ಮಡಿಕೇರಿ, ಜೂ. ೨೯: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶಿಷ್ಟ ವರ್ಗಕ್ಕೆ ಸೇರಿದ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಕೃಷಿಗೆ ಯೋಗ್ಯವಾದ ಜಮೀನು ಖರೀದಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ನೀಡುವ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಹಾಗೂ ಜಮೀನು ಮಾರಾಟ ಮಾಡಲು ಇಚ್ಚಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರನ್ನು ಹೊರತುಪಡಿಸಿ ಅನ್ಯ ಜನಾಂಗದ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಭೂ ಒಡೆತನ ಯೋಜನೆಯಡಿ ಭೂ ಮಾಲೀಕರು ನೀಡಬೇಕಾದ ದಾಖಲಾತಿಯ ವಿವರ: ಭೂ ಮಾಲೀಕರ ಜಾತಿ ಪ್ರಮಾಣ ಪತ್ರ ಹಾಗೂ ಫೋಟೋ, ಪಹಣಿ ೩ ವರ್ಷದ್ದು ಜಮಾಬಂದಿ, ವಂಶವೃಕ್ಷ, ಚೆಕ್ಕು ಬಂದಿ, ಮ್ಯುಟೇಷನ್ (ಹಕ್ಕು ಬದಲಾವಣೆ), ಆರ್.ಆರ್.ನಂ.೫ ಮತ್ತು ೬, ಕಂದಾಯ ರಶೀದಿ, ಕ್ರಯ ಪತ್ರದ ನಕಲು, ಪಿತ್ರಾರ್ಜಿತವಾದಲ್ಲಿ ಸಂಬAಧಪಟ್ಟ ಎಲ್ಲಾ ಸದಸ್ಯರ ಒಪ್ಪಿಗೆ ಪತ್ರ, ಬ್ಯಾಂಕು ಹಾಗೂ ಸೊಸೈಟಿಯಿಂದ ಸಾಲವಿಲ್ಲದ ದೃಢೀಕರಣ ಪತ್ರ, ಋಣಭಾರ ಪತ್ರ (೧೩ ವರ್ಷದ್ದು), ೧೧ಇ ನಕ್ಷೆ.

ಭೂ ಒಡೆತನ ಯೋಜನೆಯಡಿ ಫಲಾಪೇಕ್ಷಿಯು ನೀಡಬೇಕಾದ ದಾಖಲಾತಿಯ ವಿವರ: ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಫೋಟೋ, ಗ್ರಾಮ ಸಭೆಯ ಆಯ್ಕೆ ಪತ್ರ, ಕೃಷಿ ಕಾರ್ಮಿಕರ ಪತ್ರ, ಆಧಾರ್ ಕಾರ್ಡ್, ಗುರುತಿನ ಚೀಟಿ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್. ಅರ್ಜಿದಾರರು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಭೂ ರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳಾ ಅಭ್ಯರ್ಥಿಯಾಗಿರಬೇಕು. ಅರ್ಜಿದಾರರು ೨೧ ವರ್ಷದಿಂದ ೫೦ ವರ್ಷದವರೆಗಿನ ವಯೋಮಾನದವರಾಗಿರಬೇಕು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ ಅರೆ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ರೂ. ೯೮ ಸಾವಿರ ಹಾಗೂ ನಗರ ಪ್ರದೇಶದವರಿಗೆ ರೂ. ೧,೨೦,೦೦೦ ಮಿತಿಯೊಳಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಭೂಮಿ ಮಾರಾಟ ಮಾಡಲು ಇಚ್ಚಿಸುವ ಭೂ ಮಾಲೀಕರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿರಬಾರದು.

ಅರ್ಜಿಯನ್ನು ಜುಲೈ ೧೫ ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧ ದೂ. ೦೮೨೭೨-೨೨೮೮೫೭ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.