ಮಡಿಕೇರಿ, ಜೂ. ೨೮: ಕನ್ನಡ ನಾಡಿನ ಖ್ಯಾತ ರಂಗ ನಿರ್ದೇಶಕ ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ.) ಅವರ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ‘ಸಿ.ಜಿ.ಕೆ. ರಂಗಪ್ರಶಸ್ತಿ-೨೦೨೨’ಗೆ ಕೊಡಗು ಜಿಲ್ಲೆಯ ಬೀದಿ ನಾಟಕದ ರಂಗಕಲಾವಿದ ಕುಶಾಲನಗರದ ಜಿ. ರಾಜು ಅವರನ್ನು ಆಯ್ಕೆ ಮಾಡಲಾಗಿದೆ. ರಂಗಭೂಮಿ ಟ್ರಸ್ಟ್ ಕೊಡಗು (ರಿ) ಸಂಸ್ಥೆಯ ಶಿಫಾರಸ್ಸಿನ ಮೂಲಕ ಪ್ರಶಸ್ತಿ ಇಂದು ಘೋಷಿಸಲಾಗಿದೆ.
ಈ ಪ್ರಶಸ್ತಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಿ ಗೌರವಿಸಲಾಗುವುದು ಎಂದು ರಂಗಭೂಮಿ ಟ್ರಸ್ಟ್ ಕೊಡಗು ಸಂಸ್ಥೆಯ ಸಂಚಾಲಕಿ ಅನಿತಾ ಕಾರ್ಯಪ್ಪ ಅವರು ತಿಳಿಸಿದ್ದಾರೆ.