ಗೋಣಿಕೊಪ್ಪಲು, ಜೂ.೨೯: ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಹೊಂದಿ ಕೊಂಡAತಿರುವ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗೋಡುವಿನ ಸಮೀಪದ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿದೆ.
ಮಾಹಿತಿ ತಿಳಿದ ತಿತಿಮತಿ ವಲಯ ಅರಣ್ಯಾಧಿಕಾರಿಗಳಾದ ಎಸಿಎಫ್ ಉತ್ತಪ್ಪ, ಆರ್.ಎಫ್.ಒ. ಅಶೋಕ್ ಹುನಗುಂದ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸುಮಾರು ೨೫ ವರ್ಷ ಪ್ರಾಯದ ಹೆಣ್ಣು ಕಾಡಾನೆ ಮೃತಪಟ್ಟು ಅಂದಾಜು ಒಂದು ವಾರ ಕಳೆದಿರಬಹುದೆಂದು ಸ್ಥಳಕ್ಕೆ ಭೇಟಿ ನೀಡಿದ ನಾಗರಹೊಳೆ ವನ್ಯಜೀವಿ ವಿಭಾಗದ ಡಾ.ಚಿಟ್ಯಪ್ಪ ಮಾಹಿತಿ ನೀಡಿದರು. ಸಂಜೆ ವೇಳೆ ಆದ ಕಾರಣ ಗುರುವಾರ ಮುಂಜಾನೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಕಾಡಾನೆಗಳು ವಾಸವಿದ್ದು ರೈತರ ಕಾಫಿ ತೋಟ ಹಾಗೂ ಕರಿಮೆಣಸು ತೋಟದಲ್ಲಿ ನೆಲೆ ಕಂಡುಕೊAಡಿವೆ.
ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಹೊಂದಿಕೊAಡಿರುವ ಈ ಪ್ರದೇಶದಲ್ಲಿ ಸಹಜವಾಗಿಯೇ ಕಾಡಾನೆ ಹಾಗೂ ಇತರೆ ವನ್ಯಜೀವಿಗಳು ರೈತರ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಕತ್ತಲಾಗುತ್ತಿದ್ದಂತೆಯೇ ಲಗ್ಗೆ ಇಡುತ್ತವೆ. ಮುಂಜಾನೆಯ ಬೆಳಕು ಮೂಡುವ ವೇಳೆ ಮತ್ತೆ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕುವುದು ಮಾಮೂಲಿಯಾಗಿದೆ.
- ಹೆಚ್.ಕೆ.ಜಗದೀಶ್