ಮಡಿಕೇರಿ, ಜೂ. ೨೯: ೨೦೨೧ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿ ಸಂಬAಧ ಈಗಾಗಲೇ ಲಿಖಿತ ಪರೀಕ್ಷೆಗೆ ಹಾಜರಾಗಿ ೧:೫ರ ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ೨೦೨೨ರ ಜನವರಿ ೫ ಮತ್ತು ೧೯ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣ(ಮ್ಯಾನ್ಸ್ ಕಾಂಪೌAಡ್)ದಲ್ಲಿ ಬೆಳಿಗ್ಗೆ ೭ ಗಂಟೆಯಿAದ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗಿತ್ತು.
೧ನೇ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಗೊಂಡವರ ಪೈಕಿ ಒಬ್ಬ ಪುರುಷ ಅಭ್ಯರ್ಥಿ ಹುದ್ದೆಗೆ ಸೇರಲು ಇಚ್ಚೆ ಇಲ್ಲದಿರುವ, ಒಬ್ಬ ಪುರುಷ ಮತ್ತು ಒಂದು ಮಹಿಳಾ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಗೈರು, ೨ ಪುರುಷ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣ, ಒಬ್ಬ ಪುರುಷ ಅಭ್ಯರ್ಥಿಯ ಸಿಂಧುತ್ವ ನೈಜತೆ ಇಲ್ಲದಿರುವ ಹಾಗೂ ಒಂದು ಮಹಿಳಾ ಅಭ್ಯರ್ಥಿಯ ಪಿಯುಸಿ ತತ್ಸಮಾನ ಇಲ್ಲದೇ ಇರುವ ಕಾರಣಕ್ಕಾಗಿ ಒಟ್ಟು ೫ ಪುರುಷ ಮತ್ತು ೨ ಮಹಿಳಾ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಲಾದ ಕಾರಣ, ಆ ಹುದ್ದೆಗಳಿಗೆ ೨ನೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜೂನ್ ೧೫ ರಂದು ಬೆಂಗಳೂರಿನ ಸಿಐಡಿ ಕಚೇರಿಯಿಂದ ತಯಾರಿಸಿ ನೀಡಿದ್ದಾರೆ.
ಈ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲೆಯ ಪೊಲೀಸ್ ನೇಮಕಾತಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಜೂನ್, ೧೮ ರಂದು ತೆರೆದು ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಅಭ್ಯರ್ಥಿಗಳ ಗಮನಕ್ಕಾಗಿ ಪ್ರಕಟಿಸಲಾಗಿದೆ ಎಂದು ಪೊಲೀಸ್ ನೇಮಕಾತಿ ಸಮಿತಿ ಅಧ್ಯಕ್ಷರು ಮತ್ತು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.