ ಬೃಹತ್ ಪ್ರತಿಭಟನೆ ನಡೆಯಿತು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಿಭಟಿಸಿದರು.
ತಿಮ್ಮಯ್ಯ ವೃತ್ತದಲ್ಲಿ ಜಮಾವಣೆಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕನ್ಹಯ್ಯರನ್ನು ಬರ್ಬರವಾಗಿ ಹತ್ಯೆಗೈದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕನ್ಹಯ್ಯ ಹತ್ಯೆ ಆರೋಪಿಗಳನ್ನು ಶೀಘ್ರದಲ್ಲಿ ಗಲ್ಲಿಗೇರಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ ನಡೆಸುವ ಮೂಲಭೂತವಾದಿ ಭಯೋತ್ಪಾದಕರನ್ನು ಮಟ್ಟ ಹಾಕಲು ಕಠಿಣ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ವಿಶ್ವ ಹಿಂದೂ
(ಮೊದಲ ಪುಟದಿಂದ) ಪರಿಷತ್ ಜಿಲ್ಲಾಧ್ಯಕ್ಷ, ಕೃಷ್ಣಮೂರ್ತಿ, ಭಾರತದಲ್ಲಿ ಅಸÀಹಿಷ್ಣುತೆಯ ಹೆಸರಿನಲ್ಲಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸಿದರೆ ಹಿಂದೂ ಸಮಾಜ ಬೀದಿಗಿಳಿದು ಪಾಠ ಕಲಿಸಬೇಕಾಗುತ್ತದೆ ಎಂದರು.
ಕನ್ಹಯ್ಯ ಲಾಲ್ ಹತ್ಯೆ ಮಾಡಿದವರನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರÀಣ ವೇದಿಕೆ ಪ್ರಮುಖರಾದ ಕುಕ್ಕೇರ ಅಜಿತ್, ಚೇತನ್, ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ಮುತ್ತಪ್ಪ, ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಬಿಜೆಪಿ ಪ್ರಮುಖರು ಹಾಜರಿದ್ದರು.
ನಾಪೋಕ್ಲುವಿನಲ್ಲಿ ಪ್ರತಿಭಟನೆ
ನಾಪೋಕ್ಲು : ಕನ್ಹ್ಲಯ್ಯ ಲಾಲ್ ಹತ್ಯೆ ಖಂಡಿಸಿ ಬಿ.ಜೆ.ಪಿ. ಕಾರ್ಯಕರ್ತರು ನಾಪೋಕ್ಲು ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಬಿ.ಜೆ.ಪಿ. ನಾಯಕ ಮನು ಮುತ್ತಪ್ಪ ಇಂದು ದೇಶದಲ್ಲಿ ಭಯಾನಕ ವಾತಾವರಣ ಶೃಷ್ಟಿಯಾಗುತ್ತಿದೆ. ಹಾಡಹಗಲೇ ಶಿರಚ್ಛೇದ ಮಾಡುವ ಹಂತಕ್ಕೆ ಭಯೋತ್ಪಾದಕರು ತಲುಪಿದ್ದು ಇದರಿಂದ ದೇಶದಲ್ಲಿ ಮತೀಯ ಘರ್ಷಣೆಗೆ ಕಾರಣವಾಗಿದೆ. ಕೂಡಲೇ ಹಂತಕರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿದರು.
ಬಿ.ಜೆ.ಪಿ. ನಾಯಕ ಕುಂಡ್ಯೋಳAಡ ರಮೇಶ್ ಮುದ್ದಯ್ಯ ದೇಶದಲ್ಲಿ ಆದ ಇಂತಹ ಘಟನೆ ಮುಂದೆ ಮುರುಕಳಿಸಬಾರದು ಇಂತಹ ಕಿಡಿಗೇಡಿಗಳಿಗೆ ಕಠಿಣ ಕಾನೂನು ಶಿಕ್ಷೆಯನ್ನು ವಿಧಿಸಲು ಸರ್ವ ಪಕ್ಷದವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿ.ಜೆ.ಪಿ. ಮಡಿಕೇರಿ ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಮಡಿಕೇರಿ ತಾಲೂಕು ಬಿ.ಜೆ.ಪಿ. ರೈತ ಮೋರ್ಚಾದ ಅಧ್ಯಕ್ಷ ಶಿವಚಾಳಿ ಯಂಡ ಜಗದೀಶ್, ಪ್ರಸಾದ್ ತಿಮ್ಮಯ್ಯ, ಕುಂಡ್ಯೋಳAಡ ವಿಶು ಪೂವಯ್ಯ, ಪಟ್ರಪಂಡ ಮೋಹನ್ ಮುದ್ದಪ್ಪ, ಕಂಗಾAಡ ಜಾಲಿ ಪೂವಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ. ಪ್ರತೀಫ್, ಪ್ರಮುಖರಾದ ಕರವಂಡ ಲವ ನಾಣಯ್ಯ, ಎಂ.ಎA. ನರೇಂದ್ರ, ಅರೆಯಡ ರತ್ನ ಪೆಮ್ಮಯ್ಯ, ಅಪ್ಪಾರಂಡ ಸುಧೀರ್ ಅಯ್ಯಪ್ಪ, ಚಿಯಕಪೂವಂಡ ಸತೀಶ್ ದೇವಯ್ಯ, ಕೆಲೇಟಿರ ದೀಪು ದೇವಯ್ಯ, ಮಾಳೆಯಂಡ ಅಪ್ಪಚ್ಚ, ಕೆ.ಎಸ್. ದಿಲನ್, ಬೊಟ್ಟೋಳಂಡ ರಮೇಶ್, ಬಿ.ಎಸ್. ಪ್ರಕಾಶ್, ಬಿ.ಎಂ. ಪ್ರಕಾಶ್, ಚೋಕಿರ ಸಜೀತ್, ಫರೋಸ್ ಗಣಪ್ರತಿ, ಕೆಲೇಟಿರ ಸಾಬು ನಾಣಯ್ಯ, ರಾಧಕೃಷ್ಣ, ಸುಬಾಸ್ ಶ್ಯಾಮ್, ಸುಕುಮಾರ್, ಮತ್ತಿತರರು ಇದ್ದರು.