ಮಡಿಕೇರಿ, ಜೂ. ೩೦: ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಾ. ೧ ರಂದು (ಇಂದು) ಭೇಟಿ ನೀಡಲಿದ್ದಾರೆ.

ದಕ್ಷಿಣ ಕನ್ನಡ ಪ್ರವಾಸ ಮುಗಿಸಿ ಕುಕ್ಕೆಸುಬ್ರಹ್ಮಣ್ಯದಿಂದ ಹೊರಟು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಮಡಿಕೇರಿ ತಲುಪಲಿದ್ದಾರೆ. ಬಳಿಕ ಕೆಲವು ದೇವಾಲಯಗಳಿಗೆ ತೆರಳಿ ದರ್ಶನ ಮುಗಿಸಿ ನಗರದ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಸರಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ತಾ. ೧ ರಂದು (ಇಂದು) ಮಡಿಕೇರಿಯಲ್ಲಿಯೇ ಕುಟುಂಬ ಸಹಿತ ತಂಗಲಿದ್ದು, ಮರುದಿನ ಇನ್ನಿತರ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಚಿಕ್ಕಮಗಳೂರಿಗೆ ಪ್ರವಾಸ ಬೆಳೆÀಸಲಿದ್ದಾರೆ.