ಮಡಿಕೇರಿ, ಜೂ. ೨೯: ಮಡಿಕೇರಿಯ ಬನ್ನಿಮಂಟಪ ಬಳಿ ಇರುವ ಸ್ವಸ್ತಿಕ್ ಯುವ ವೇದಿಕೆಯ ಕಾರ್ಯಾಧ್ಯಕ್ಷರಾಗಿ ಶಿವರಾಜ್ ಹೆಚ್.ಓ. ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬನ್ನಿಮಂಟಪದಲ್ಲಿ ಸ್ವಸ್ತಿಕ್ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಕುಲದೀಪ್ ಪೂಣಚ್ಚ ಹಾಗೂ ಪ್ರಸಾದ್ ಎಂ.ಎಸ್. ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಂಜುನಾಥ ಎಲ್.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ವಿಜಯಕುಮಾರ್, ಖಜಾಂಚಿಯಾಗಿ ಗಣೇಶ್ ಹೆಚ್.ಪಿ., ಕಾರ್ಯದರ್ಶಿಯಾಗಿ ರಮೇಶ ಟಿ.ಆರ್., ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಎ.ಕೆ. ಮೆರವಣಿಗೆ ಸಮಿತಿ ಉಸ್ತುವಾರಿಯಾಗಿ ಸೋನಾಲ್ ಪೂಜಾರಿ ಹಾಗೂ ಜಯಣ್ಣ ಡಿ., ಗೌರವ ಅಧ್ಯಕ್ಷರುಗಳಾಗಿ ಮುರ್ಗೇಶ್ ಅಯ್ಯಪ್ಪ, ಹೇಮಂತ್ ಕುಮಾರ್ ಹೆಚ್.ಹೆಚ್., ವೇಣು ಪೊನ್ನೇಟಿ (ಅರುಣ್) ಹಾಗೂ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರುಗಳನ್ನು ನೇಮಕ ಮಾಡಲಾಗಿದೆ. ಈ ಬಾರಿ ೨೧ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಶೋಭಾಯಾತ್ರೆಯು ಅದ್ದೂರಿಯಾಗಿ ನಡೆಯಲಿದ್ದು ಶೋಭಾ ಯಾತ್ರೆಯ ನೇತೃತ್ವವನ್ನು ಕರ್ನಾಟಕ ಪ್ರದೇಶ ಹಿಂದೂ ಯುವ ವಾಹಿನಿ ಹಾಗೂ ಕೊಡಗು ಯುವ ಸೇನೆ ವಹಿಸಲಿದೆ.