ಚೆಯ್ಯಂಡಾಣೆ, ಜೂ. ೨೯: ಧಾರ್ಮಿಕ, ಲೌಕಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿರುವ ಕೊಡಗು ಜಿಲ್ಲೆಯ ವೀರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಯ ರಿಯಾದ್ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.

ಸಲಹಾ ಸಮಿತಿ ಚೇರ್ಮನ್ ಆಗಿ ಅಶ್ರಫ್ ಅಹ್ಸನಿ, ಸದಸ್ಯರುಗಳಾಗಿ ಅಬ್ಬಾಸ್ ಹಾಜಿ ಅಯ್ಯಂಗೇರಿ, ಹಂಸ ಮುಸ್ಲಿಯಾರ್ ಚೋಕಂಡಳ್ಳಿ, ಮುಸ್ತಫ ಝೈನಿ, ಕಂಬಿಬಾಣೆ, ಹಂಸ ಮುಸ್ಲಿಯಾರ್ ಪೊನ್ನಂಪೇಟೆ, ಮಹಮ್ಮದ್ ಸಖಾಫಿ ಕೊಟ್ಟಮುಡಿ, ಅಹ್ಮದ್ ಪಡಿಯಾಣಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ರಫೀಕ್ ತಂಙಳ್ ಮಾಲ್ದಾರೆ, ಉಪಾಧ್ಯಕ್ಷರಾಗಿ ಆಶಿಖ್ ಅಮ್ಮತ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಖ್ ಎಡಪಾಲ, ಕೋಶಾಧಿಕಾರಿಯಾಗಿ ಶರೀಫ್ ಗುಂಡಿಕೆರೆ, ಕಾರ್ಯದರ್ಶಿಯಾಗಿ ಷÀಂಶುದ್ದೀನ್ ಕೊಟ್ಟಮುಡಿ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ರಿಯಾದ್ ಕಿಸ್ವ ವಿಲ್ಲದಲ್ಲಿ ಶಿಹಾಬ್ ಸಖಾಫಿ ಅವರ ಪ್ರಾರ್ಥನೆ ಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಸ್ತಫ ಝೈನಿ ಕಂಬಿಬಾಣೆ ಉದ್ಘಾಟಿಸಿ, ಹಂಸ ಮುಸ್ಲಿಯಾರ್ ಪೊನ್ನಂಪೇಟೆ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದಾಳತ್ವ ವಹಿಸಿದ್ದರು.

ಕರೀಂ ಮುಸ್ಲಿಯಾರ್ ಸುಂಟಿಕೊಪ್ಪ ಸ್ವಾಗತಿಸಿ, ವಂದಿಸಿದರು.