ಶನಿವಾರಸಂತೆ, ಜೂ. ೨೮: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ನ ನೂತನ ಅಧ್ಯಕ್ಷೆಯಾಗಿ ಲೀನಾ ಪರಮೇಶ್ ಹಾಗೂ ಉಪಾಧ್ಯಕ್ಷೆಯಾಗಿ ರೇಣುಕಾ ಮೇದಪ್ಪ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಹಶೀಲ್ದಾರ್ ಗೋವಿಂದ್ ರಾಜ್ ಚುನಾವಣೆ ಪ್ರಕ್ರಿಯೆ ನಡೆಸಿ ಆಯ್ಕೆಯನ್ನು ಘೋಷಿಸಿದರು. ಸದಸ್ಯರಾದ ಮಾಜಿ ಅಧ್ಯಕ್ಷೆ ವಿನೋದಾ, ಮಾಜಿ ಉಪಾಧ್ಯಕ್ಷೆ ಲೀನಾ, ಸದಸ್ಯರಾದ ಎಂ. ಹನೀಫ್, ಚಂದ್ರಶೇಖರ್ ದೊಡ್ಡಯ್ಯ, ದಾಕ್ಷಾಯಿಣಿ, ಬಿ.ಕೆ. ದಿನೇಶ್, ಮೋಕ್ಷಿತ್ ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ವಲಯಾಧ್ಯಕ್ಷ ಸುಲೈಮಾನ್, ಮುಖಂಡರಾದ ವೇದಕುಮಾರ್, ಜಿ.ಎಂ. ಕಾಂತರಾಜ್, ಕೆ.ಎಸ್. ರೆಹಮಾನ್, ಮೇದಪ್ಪ, ಗಗನ್ ರೈ, ಗೋಪಾಲಕೃಷ್ಣ, ಲೋಹಿತ್, ಪರಮೇಶ್, ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.