ಮಡಿಕೇರಿ, ಜೂ. ೨೭: ಮಡಿಕೇರಿಯ ಬಾಲಮಂದಿರದ ಮಕ್ಕಳಿಗೆ ಮಡಿಕೇರಿಯ ‘ಮೈಂಡ್ ಆ್ಯಂಡ್ ಮ್ಯಾಟರ್’ ಸಂಸ್ಥೆ ಹಾಗೂ ಮೈಸೂರಿನ ಪಂಚಚಕ್ರಾಸ್ ವತಿಯಿಂದ ವಿಮಾನ ಹಾರುವಿಕೆಯಲ್ಲಿ ಒಳಗೊಂಡಿರುವ ವಿಜ್ಞಾನ ಸೇರಿದಂತೆ ಮಾದರಿ ವಿಮಾನ ನಿರ್ಮಾಣ ಕಾರ್ಯಾಗಾರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಮಾನವ ರಹಿತ ವಿಮಾನಗಳ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಹೂವಿನ ‘ವಾಸ್’ಅನ್ನು ೩-ಡಿ ಪ್ರಿಂಟ್‌ನಲ್ಲಿ ತಯಾರಿಸುವ ಮೂಲಕ ೩-ಡಿ ತಂತ್ರಜ್ಞಾನದ ಬಗ್ಗೆಯೂ ವಿವರಿಸಲಾಯಿತು.

ಪಂಚಚಕ್ರಾಸ್ ಸಂಸ್ಥೆಯ ಚಂದ್ರಕಾAತ ಶರ್ಮಾ, ಬಿ.ವಿ ಶಶಾಂಕ್, ಅಖಿಲ, ತ್ರಿವೇಣಿ, ನೇಸಾರ್ ಎಮ್.ಎನ್, ಜಗದೀಶ್ ಕುಮಾರ್ ಹಾಗೂ ಸಾತ್ವಿಕ್ ಅವರುಗಳು ಬಾಲಮಂದಿರಕ್ಕೆ ತೆರಳಿ ಏರೋ ಸ್ಪೇಸ್ ಇಂಜಿನಿಯರಿAಗ್ ಕುರಿತ ಹಲವಾರು ಪ್ರಾತ್ಯಕ್ಷಿಕೆಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದರು ಹಾಗೂ ಕಾರ್ಯಾಗಾರದ ಮೂಲಕ ಕಲಿಸಿಕೊಟ್ಟರು. ೨ ದಿನಗಳ ಕಾರ್ಯಾಗಾರದ ಬಳಿಕ ಮಾದರಿ ವಿಮಾನವನ್ನು ಮಕ್ಕಳೇ ಯಶಸ್ವಿಯಾಗಿ ತಯಾರಿಸಿದರು.