ಗೋಣಿಕೊಪ್ಪಲು, ಜೂ. ೨೯: ಮಂಗಳವಾರ ಸಂಜೆ ವೇಳೆ ಬಿಟ್ಟಂಗಾಲ ಸಮೀಪದ ೨ನೇ ರುದ್ರಗುಪ್ಪೆ ಗ್ರಾಮದ ತೋತೆರಿ ಬಳಿಯ ಕಾಫಿ ತೋಟವೊಂದರಲ್ಲಿ ಮೃತಪಟ್ಟ ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಟ ಮಾಡುತ್ತಿದ್ದ ಸಂದರ್ಭ ಮೃತಪಟ್ಟಿರಬಹುದೆಂದು ಊಹಿಸಲಾಗಿದೆ.
ಬುಧವಾರ ಮುಂಜಾನೆ ನಾಗರಹೊಳೆ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ. ಚಿಟ್ಟಿಯಪ್ಪ ಹಾಗೂ ಡಾ. ರಮೇಶ್ ಅವರುಗಳು ನಾಗರಹೊಳೆ ವನ್ಯಜೀವಿ ವಿಭಾಗದ ಡಿಎಫ್ಒ ಶಿವರಾಮ್ಬಾಬು ಸಮ್ಮುಖದಲ್ಲಿ ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಸಮೀಪದ ಬಯಲಿನಲ್ಲಿ ಸುಟ್ಟು ಹಾಕಲಾಯಿತು.
ಮೃತಪಟ್ಟ ಹುಲಿಯು ಅಂದಾಜು ೩ ವರ್ಷ ಪ್ರಾಯ ಇರಬಹುದೆಂದು ಅಂದಾಜಿಸಲಾಗಿದ್ದು, ಮತ್ತೊಂದು ಹುಲಿಯೊಂದಿಗೆ ನಿರಂತರ ಕಾದಾಟ ನಡೆಸಿ ನಂತರ ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಕಂಡುಬAದಿದೆ ಎಂದು ಡಿಎಫ್ಒ ಶಿವರಾಮ್ಬಾಬು ಮಾಹಿತಿ ಒದಗಿಸಿದರು.
ಹುಲಿಯ ಸಾವಿನ ಬಗ್ಗೆ ಖಚಿತ ಮಾಹಿತಿ ತಿಳಿಯಲು ವೈದ್ಯರುಗಳು ಅದರ ದೇಹದ ವಿವಿಧ ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಸದ್ಯದಲ್ಲಿಯೇ ಖಚಿತ ಮಾಹಿತಿ ಬರಲಿದೆ. ಮೃತಪಟ್ಟ ಹುಲಿಯು ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಸೇರಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದರು. ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಬಿ.ಎನ್. ಮೂರ್ತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
೨ನೇ ರುದ್ರಗುಪ್ಪೆಯಲ್ಲಿ ಕಾರ್ಮಿಕನ ಸಾವಿಗೆ ಕಾರಣವಾದ ಹುಲಿಯನ್ನು ಸೆರೆ ಹಿಡಿಯಲು ಅಧಿಕಾರಿಗಳು ಸತತ ಮೂರು ತಿಂಗಳ ಕಾಲ ವಿವಿಧ ಭಾಗಗಳÀಲ್ಲಿ ವಿಭಿನ್ನ ರೀತಿಯ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ನುರಿತ ತಜ್ಞರು, ವೈದ್ಯರು, ಹಿರಿಯ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿಗಳು ಸೇರಿದಂತೆ ಮತ್ತಿಗೋಡು ಸಾಕಾನೆ ಶಿಬಿರದಿಂದ ೩ ಆನೆಗಳು ಪಾಲ್ಗೊಂಡಿದ್ದವು. ಆದರೆ ಹುಲಿ ಸೆರೆ ಯತ್ನ ವಿಫಲವಾಗಿದೆ. ಈ ಗ್ರಾಮದ ಸುತ್ತಮುತ್ತಲಿನಲ್ಲಿ ೫ಕ್ಕೂ ಅಧಿಕ ಹುಲಿಗಳು ಸಂಚಾರ ಮಾಡಿರುವುದಾಗಿ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧ ಭಾಗಗಳಲ್ಲಿ ಅಳವಡಿಸಿದ್ದ ಕ್ಯಾಮರಾಗಳಿಂದ ಮಾಹಿತಿ ಲಭ್ಯವಾಗಿದೆ. ಗ್ರಾಮೀಣ ಭಾಗದ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ಮಳೆ ಪ್ರಾರಂಭವಾಗುತ್ತಿದ್ದAತೆ ಕಣ್ಮರೆಯಾದವು. ಇದರಿಂದ ಕಾರ್ಯಾಚರಣೆ ತಂಡ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.
ಸುತ್ತಮುತ್ತಲಿನ ಗ್ರಾಮಗಳ ರೈತರ ಜಾನುವಾರುಗಳ ಮೇಲೆ ಹುಲಿಯು ಆಗಿಂದ್ದಾಗೆ ದಾಳಿ ನಡೆಸಿ ಕೊಂದು ಹಾಕುತ್ತಿತ್ತು. ಇದರಿಂದ ಸಹಜವಾಗಿಯೇ ಈ ಭಾಗದ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸಿದ್ದರು. ಇದೀಗ ಈ ಭಾಗದಲ್ಲಿ ಮೃತಪಟ್ಟ ಗಂಡು ಹುಲಿಯು ಇತರ ಹುಲಿಗಳೊಂದಿಗೆ ನಿರಂತರ ಕಾದಾಟ ನಡೆಸಿ ಗಾಯಗಳಾಗಿ ನಂತರ ಸಾವಿಗೀಡಾಗಿದೆ ಎಂಬದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಹುಲಿಯ ಮರಣೋತ್ತರ ಪರೀಕ್ಷೆಯ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಸಿಎಫ್ ಉತ್ತಪ್ಪ, ಶ್ರೀನಿವಾಸ್ ನಾಯ್ಕ್, ಆರ್ಎಫ್ಒ ದೇಚಮ್ಮ, ಶಂಕರ್, ಅಶೋಕ್ ಹುನಗುಂದ, ದಿವಾಕರ್, ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪದನಿಮಿತ್ತ ನಿರ್ದೆಶಕರಾದ ಬೋಸ್ ಮಾದಪ್ಪ, ಎನ್ಜಿಒ ರಾಯ್ ಬೋಪಣ್ಣ ಗ್ರಾಮ ಪಂಚಾಯಿತಿ ಸದಸ್ಯರಾದ ಮೂಕಚಂಡ ಪ್ರಸನ್ನ ಸೇರಿದಂತೆ ಅನೇಕ ಸಿಬ್ಬಂದಿಗಳು ಸ್ಥಳದಲ್ಲಿದ್ದರು.
-ಹೆಚ್.ಕೆ. ಜಗದೀಶ್