ವಿಶ್ವಾಸಮತಯಾಚನೆಗೆ ಸುಪ್ರೀಂ ಸೂಚನೆ
ವಿಶ್ವಾಸ ಮತಕ್ಕೂ ಮುನ್ನ ಉದ್ಧವ್ ಠಾಕ್ರೆ ರಾಜೀನಾಮೆ
ನವದೆಹಲಿ, ಜೂ. ೨೯: ಮಹಾರಾಷ್ಟç ಸರ್ಕಾರದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಕೋಶ್ಯಾರಿ ಅವರು ನೀಡಿದ್ದ ಸೂಚನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ರಾಜ್ಯಪಾಲರ ಸೂಚನೆಯನ್ನು ಪ್ರಶ್ನಿಸಿ ಶಿವಸೇನೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ತಾ. ೩೦ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ರಾಜ್ಯಪಾಲರ ನಿರ್ದೇಶನ ದಂತೆ ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಸಾಬೀತು ಮಾಡಬೇಕು. ಸಂಜೆ ೫ ಗಂಟೆಯೊಳಗೆ ಈ ಪ್ರಕ್ರಿಯೆಯನ್ನು ಮುಗಿಸಬೇಕು ಎಂದು ಆದೇಶಿಸಿದೆ. ಈ ತೀರ್ಪಿನ ಬಳಿಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು. ಇದರಿಂದಾಗಿ ವಿಶ್ವಾಸಮತ ಯಾಚನೆಗೂ ಮುನ್ನವೇ ಠಾಕ್ರೆ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಂಡಿದ್ದು, ಫಡ್ನವೀಸ್ ನೇತೃತ್ವದ ಬಿ.ಜೆ.ಪಿ. ಹಾಗೂ ಶಿವಸೇನೆಯ ಮತ್ತೊಂದು ಬಣದ ಪ್ರಮುಖ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮೈತ್ರಿಕೂಟವು ಅಧಿಕಾರ ಪಡೆಯುವ ಅವಕಾಶ ಲಭ್ಯವಾಗಿದೆ.
ಹಂತಕರಿಗೆ ಪಾಕ್ ಸಂಘಟನೆ ನಂಟು, ೨೦೧೪ ರಲ್ಲಿ ಕರಾಚಿಗೆ ಭೇಟಿ!
ನವದೆಹಲಿ, ಜೂ. ೨೯: ಉದಯ್ಪುರ ಟೈಲರ್ ಹತ್ಯೆ ಪ್ರಕರಣದ ಹಂತಕರಿಗೆ ಪಾಕಿಸ್ತಾನದ ಸಂಘಟನೆಯೊAದರ ನಂಟು ಇತ್ತು ಎಂದು ರಾಜಸ್ಥಾನದ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಕನ್ಹಯ್ಯ ಲಾಲ್ ಹಂತಕರು ೨೦೧೪ ರಲ್ಲಿ ಪಾಕಿಸ್ತಾನದ ಕರಾಚಿಗೆ ಹೋಗಿಬಂದಿದ್ದರು. ಈ ಹಂತಕರಿಗೆ ಪಾಕಿಸ್ತಾನ ಮೂಲದ ದವಾತ್-ಎ-ಇಸ್ಲಾಮಿ ಸಂಘಟನೆಯ ನಂಟಿತ್ತು ಎಂಬುದು ಪೊಲೀಸ್ ಮುಖ್ಯಸ್ಥರ ಹೇಳಿಕೆಯಿಂದ ಬಹಿರಂಗಗೊAಡಿದೆ. ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಇನ್ನೂ ಮೂವರನ್ನು ಬಂಧಿಸಿದ್ದಾರೆ ಎಂದು ಡಿಜಿಪಿ ಎಂಎಲ್ ಲಾಥರ್ ಜೈಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ಬಗ್ಗೆ ಟಿವಿ ಚರ್ಚೆಯೊಂದರಲ್ಲಿ ಮಾತನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದ ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ (೪೫) ಎಂಬುವವರನ್ನು ರಿಯಾಜ್ ಅಖ್ತಾರಿ ಹಾಗೂ ಗೌಸ್ ಮೊಹಮ್ಮದ್ ಎಂಬ ಇಬ್ಬರು ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಹತ್ಯೆಯ ವೀಡಿಯೋವನ್ನೂ ಹಂಚಿಕೊAಡಿದ್ದ ಹಂತಕರು ಇಸ್ಲಾಮ್ಗೆ ಅವಮಾನ ಮಾಡಿದ್ದಕ್ಕಾಗಿ ಈ ರೀತಿ ಸೇಡು ತೀರಿಸಿಕೊಂಡಿದ್ದೇವೆ ಎಂದು ವೀಡಿಯೋ ಮೂಲಕ ತಿಳಿಸಿದ್ದರು. ಇಬ್ಬರೂ ಹಂತಕರ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಓರ್ವ ಆರೋಪಿ ಗೌಸ್ ಎಂಬಾತನಿಗೆ ಕರಾಚಿ ಮೂಲದ ಇಸ್ಲಾಮಿಕ್ ಸಂಘಟನೆ ದವಾತ್-ಎ- ಇಸ್ಲಾಮಿ ಜೊತೆ ನಂಟಿದೆ. ಪ್ರಕರಣದಲ್ಲಿ ಈ ವರೆಗೂ ಒಟ್ಟು ೫ ಮಂದಿಯ ಬಂಧನವಾಗಿದೆ.
ರಾಷ್ಟçಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ
ಬೆAಗಳೂರು, ಜೂ. ೨೯: ರಾಷ್ಟçಪತಿ ಆಯ್ಕೆ ಸಂಬAಧ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ ನೀಡುವ ಇಂಗಿತವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ದ್ರೌಪದಿ ಮುರ್ಮು ಅವರಿಗೆ ಬಹುಮತದ ಸಂಖ್ಯೆ ಈಗಾಗಲೇ ಸಿಕ್ಕಿದೆ. ನಮ್ಮ ಪಕ್ಷದ ಬೆಂಬಲ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿದ್ದಾರೆ. ಅದು ಅವರ ಔದಾರ್ಯ ಎಂದು ಬೆಂಬಲ ನೀಡುವ ಬಗ್ಗೆ ಪರೋಕ್ಷವಾಗಿ ಹೇಳಿದರು. ನನ್ನ ಪ್ರಕಾರ ಮುರ್ಮು ಈಗಾಗಲೇ ಗೆದ್ದಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಚುನಾವಣಾ ಅಭ್ಯರ್ಥಿಯಾಗಿ ಮುರ್ಮು ಕಣದಲ್ಲಿದ್ದಾರೆ. ಅವರ ಹಿನ್ನೆಲೆ ಏನು, ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ, ತಳಮಟ್ಟದ ಸಮುದಾಯದಿಂದ ಹೇಗೆ ಬೆಳೆದು ಬಂದಿದ್ದಾರೆ ಎಂಬುದನ್ನು ನಾನು ಅರಿತಿದ್ದೇನೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸ್ಪೂರ್ತಿದಾಯಕ ಎಂದು ಹೇಳಿದರು.
"ನಿಮಗೂ ಇದೇ ಗತಿ ಬರಲಿದೆ": ಬಿಜೆಪಿ ಉಚ್ಚಾಟಿತ ನಾಯಕ ನವೀನ್ಗೆ ಬೆದರಿಕೆ
ನವದೆಹಲಿ, ಜೂ. ೨೯: ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯ್ಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರೆ, ಇತ್ತ ಪ್ರವಾದಿ ಬಗ್ಗೆ ಟ್ವೀಟ್ ಮಾಡಿದ್ದ ನವೀನ್ ಕುಮಾರ್ ಜಿಂದಾಲ್ಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. ನವೀನ್ ಕುಮಾರ್ ಜಿಂದಾಲ್ ದೆಹಲಿ ಬಿಜೆಪಿ ಮಾಧ್ಯಮ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದರು. ಆದರೆ ಪ್ರವಾದಿ ಮೊಹಮ್ಮದ್ ಬಗ್ಗೆ ಇವರು ಮಾಡಿದ್ದ ಟ್ವೀಟ್ ಆಕ್ಷೇಪಾರ್ಹವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇತ್ತ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಟೈಲರ್ ಕನ್ಹಯ್ಯ ಲಾಲ್ ನ್ನು ಕತ್ತು ಸೀಳಿ ಹತ್ಯೆ ಮಾಡಿದ ಬೆನ್ನಲ್ಲೇ ಅದರ ವಿಡಿಯೋವನ್ನು ಇ-ಮೇಲ್ ಮೂಲಕ ಕಳಿಸಿ ತಮಗೆ ಜೀವ ಬೆದರಿಕೆ ಹಾಕಲಾಗಿದ್ದು, ತಮಗೆ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ. ಕನ್ಹಯ್ಯ ಲಾಲ್ಗೆ ಕತ್ತು ಸೀಳಿದಂತೆ ನನಗೆ ಮತ್ತು ನನ್ನ ಕುಟುಂಬದವರಿಗೂ ಕತ್ತು ಸೀಳಲಾಗುತ್ತದೆ ಎಂಬ ಇ-ಮೇಲ್ ಕನ್ಹಯ್ಯ ಲಾಲ್ ಹತ್ಯೆಯ ವಿಡಿಯೋ ಸಹಿತ ಬಂದಿತ್ತು ಎಂದು ನವೀನ್ ಜಿಂದಾಲ್ ಹೇಳಿದ್ದಾರೆ. ನನಗೆ ಈಗಾಗಲೇ ನೂರಾರು ಜೀವ ಬೆದರಿಕೆ ಬಂದಿದೆ. ಈ ರೀತಿ ಬಂದಿರುವ ಬೆದರಿಕೆಗಳ ಬಗ್ಗೆ ಹಲವು ಬಾರಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದೇನೆ. ಆದರೆ ಈ ಹಿಂದೆಯೇ ಕಡಿಮೆ ಮಾಡಿದ್ದ ಭದ್ರತೆಯನ್ನು ಹೆಚ್ಚಿಸಿಲ್ಲ. ವೈ+ ಇದ್ದ ಭದ್ರತೆಯನ್ನು ಕಳೆದ ಸೆಪ್ಟೆಂಬರ್ ನಲ್ಲಿ ಇಳಿಕೆ ಮಾಡಿ ಇಬ್ಬರು ಪೊಲೀಸರನ್ನಷ್ಟೇ ನಿಯೋಜಿಸಲಾಗಿದೆ. ನಾನು ಭಯದಿಂದ ನನ್ನ ಮಕ್ಕಳನ್ನು ಬೇರೆಡೆ ಇರಿಸಿದ್ದೇನೆ. ನಾನು ಹೊರಗೆ ಹೋದಾಗ ಒಬ್ಬರು ಪೊಲೀಸ್ ಸಿಬ್ಬಂದಿ ನನ್ನೊಂದಿಗೆ ಬರುತ್ತಾರೆ. ಮತ್ತೊಬ್ಬರು ನನ್ನ ಮನೆಯ ಭದ್ರತೆಗೆ ಇರುತ್ತಾರೆ ಎಂದು ನವೀನ್ ಕುಮಾರ್ ಜಿಂದಾಲ್ ತಿಳಿಸಿದ್ದಾರೆ.
ರಿಲಾಯನ್ಸ್ ರೀಟೇಲ್ಗೆ ಮುಖೇಶ್ ಅಂಬಾನಿ ಪುತ್ರಿ ಇಶಾ ನೂತನ ಅಧ್ಯಕ್ಷೆ!
ಮುಂಬೈ, ಜೂ. ೨೯: ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ರಿಲಾಯನ್ಸ್ ರೀಟೇಲ್ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನ ರಿಲಾಯನ್ಸ್ ಇಂಡಸ್ಟಿçÃಸ್ನ ಜವಾಬ್ದಾರಿಯನ್ನು ಅಂಬಾನಿ ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿಗೆ ವಹಿಸಿದ್ದರು. ಇಶಾ ಈಗ ರಿಲಾಯನ್ಸ್ ರೀಟೇಲ್ ವೆಂಚರ್ಸ್ನ ನಿರ್ದೇಶಕರಾಗಿದ್ದು, ಬೋರ್ಡ್ ಆಫ್ ರಿಲಾಯನ್ಸ್ ರೀಟೇಲ್ನಲ್ಲಿ ಇಶಾ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಖೇಶ್ ಅಂಬಾನಿ ತಮ್ಮ ಎಲ್ಲಾ ಉದ್ಯಮಗಳಿಗೂ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಯೋಜನೆ ಹೊಂದಿದ್ದು, ಉಳಿದ ಉದ್ಯಮಗಳಿಗೆ ಇನ್ನೆರಡು ದಿನಗಳಲ್ಲಿ ಹೊಸ ಅಧ್ಯಕ್ಷರ ನೇಮಕ ಘೋಷಣೆಯಾಗುವ ನಿರೀಕ್ಷೆ ಇದೆ. ಅಂಬಾನಿ ಅವರ ಅವಳಿ ಮಕ್ಕಳು ರಿಲಾಯನ್ಸ್ ರೀಟೇಲ್ ವೆಂಚರ್ಸ್ಗೆ ಮೆಟಾ ಪ್ಲಾಟ್ಫಾರ್ಮ್ನೊಂದಿಗಿನ ಹೂಡಿಕೆ ಹಾಗೂ ಜಿಯೋ ಮಾರ್ಟ್ಗೆ ಸಂಬAಧಿಸಿದ ಮಾತುಕತೆಯ ತಂಡದಲ್ಲಿ ೨೦೧೪ ರಿಂದ ಇದ್ದರು. ೨೦೦೮ ರಲ್ಲಿ ಇಶಾ ಫೋರ್ಬ್ಸ್ನಲ್ಲಿ ಕಿರಿಯ ಬಿಲಿಯನೇರ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.