ಮಡಿಕೇರಿ, ಜೂ. ೨೮: ವಿಶೇಷಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ಯೋಜನೆಯಡಿ ಯುಡಿಐಡಿ ಕಾರ್ಡ್ ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸರ್ಕಾರದ ವಿವಿಧ ಸೌಲಭ್ಯ ಪಡೆದುಕೊಳ್ಳಲು ಯುಡಿಐಡಿ ಕಾರ್ಡ್ ಅವಶ್ಯವಿದೆ. ಗುರುತಿನ ಚೀಟಿಯನ್ನು (ಯುಡಿಐಡಿ ಕಾರ್ಡ್) ಎಲ್ಲಾ ವಿಶೇಷಚೇತನರು ಪಡೆಯಲು ಆನ್‌ಲೈನ್ ನೋಂದಣಿ ಮಾಡಿಸಲು ಆಧಾರ್ ಕಾರ್ಡ್, ೨ ಫೋಟೋ ಗಳೊಂದಿಗೆ ಆಯಾಯ ಗ್ರಾಮ ಪಂಚಾಯಿತಿಯಲ್ಲಿರುವ ವಿ.ಆರ್. ಡಬ್ಲೂö್ಯಗಳನ್ನು ಮತ್ತು ಸಂಬAಧಿಸಿದ ತಾಲೂಕಿನ ಎಂ.ಆರ್. ಡಬ್ಲೂö್ಯಗಳನ್ನು ಭೇಟಿ ಮಾಡಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ. ೦೮೨೭೨-೨೯೫೮೨೯ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.