ವೀರಾಜಪೇಟೆ, ಜೂ. ೩೦: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪೊಲೀಸ್ ಇಲಾಖೆಯು ಮುಂದಾಗಿದೆ.
ವೀರಾಜಪೇಟೆ ನಗರ ಠಾಣೆಯ ಪ್ರಭಾರ ಠಾಣಾಧಿಕಾರಿಗಳಾಗಿರುವ ವಿ.ಎಸ್. ಶ್ರೀಧರ ಅವರು ಪತ್ರಿಕೆ ಯೊಂದಿಗೆ ಮಾತನಾಡಿ ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಯನ್ನು ತರಲಾಗಿದೆ. ಸಾರ್ವಜನಿಕರು, ವರ್ತಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಹೊಸ ನಿಯಮ
* ನಗರದ ದೊಡ್ಡಟ್ಟಿ ಚೌಕಿಯಲ್ಲಿ ಸಿದ್ದಾಪುರ ಮಾರ್ಗವಾಗಿ ತೆರಳುವ ಯಾವುದೇ ಖಾಸಗಿ ಮತ್ತು ಸರ್ಕಾರಿ ಬಸ್ಸು ನಿಲುಗಡೆ ನಿಷೇಧ ಮಾಡಲಾಗಿದ್ದು, ಬಸವೇಶ್ವರ ದೇವಾಲಯ ಸನಿಹದಲ್ಲಿರುವ ಬಸ್ ತಂಗುದಾಣದ ಬಳಿ ಬಸ್ ನಿಲುಗಡೆ ಮಾಡಬೇಕು.
*ದೊಡ್ಡಟ್ಟಿ ಚೌಕಿಯಿಂದ ಮೂರ್ನಾಡು ರಸ್ತೆ ಜಂಕ್ಷನ್, ಮೂರ್ನಾಡು ಜಂಕ್ಷನ್ನಿAದ ಮಲಭಾರ್ ರಸ್ತೆಯ ಕೀರ್ತಿ ಬಾರ್ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಬದಲಿಗೆ ಈ ಹಿಂದೆ ಇದ್ದ ೧೫ ದಿನಗಳು ಒಂದು ಬದಿ, ೧೫ ದಿನ ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆಗೆ ಕಟ್ಟುನಿಟ್ಟಾಗಿ ಕ್ರಮ ವಹಿಸಲಾಗಿದೆ.
*ಮಾಂಸ ಮಾರುಕಟ್ಟೆ ಜಂಕ್ಷನ್ನಿAದ ಪಂಜರ್ಪೇಟೆ ರಸ್ತೆ, ಮಾಂಸ ಮಾರುಕಟ್ಟೆ ಜಂಕ್ಷನ್ನಿAದ ದೊಡ್ಡಟ್ಟಿ ಚೌಕಿಯವರೆಗಿನ ರಸ್ತೆ, ದೊಡ್ಡಟ್ಟಿ ಚೌಕಿಯಿಂದ ತೆಲುಗರ ಬೀದಿ ರಸ್ತೆ ಈ ರಸ್ತೆಗಳಲ್ಲಿ ವಾಹನ ನಿಲುಗಡೆಯಲ್ಲಿ ೧೫ ದಿನಗಳ ಕ್ರಮವನ್ನು (ತಾರೀಕು ೦೧ ರಿಂದ ೧೫ ರವರೆಗೆ ಒಂದು ಬದಿ, ತಾ. ೧೬ ರಿಂದ ೩೧ ರವರೆಗೆ ಮತ್ತೊಂದು ಬದಿಯ ನಿಲುಗಡೆ) ಕಟ್ಟುನಿಟ್ಟಾಗಿ ಅನುಸರಿಸ ಲಾಗುತ್ತದೆ. ವಾಹನ ನಿಲುಗಡೆಯಲ್ಲಿ ವ್ಯತ್ಯಾಸಗಳು ಕಂಡುಬAದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ದಂಡವಿಧಿಸಲಾಗುತ್ತದೆ.
*ಖಾಸಗಿ ಬಸ್ ನಿಲ್ದಾಣ ಬಳಿಯ ಮಸೀದಿಯ ಮುಂದೆ ಎಲ್ಲಾ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ.
*ಗೌರಿಕೆರೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ನಿಲುಗಡೆ ನಿಷೇಧ ಹೇರಲಾಗಿದೆ.
*ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಎರಡು ಲೈನ್ಗೆ ಮಾತ್ರ ಅನುಮತಿ ನೀಡಲಾಗಿದ್ದು, ಕಾನೂನು ಉಲ್ಲಂಘಿಸಿ ಮಿತಿಮೀರಿ ವಾಹನ ನಿಲುಗಡೆ ಮಾಡಿಕೊಂಡಿ ರುವುದು ಕಂಡುಬAದಿದೆ. ಬಸ್ಗಳ ನಿಲುಗಡೆಗೆ ತಡೆಯಾಗುತ್ತಿರುವ ಹಿನೆÀ್ನಲೆಯಲ್ಲಿ ಹೆಚ್ಚಿನ ವಾಹನಗಳ ನಿಲುಗಡೆ ಕಂಡುಬAದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
*ನಗರದ ಪ್ರಮುಖ ರಸ್ತೆಗಳಲ್ಲಿ ಆಟೋರಿಕ್ಷ ಮತ್ತು ಗೂಡ್ಸ್ ವಾಹನಗಳ ನಿಲುಗಡೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ನಿಗದಿಗೊಳಿಸಿ ರುವ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು. ದ್ವಿಚಕ್ರ ವಾಹನಗಳ ನಿಲುಗಡೆಗಾಗಿ ನಿಗದಿತ ಸ್ಥಳ ಕಾಯ್ದಿರಿಸಲಾಗಿದ್ದು ನಿಗದಿತ ಸ್ಥಳದಲ್ಲೇ ನಿಲುಗಡೆಗೊಳಿ ಸಬೇಕು.
*ದೊಡ್ಡಟ್ಟಿ ಚೌಕಿಯಿಂದ ಅಪ್ಪಯ್ಯ ಸ್ವಾಮಿ ರಸ್ತೆ ಮತ್ತು ದೇವಾಂಗ ಬೀದಿಯ ರಸ್ತೆಗಳು ಏಕಮುಖ ಸಂಚಾರವಾಗಿರುತ್ತದೆ.
ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆಯಲ್ಲಿ ಉಪಯುಕ್ತವಾಗಲೆಂದು ಆರಕ್ಷಕ ಇಲಾಖೆಯು ಈ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಸಾರ್ವಜನಿಕರು ಕಾನೂನು ಕ್ರಮಗಳನ್ನು ಪಾಲಿಸಿಕೊಂಡು ಮುಂದುವರೆಯಬೇಕು ಎಂಬುದು ಇಲಾಖೆಯ ಆಶಯವಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ. -ಕೆ.ಕೆ.ಎಸ್.