ನಾಪೋಕ್ಲು, ಜೂ. ೨೯: ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಉದ್ಯಮಿ ಬೊಪ್ಪಂಡ ಸೂರಜ್ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದÄ, ಈ ಸಂದರ್ಭ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಹ್ಯಾರಿ ಮಂದಣ್ಣ, ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ, ಪ್ರಾಂಶುಪಾಲೆ ಬಿ.ಎಂ. ಶಾರದ, ನಿರ್ದೇಶಕರು, ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು. ಶಾಲಾ ನೂತನ ನಾಯಕನಾಗಿ ಪರಮ್ ಪೂವಣ್ಣ, ಉಪನಾಯಕಿಯಾಗಿ ಪ್ರಾಚಿ ಮುತ್ತಮ್ಮ, ಕಾರ್ಯದರ್ಶಿಯಾಗಿ ಹರ್ಷಿತಾ ಕುಶಾಲಪ್ಪ, ಸಾಂಸ್ಕೃತಿ ನಾಯಕಿಯಾಗಿ ಪ್ರಿಶಾ ಮಾಚಮ್ಮ, ಉಪನಾಯಕಿಯಾಗಿ ಶಮ್ಲ ಫಿರ್ದೌಸ್, ಕಾರ್ಯದರ್ಶಿಯಾಗಿ ದೀಪಿಕಾ, ಕ್ರೀಡಾ ನಾಯಕನಾಗಿ ಸೋಮಣ್ಣ, ಉಪನಾಯಕಿ ಯಾಗಿ ಆಯಿಷತ್ ಶಬಾನಾ, ಕಾರ್ಯದರ್ಶಿಯಾಗಿ ದ್ಯಾನ್ ಪೊನ್ನಪ್ಪ, ಸ್ವಚ್ಛತಾ ನಾಯಕನಾಗಿ ಸಂಕೇತ್ ಚಂಗಪ್ಪ, ಉಪನಾಯಕಿಯಾಗಿ ಶರ್ಮಿಳಾ, ಕಾರ್ಯ ದರ್ಶಿಯಾಗಿ ಆಪ್ರೀನ್ ಆಯ್ಕೆಯಾದರು. ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿ ಗಳಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು. ಈ ಸಂದರ್ಭ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಮಂಡೀರ ಸೋಮಣ್ಣ, ಕಂಗಾAಡ ಪ್ರೇಮಾ ಕಾಳಯ್ಯ ಮತ್ತು ಅರೆಯಡ ಕಾಂತಿ ಸೋಮಪ್ಪ ಅವರನ್ನು ಸನ್ಮಾನಿಸಲಾಯಿತು.