ಸುಳ್ಯ, ಜೂ. ೨೯: ಚೆಂಬು-ಕರಿಕೆ ಭೂಕಂಪನ ಕೇಂದ್ರ ಬಿಂದು ಪೆರಾಜೆ ಆಗಿದ್ದು, ಗಣಿಗಾರಿಕೆಗಳೇ ಕಾರಣವೇ? ಎಂಬ ಜಿಜ್ಞಾಸೆ ಜನಸಾಮಾನ್ಯರಲ್ಲಿ ಮೂಡಿದೆ. ಮತ್ತೊಂದು ಪ್ರಕೃತಿ ದುರಂತವಾಗಬಹುದೇ ಎಂಬ ಆತಂಕದಲ್ಲಿದ್ದಾರೆ.
ಸುಳ್ಯ - ಮಡಿಕೇರಿ ಗಡಿ ಪ್ರದೇಶವಾಗಿರುವ ಪೆರಾಜೆ ವಜ್ರಪುರ ಪರಿಸರದಲ್ಲಿ ನಡೆದ ಅಕ್ರಮ ಹರಳುಕಲ್ಲು ಗಣಿಗಾರಿಕೆ, ಪೆರಾಜೆ ಅಮೆಚೂರುನಲ್ಲಿ, ಮರ್ಕಂಜದಲ್ಲಿ ನಡೆಯುತ್ತಿರುವ ರ್ಗಲ್ಲಿನ ಕೋರೆ, ಚೆಂಬು, ಕರಿಕೆ ಅರಣ್ಯ ಪ್ರದೇಶದಲ್ಲಿ ಕದ್ದು ಮುಚ್ಚಿ ನಡೆಯುವ ಹರಳುಕಲ್ಲು ಗಣಿಗಾರಿಕೆಗಳು ಕಾರಣ ವಾಗಿದೆಯೇ? ಎಂಬ ಜಿಜ್ಞಾಸೆ ಜನಸಾಮಾನ್ಯರಲ್ಲಿ ಮೂಡುತ್ತಿದೆ.
ಕಂದಾಯ ಇಲಾಖೆ, ಅರಣ್ಯ ಇಲಾಖೆ, ಗಣಿ ಮತ್ತು ವಿಧಿ ವಿಜ್ಞಾನ ಇಲಾಖೆಗಳು, ಸ್ಥಳೀಯ ಗ್ರಾಮ ಪಂಚಾಯತ್ಗಳು ಇದ್ದರೂ ಇದರಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ಆರೋಪಗಳು ಕೇಳಿಬರುತ್ತಿದೆ. ಇದರಿಂದ ಜೋಡುಪಾಲದಲ್ಲಿ ನಡೆದ ಪ್ರಕೃತಿ ದುರಂತ ಸಂಭವಿಸಿದAತೆ ಇಲ್ಲಿಯೂ ಸಂಭವಿಸಬಹುದೆAಬ ಆತಂಕ ಸುಳ್ಯ ಮತ್ತು ಕೊಡಗಿನ ಭಾಗದ ಜನರಲ್ಲಿ ಮೂಡಿದೆ.
ದ.ಕ. ಮತ್ತು ಕೊಡಗು ಗಡಿಪ್ರದೇಶ, ಕೊಡಗು ವ್ಯಾಪ್ತಿಯ ಪೆರಾಜೆ ಗ್ರಾಮದ ಕುಂಡಾಡು ಮತ್ತು ಬಂಗಾರಕೋಡಿ ಮಧ್ಯ ಪ್ರದೇಶ ವಜ್ರಪುರದಲ್ಲಿ ಈ ಹಿಂದೆ ನಡೆದ ಅಕ್ರಮ ಹರಳುಕಲ್ಲು ಗಣಿಗಾರಿಕೆ ನಡೆದು, ಬಳಿಕ ಸ್ಥಗಿತಗೊಂಡರೂ ಅದರ ಪರಿಣಾಮ ಇಂದಿನ ಭೂಕಂಪನಕ್ಕೆ, ಮುಂದೆ ಮಳೆಗೆ ಆಗಬಹುದಾದ ಪ್ರಕೃತಿ ದುರಂತಕ್ಕೆ ಕಾರಣವಾಗಬಹುದೇ ಎಂಬ ಮಾತುಗಳು ಕೇಳಿ ಬರುತ್ತಿದೆ.
ಅಲ್ಲದೆ ಪೆರಾಜೆ-ತೊಡಿಕಾನ ಗಡಿ ಭಾಗವಾದ ಪುತ್ಯಪೆರಾಜೆಯ ಅಮೆಚೂರು ಭಾಗದಲ್ಲಿ ವ್ಯಾಪಕವಾಗಿ ನಡೆಯುವ ರ್ಗಲ್ಲು ಗಣಿಗಾರಿಕೆ, ಮರ್ಕಂಜದಲ್ಲಿ ನಡೆಯುತ್ತಿರುವ ರ್ಗಲ್ಲು ಗಣಿಗಾರಿಕೆಗಳು, ಕರಿಕೆ, ಚೆಂಬು ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಕದ್ದು ಮುಚ್ಚಿ ನಡೆಯುವ ಹರಳುಕಲ್ಲು ಗಣಿಗಾರಿಕೆಗಳು ಕಾರಣವಾಗಿರಬಹುದು, ಕಾರಣವಾಗಿರಬಹುದೇ?
ಭೂಕಂಪನ ಕೇಂದ್ರ ಬಿಂದು ಪೆರಾಜೆ
ರಾಜ್ಯ ಗಣಿ ಮತ್ತು ವಿಧಿ ವಿಜ್ಞಾನ ಇಲಾಖೆ ಪ್ರಕಟಿಸಿದ ಮಂಗಳವಾರ ಬೆಳಿಗ್ಗೆ ಮತ್ತು ಸಂಜೆ ಸಂಭವಿಸಿದ್ದ ಭೂಕಂಪನ ನಿರ್ದೇಶಾಂಕದ ಪ್ರಕಾರ ಭೂಕಂಪನ ಕೇಂದ್ರ ಬಿಂದು ಪೆರಾಜೆಯ ಅಮೆಚೂರು ಭಾಗದ ರ್ಗಲ್ಲು ಕೋರೆ ಮತ್ತು ವಜ್ರಪುರದ ಹರಳುಕಲ್ಲಿನ ಗಣಿಗಾರಿಕೆಯ ಮಧ್ಯಭಾಗದಲ್ಲಿದ್ದು, ಈ ಎರಡು ಭಾಗದ ಕೆಲವೇ ಮೀಟರ್ಗಳ ಅಂತರದಲ್ಲಿದೆ. ಭೂ ಕಂಪನ ತೀವ್ರತೆ ೩.೦ ಆಗಿದ್ದು, ರಿಕ್ಟರ್ ಮಾಪಕ ಚೆಂಬು ಗ್ರಾಮದಲ್ಲಿದ್ದು, ಅದರ ಪ್ರಕಾರ ೫.೫ ಕೀ.ಮೀ ಭೂಕಂಪನದ ಕೇಂದ್ರ ಬಿಂದು ಪೆರಾಜೆ ಭಾಗವನ್ನು ಗುರುತಿಸಲಾಗಿದೆ.
ಪ್ರಕೃತಿ ದುರಂತದ ಆತಂಕ
ಆಳವಾಗಿ ಕೊರೆದು, ವಜ್ರ ಗಣಿಗಾರಿಕೆಗಳು ಈ ಭೂಕಂಪನದ ಪರಿಣಾಮವಾಗಿ ಭೂಮಿ ಒಡೆದು ನಿಂತು ಮುಂದೆ ಸುರಿಯುವ ಭಾರೀ ಮಳೆಗೆ ಜೋಡುಪಾಲದಂತಹ ಪ್ರಕೃತಿ ದುರಂತಗಳು ಸಂಭವಿಸಬಹುದೇ? ಇದಕ್ಕೆ ರ್ಗಲ್ಲು ಮತ್ತು ಹರಳುಕಲ್ಲು ಗಣಿಗಾರಿಗಳು ಕಾರಣವಾಗಬಹುದೇ? ಆತಂಕ ಮೂಡಿದ್ದರೂ ಸರಕಾರ ಮತ್ತು ಕೊಡಗು-ದ.ಕ ಜಿಲ್ಲಾಡಳಿತ ಗಣಿಗಾರಿಕೆಗಳಿಗೆ ಕಡಿವಾಣ ಹಾಕಿ ಮುಂದೆ ನಡೆಯಬಹುದಾದ ಭಾರೀ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಗಣಿ ಮತ್ತು ವಿಧಿ ವಿಜ್ಞಾನ ಇಲಾಖೆಗಳು, ಸ್ಥಳೀಯ ಗ್ರಾಮ ಪಂಚಾಯತ್ಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಹಿರಿಯ ಭೂ ವಿಜ್ಞಾನಗಳು ಸ್ಥಳಕ್ಕೆ ಭೇಟಿ ನೀಡಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಜನಸಾಮಾನ್ಯರು ಒತ್ತಾಯಿಸುತ್ತಿದ್ದಾರೆ.