ವಿಶೇಷ ಲೇಖನ : ರಫೀಕ್ ತೂಚಮಕೇರಿ

ಪೊನ್ನಂಪೇಟೆ, ಜೂ.೨೮ : ಕೊಡಗು-ಕೇರಳ ರಾಜ್ಯ ಗಡಿಗೆ ಹೊಂದಿಕೊAಡಿರುವ ವಯನಾಡು ಮತ್ತು ಅದರ ನೆರೆಯ ಕಲ್ಲಿಕೋಟೆ (ಕೋಝಿಕ್ಕೋಡ್) ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಥಾಮರಶೇರಿ ಪರ್ವತ ಮಾರ್ಗ (ಮೌಂಟೇನ್ ಪಾಸ್) ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಸುತ್ತಲೂ ಹಸಿರು ಹೊದಿಕೆಯೊಂದಿಗೆ ಸದಾ ಕಂಗೊಳಿಸುವ ‘ವಯನಾಡ್ ಚುರಮ್' ಎಂದೂ ಕರೆಯಲ್ಪಡುವ ಥಾಮರಶೇರಿ ಪರ್ವತ ಮಾರ್ಗ (ಘಾಟ್ ರಸ್ತೆ) ಪ್ರಕೃತಿ ಪ್ರಿಯರ ನೆಚ್ಚಿನ ಸಂಚಾರ ಮಾರ್ಗವಾಗಿದೆ. ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಕಾನನದ ಮಧ್ಯೆ ಹಾದು ಹೋಗುವ ಥಾಮರಶೇರಿ ಪರ್ವತ ಮಾರ್ಗ ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಬೆಳಕಿಗೆ ಬಂತು.

ಥಾಮರಶೇರಿ ಪರ್ವತ ಮಾರ್ಗವನ್ನು ಕಂಡುಹಿಡಿದಿರುವ ಹಿಂದೆ ಬ್ರಿಟಿಷರ ಘೋರವಾದ ಇತಿಹಾಸವಿದೆ. ಈ ಮಾರ್ಗವನ್ನು ಸಾಹಸಮಯ ವಾಗಿ ಪತ್ತೆಹಚ್ಚಲು ನೆರವಾದ ಬುಡಕಟ್ಟು ಸಮುದಾಯದ ನಾಯಕನೊಬ್ಬನನ್ನು ಉದ್ದೇಶ ಈಡೇರಿದ ನಂತರ ಬ್ರಿಟಿಷರು ಗುಂಡಿಟ್ಟು ಕೊಂದ ಕರಾಳ ಚರಿತ್ರೆಯಿದೆ. ತನ್ನ ಚಾಣಕ್ಷತನದಿಂದ ದಟ್ಟ ಕಾಡಿನ ನಡುವೆ ಬ್ರಿಟಿಷರಿಗಾಗಿ ಮಾರ್ಗ ಪತ್ತೆಹಚ್ಚಿದ ಆದಿವಾಸಿ ವೀರನಾಯಕ ಕರಿಂದAಡನ್ ಮೂಪನ್ (ಮುಖ್ಯಸ್ಥ) ಬ್ರಿಟಿಷರಿಂದಲೇ ಹತನಾದ ದುರಂತ ಕಥೆಯಿದೆ. ಇದರಿಂದಾಗಿ ಕರಿಂದAಡನನ್ನು ವಯನಾಡಿನ ಮೊದಲ ಹುತಾತ್ಮ ಎಂದು ವಿಶೇಷಿಸಲಾಗುತ್ತಿದೆ. ಘಟನೆ ನಡೆದು ಎರಡು ಶತಮಾನಗಳು ಕಳೆದರೂ ಕರಿಂದAಡನ್ ಎಂಬ ಆದಿವಾಸಿ ನಾಯಕ ಇಂದಿಗೂ ವಯನಾಡಿನಲ್ಲಿ ದೈವಿಕ ನೆಲೆಯಲ್ಲಿ ಪೂಜಿಸಲ್ಪಡುತ್ತಿದ್ದಾರೆ.

ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣ ಕಾರ್ಯಗಳಲ್ಲಿ ದೂರದೃಷ್ಟಿ ಹೊಂದಿದ್ದ ಬ್ರಿಟಿಷರು ದಕ್ಷಿಣ ಭಾರತದಲ್ಲಿ ಸಾಕಷ್ಟು ರಸ್ತೆ ಸೇತುವೆಗಳನ್ನು ನಿರ್ಮಿಸಿದ್ದರು. ಇದೇ ರೀತಿ ಟಿಪ್ಪುವಿನ ಸೈನ್ಯವನ್ನು ಎದುರಿಸಲು ಅಗತ್ಯ ಶಸ್ತಾçಸ್ತçಗಳನ್ನು ಸರಬರಾಜು ಮಾಡಲು ಕೋಝಿಕ್ಕೋಡ್‌ನಿಂದ ಕರ್ನಾಟಕಕ್ಕೆ ಬ್ರಿಟಿಷರಿಗೆ ಪ್ರತ್ಯೇಕವಾದ ಮಾರ್ಗ ನಿರ್ಮಿಸುವುದು ಅನಿವಾರ್ಯವಾಗಿತ್ತು. ವಯನಾಡಿನಿಂದ ಕೋಝಿಕ್ಕೋಡ್‌ನ ಬೇಪೋರ್ ಬಂದರಿಗೆ ಇನ್ನಿತರ ಸಾಮಗ್ರಿಗಳನ್ನು ಸಾಗಿಸಲು ಕುಟ್ಯಾಡಿ ಮಾರ್ಗವನ್ನು ಬಳಸುತ್ತಿದ್ದರೂ ಬ್ರಿಟಿಷರಿಗೆ ಈ ಮಾರ್ಗ ಹೆಚ್ಚು ಸುರಕ್ಷಿತವಾಗಿರಲಿಲ್ಲ. ಆದ್ದರಿಂದ ಪ್ರತ್ಯೇಕ ಮಾರ್ಗಕ್ಕಾಗಿ ಹಂಬಲಿಸುತ್ತಿದ್ದ ಬ್ರಿಟಿಷರು ಅಂದಿನ ಮದರಾಸಿನಿಂದ ನುರಿತ ಬ್ರಿಟಿಷ್ ಇಂಜಿನಿಯರ್‌ಗಳನ್ನು ಕರೆಸಿ ಎಷ್ಟೋ ಬಾರಿ ಪರಿಶೀಲಿಸಿದರೂ ಹೊಸ ಮಾರ್ಗ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇದು ೧೭ನೇ ಶತಮಾನದಲ್ಲಿ ವಸಹತುಶಾಯಿ ಬ್ರಿಟಿಷರಿಗೆ ದೊಡ್ಡ ಸವಾಲಾಗಿ ಪರಿಗಣಿಸಿತ್ತು.

ಪ್ರತ್ಯೇಕ ಮಾರ್ಗದ ನಿರಂತರದ ಅನ್ವೇಷಣೆಯಲ್ಲಿ ತೊಡಗಿದ್ದ ಬ್ರಿಟಿಷರಿಗೆ ವಯನಾಡಿನ ಭೌಗೋಳಿಕತೆಯ ಬಗ್ಗೆ ಸಂಪೂರ್ಣ ತಿಳುವಳಿಕೆಯಿದ್ದ ‘ಪಣಿಯ' ಸಮುದಾಯದ ಪ್ರಭಾವಿ ಬುಡಕಟ್ಟು ನಾಯಕನಾಗಿದ್ದ ಕರಿಂದAಡನ್ ಹೆಸರು ಕಿವಿಗೆ ಬಿತ್ತು. ದೂರವನ್ನು ಕಡಿಮೆ ಮಾಡುವ ಹೊಸ ಮಾರ್ಗವನ್ನು ಹುಡುಕಲು ಬ್ರಿಟಿಷರು ಕರಿಂದAಡನ್ ಅವರ ಸಹಾಯ ಕೋರಿದಾಗ ತನಗೆ ಮತ್ತು ತನ್ನ ಸಮುದಾಯಕ್ಕೆ ರಕ್ಷಣೆ ನೀಡುವುದಾದರೆ ನೂತನ ಮಾರ್ಗವನ್ನು ಹುಡುಕಿ ಕೊಡುವುದಾಗಿ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ. ಇದರಂತೆ ಕಾರ್ಯ ಪ್ರವೃತ್ತನಾದ ಕರಿಂದAಡನ್ ಒಂದೆರಡು ದಿನಗಳಲ್ಲೇ ಥಾಮರಶೇರಿ ಪರ್ವತ ಶ್ರೇಣಿಯ ದಟ್ಟಾರಣ್ಯದ ಮೂಲಕ ವಯನಾಡ್‌ಗೆ ಹೊಸ ಮಾರ್ಗವನ್ನು ಪತ್ತೆಹಚ್ಚಿಯೇ ಬಿಟ್ಟ.

ಮಾರ್ಗವನ್ನು ಶೋಧಿಸುವಾಗ ಮುಂದೆ ವನ್ಯಪ್ರಾಣಿಗಳ ವಾಸಸ್ಥಾನಗಳನ್ನು ಪತ್ತೆ ಹಚ್ಚಲು ಆಡು ಮತ್ತು ಕುರಿಗಳನ್ನು ಮುಂದಕ್ಕೆ ಕಳುಹಿಸುತ್ತ ಪರಿಶೀಲಿಸುತ್ತಿದ್ದ, ಪರ್ವತದ ಮೂಲೆಮೂಲೆಗಳ ಬಗ್ಗೆ ತಿಳಿದಿದ್ದ ಕರಿಂದAಡನ ಬುದ್ಧಿವಂತಿಕೆ ಮತ್ತು ಚಾಣಕ್ಷತನ ಬ್ರಿಟಿಷರನ್ನೇ ಅಚ್ಚರಿಗೊಳಿಸಿತ್ತು. ಅಜ್ಞಾತ ಕಾಡಿನಲ್ಲಿ ಮಾರ್ಗ ಪತ್ತೆಹಚ್ಚಲು ನೇತೃತ್ವ ವಹಿಸಿದ್ದ ಕರಿಂದAಡನನ್ನು ಪ್ರತಿದಿನ ಹಿಂಬಾಲಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಕರಿಂದAಡನ್‌ನ ಮಾಂತ್ರಿಕ ಶಕ್ತಿಯನ್ನು ಕಂಡು ನಿಬ್ಬೆರಗಾಗಿದ್ದರು. ಈತನನ್ನು ಜೀವಂತವಾಗಿ ಬಿಟ್ಟರೆ ಹೊಸ ಮಾರ್ಗದ ಬಗ್ಗೆ ಶತ್ರು ಸೈನ್ಯಕ್ಕೆ ಮಾಹಿತಿ ರವಾನೆಯಾಗಬಹುದು ಎಂಬ ಭಯದಿಂದ ಮಾರ್ಗ ಪತ್ತೆ ಹಚ್ಚುವ ಕಾರ್ಯ ಪೂರ್ಣಗೊಂಡ ನಂತರ ಇಂದಿನ ಲಕ್ಕಡಿ ಎಂಬ ಪ್ರದೇಶದಲ್ಲಿ ಬ್ರಿಟಿಷ್ ಅಧಿಕಾರಿಗಳು ಕರಿಂದAಡನ ಎದೆಗೆ ಗುಂಡಿಕ್ಕಿ ಕೊಂದರು ಎಂದು ಹೇಳಲಾಗುತ್ತಿದೆ.

ಪ್ರೇತವಾಗಿ ಕಾಡುತ್ತಿದ್ದ ಕರಿಂದAಡನ್

ಬ್ರಿಟಿಷರು ವಂಚಿಸಿ ಕೊಲೆಗೈದ ಕರಿಂದAಡನ ಪ್ರೇತಾತ್ಮ ವರ್ಷಗಳು ಉರುಳಿದಂತೆ ಜನರನ್ನು ಕಾಡುತ್ತಿತ್ತು ಎಂಬುದು ಅಲ್ಲಿನ ಜನರ ಮಾತಾಗಿದೆ. ೧೮೯೦ ಮತ್ತು ೧೯೦೦ ರ ಅವಧಿಯಲ್ಲಿ ಈ ಮಾರ್ಗದಲ್ಲಿ ತೆರಳುವ ಪ್ರಯಾಣಿಕರನ್ನು ಇದು ವ್ಯಾಪಕವಾಗಿ ಕಾಡತೊಡಗಿತು. ಇದರಿಂದಾಗಿ ಬಹಳಷ್ಟು ಅಪಘಾತಗಳು ಮತ್ತು ಮರಣಗಳು ಸಂಭವಿಸಿದವು ಎನ್ನಲಾಗಿದೆ. ಇದಕ್ಕೆಲ್ಲಾ ಕರಿಂದAಡನ ಆತ್ಮವೇ ಕಾರಣ ಎಂದು ಅಂದು ಬಲವಾಗಿ ನಂಬಲಾಗಿತ್ತು.

ಈ ಮಾರ್ಗದಲ್ಲಿ ಕಾಡುಪ್ರಾಣಿಗಳ ದಾಳಿಯ ಜೊತೆಗೆ ಕರಿಂದAಡನ ಪ್ರೇತದ ಬಗ್ಗೆ ಜನರು ಆತಂಕ ಪಡುತ್ತಿದ್ದರು. ರಾತ್ರಿ ಇರಲಿ ಹಗಲಿನಲ್ಲೇ ಭೀತಿಯ ವಾತಾವರಣದಲ್ಲಿ ವಾಹನ ಚಾಲಿಸುವ ಕಾಲವೊಂದಿತ್ತು. ವಾಹನಗಳು ಚಲಿಸುವ ಸಂದರ್ಭದಲ್ಲಿ ದಿಢೀರನೆ ಎದುರಾಗುವ ವ್ಯಕ್ತಿಯ ರೂಪವೊಂದು ವಾಹನದ ಅಡ್ಡ ಬರುತ್ತಿತ್ತು. ವಾಹನ ಚಾಲಕರು ಇದನ್ನು ತಪ್ಪಿಸುವ ತವಕದಲ್ಲಿ ಸಾಕಷ್ಟು ಅಪಘಾತಗಳಾಗಿ ಮರಣಗಳು ಸಂಭವಿಸುತ್ತಲೇ ಇತ್ತು ಎನ್ನಲಾಗುತ್ತಿದೆ. ಇದು ಸ್ಥಳೀಯ ವಾಸಿಗಳ ನಿದ್ದೆಗೆಡಿಸಲು ಕಾರಣವಾಗಿತ್ತು.

ದಿನೇದಿನೇ ಹೆಚ್ಚುತ್ತಿದ್ದ ಈ ಸಮಸ್ಯೆಯ ಕಾರಣವನ್ನು ಅಧ್ಯಯನ ಮಾಡಲು ಮುಸ್ಲಿಂ ಧಾರ್ಮಿಕ ಪಂಡಿತರೊಬ್ಬರನ್ನು (ಮುಸ್ಲಿಯಾರ್) ಕೇರಳದಿಂದ ಕರೆತರಲಾಯಿತು. ಇವರ ಪ್ರಕಾರ ಮಾರ್ಗದ ಪ್ರಯಾಣಿಕರನ್ನು ಕರಿಂದAಡನ ಪ್ರೇತಾತ್ಮವೇ ಕಾಡುತ್ತಿದ್ದು, ಇದನ್ನು ನಿಯಂತ್ರಿಸದಿದ್ದಲ್ಲಿ ಮತ್ತಷ್ಟು ಅಪಾಯಗಳಿವೆ ಎಂದು ಎಚ್ಚರಿಸಿದ್ದರು ಎನ್ನಲಾಗಿದೆ. ಬಳಿಕ ಸಾಕಷ್ಟು ಪ್ರಯತ್ನಗಳ ನಂತರ ಈ ಪಂಡಿತರು ಕರಿಂದAಡನ ಆತ್ಮವನ್ನು ರಸ್ತೆ ಬದಿಯ ಮರವೊಂದಕ್ಕೆ ಸರಪಳಿ ಹಾಕಿ ಬಂಧಿಸುವಲ್ಲಿ ಯಶಸ್ವಿಯಾದರು ಎಂದು ನಂಬಲಾಯಿತು. ಈ ಮರ ಮತ್ತು ಸರಪಳಿಯನ್ನು ಇಂದಿಗೂ ಕಾಣಬಹುದಾಗಿದ್ದು, ಮರದ ಬುಡದಲ್ಲಿ ಹುತಾತ್ಮ ಕರಿಂದAಡನಿಗಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಲಾಗುತ್ತಿದೆ. ಇದೀಗ ಕೇರಳದಾದ್ಯಂತ ಇದು ‘ಸರಪಳಿ ಮರ' (ವಯನಾಡ್ ಚೈನ್ ಟ್ರೀ) ಎಂದು ಪ್ರಸಿದ್ಧಿ ಪಡೆದಿದೆ.

ಆಕರ್ಷಣೆಯ ಕೇಂದ್ರ ಚೈನ್ ಟ್ರೀ

ವಯನಾಡ್ ಜಿಲ್ಲೆಯಿಂದ ಕಲ್ಲಿಕೋಟೆ ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ದೊರೆಯುವ ಲಕ್ಕಡಿ ಎಂಬಲ್ಲಿ ರಸ್ತೆಯ ಬಲಬದಿಯಲ್ಲಿರುವ ಸರಪಳಿ ಮರ ಇದೀಗ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿ ಈ ಮರಕ್ಕೆ ಅಳವಡಿಸಲಾಗಿರುವ ಸರಪಳಿಯನ್ನು ಕುತೂಹಲದಿಂದ ವೀಕ್ಷಿಸಿ ತೆರಳುತ್ತಾರೆ. ಈ ಸರಪಳಿ ಮರ ಬೆಳೆದು ಈಗ ಸುಮಾರು ೨೫ ಅಡಿಗೂ ಮೀರಿ ಎತ್ತರವಿದೆ. ಮರದ ಪಕ್ಕದಲ್ಲಿಯೇ ಪುಟ್ಟ ದೇವಾಲಯ ನಿರ್ಮಾಣವಾಗಿದ್ದು, ಇದನ್ನು "ಚಂಗಾಲ ಮುನೀಶ್ವರನ ಗುಡಿ" ಎಂದು ಕರೆಯಲಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಅನೇಕ ಟ್ರಕ್ ಚಾಲಕರು ಸುರಕ್ಷಿತ ಪರ್ವತ ಮಾರ್ಗ ಪ್ರಯಾಣಕ್ಕಾಗಿ ಇಲ್ಲಿ ನಿಲ್ಲಿಸಿ ಪ್ರಾರ್ಥಿಸಿದ ನಂತರ ಮುಂದಕ್ಕೆ ತೆರಳುತ್ತಾರೆ. ಇನ್ನೂ ಅನೇಕ ಟ್ರಕ್ ಚಾಲಕರು ಕೋಝಿಕ್ಕೋಡ್ ನಿಂದ ಥಾಮರಶೇರಿ ಪರ್ವತ ಮಾರ್ಗ ಹತ್ತಿದ ನಂತರ ಇಲ್ಲಿ ವಿಶ್ರಾಂತಿ ಪಡೆದು ತೆರಳುತ್ತಾರೆ.

ಕರಿಂದAಡನ್ ಪ್ರತಿಮೆ

ಸರಪಳಿ ಮರದ ಬಳಿ ಕರಿಂದAಡನ ಪ್ರತಿಮೆ ಸ್ಥಾಪಿಸಬೇಕು ಮತ್ತು ಥಾಮರಶೇರಿ ಪರ್ವತ ಮಾರ್ಗಕ್ಕೆ ಕರಿಂದAಡನ್ ಸ್ಮಾರಕ ಘಾಟ್ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ಪಣಿಯ ಸಮುದಾಯ ಕೇರಳ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಿದ ಪರಿಣಾಮ ಇದೀಗ ಸರಪಳಿ ಮರದ ಕೆಳಗೆ ಕರಿಂದAಡನ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕೈಯಲ್ಲಿ ಕತ್ತಿ ಮತ್ತು ಕೋಲನ್ನು ಹಿಡಿದ ಕರಿಂದAಡನ ರೂಪ ಈ ಪ್ರತಿಮೆಗೆ ನೀಡಲಾಗಿದೆ. ಇದು ಸರಪಳಿ ಮರದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರಿಂದAಡನ್ ಸಾಹಸಗಾಥೆಯನ್ನು ಬಿಂಬಿಸುವ ಚಲನಚಿತ್ರವೊಂದು ತಯಾರಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಿದೆ.

ತನ್ನ ಬುದ್ಧಿವಂತಿಕೆಯಿAದ ಸಾಹಸಮಯವಾಗಿ ಪರ್ವತ ಮಾರ್ಗ ಪತ್ತೆಹಚ್ಚಿ ಕೊನೆಗೆ ಬ್ರಿಟಿಷರಿಂದ ಕೊಲೆಯಾದ ಹುತಾತ್ಮ ಕರಿಂದAಡನ್ ಅವರ ಹೆಸರು ಚಿರಸ್ಥಾಯಿಗೊಳ್ಳಬೇಕು ಎಂದು PಇಇP (ಪೀಪಲ್ಸ್ ಆಕ್ಷನ್ ಫಾರ್ ಎಜುಕೇಶನಲ್ ಆಂಡ್ ಎಕನಾಮಿಕ್ ಡೆವಲಪ್‌ಮೆಂಟ್ ಆಫ್ ಟ್ರೈಬಲ್ ಪೀಪಲ್) ಎಂಬ ಸರ್ಕಾರೇತರ ಸಂಸ್ಥೆ ಕಳೆದ ಹಲವು ವರ್ಷಗಳಿಂದ ವಿವಿಧ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ಕರಿಂದAಡನ್ ನೆನಪಿಗಾಗಿ ಪ್ರತಿ ವರ್ಷದ ಮಾರ್ಚ್ ೨ನೇ ಭಾನುವಾರದಂದು ‘ಕರಿಂದAಡನ್ ದಿನ'ವನ್ನಾಗಿ ಆಚರಿಸಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಈ ಸಂಸ್ಥೆ ಯು ಮಾರ್ಚ್ ೨ನೇ ಭಾನುವಾರದಂದು ‘ಕರಿಂದAಡನ್ ಸ್ಮೃತಿ ಯಾತ್ರೆ' ಏರ್ಪಡಿಸುತ್ತಿದೆ. ಅಂದು ಕರಿಂದAಡನ್ ಭಾವಚಿತ್ರದ ವಿಶೇಷ ಮೆರವಣಿಗೆಯನ್ನು ವಯನಾಡಿನ ಲಕ್ಕಿಡಿಯಿಂದ ಕೋಝಿಕ್ಕೋಡ್‌ನ ಅಡಿವಾರಂವರೆಗೆ ಆಯೋಜಿಸಲಾಗುತ್ತದೆ. ಈ ಮೆರವಣಿಗೆಯಲ್ಲಿ ಕೇರಳದ ಎಲ್ಲಾ ಭಾಗಗಳಿಂದ ಪಣಿಯ ಬುಡಕಟ್ಟು ಸಮುದಾಯದ ಸಾವಿರಾರು ಜನರು ಭಾಗವಹಿಸುತ್ತಾರೆ.

ಥಾಮರಶೇರಿ ಘಾಟ್ ರಸ್ತೆ

ಥಾಮರಶೇರಿ ಪರ್ವತದ ಮಧ್ಯೆ ಸರ್ಪ ಚಲಿಸುವಂತೆ ಸುರುಳಿಯಾಕಾರದಲ್ಲಿ ಹಾದುಹೋಗಿರುವ ಕರಿಂದAಡನ್ ಪತ್ತೆಹಚ್ಚಿದ ೧೪ ಕಿ. ಮೀ. ದೂರ ಉದ್ದದ ಥಾಮರಶೇರಿ ಘಾಟ್ ರಸ್ತೆಯ(ಪರ್ವತ ಮಾರ್ಗ) ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಇದು ಕೋಝಿಕ್ಕೋಡ್ ಜಿಲ್ಲೆಯ ರಾಷ್ಟಿçÃಯ ಹೆದ್ದಾರಿ ಸಂಖ್ಯೆ ೭೬೬ ರಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು ೨೬೨೫ ಅಡಿ ಎತ್ತರದಲ್ಲಿದೆ. ಈ ಮಾರ್ಗವು ಭೂದೃಶ್ಯ, ವನ್ಯಜೀವಿ ಅಭಯಾರಣ್ಯ, ಜಲಪಾತ, ಸುಂದರವಾದ ಬೆಟ್ಟದ ನೋಟ, ವನ್ಯಜೀವಿ ಮತ್ತು ವೈವಿಧ್ಯಮಯ ಸಸ್ಯ ಸಂಪತ್ತುಗಳ ವಿಶಿಷ್ಟ ಮಿಶ್ರಣವನ್ನು ಒಂದೆಡೆಯಲ್ಲಿ ನೀಡುವ ಜನಪ್ರಿಯ ಸಂಚಾರ ಮಾರ್ಗವಾಗಿದೆ. ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಪರ್ವತ ಶ್ರೇಣಿಯಲ್ಲಿರುವ ಈ ಘಾಟ್ ರಸ್ತೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯು ೯ ಹೇರ್‌ಪಿನ್ ತಿರುವುಗಳನ್ನು ಹೊಂದಿದೆ. ಕೋಯಿಕ್ಕೋಡ್ ಜಿಲ್ಲೆಯ ಅಡಿವಾರಂನಿAದ ಆರಂಭಗೊAಡು ವಯನಾಡಿನ ಲಕ್ಕಿಡಿ ಎಂಬಲ್ಲಿವರೆಗೆ ಇರುವ ಈ ಹಚ್ಚಹಸುರಿನ ಮಳೆಕಾಡಿನ ಪರ್ವತ ಮಾರ್ಗದಲ್ಲಿ ರಾತ್ರಿಯ ವಾಹನಗಳ ಸಂಚಾರದ ಬೆಳಕಿನ ದೃಶ್ಯ ನೋಡುವುದೇ ಒಂದು ಮಹಾನಂದವಾಗಿದೆ.

ಅAದಾಜು ಒಂದು ಗಂಟೆಗಳ ಈ ಪರ್ವತ ಮಾರ್ಗ ಪ್ರಯಾಣ ಪ್ರಯಾಣಿಕರಿಗೆ ರೋಮಾಂಚಕ ಅನುಭವ ನೀಡಿದರೆ, ಚಾಲಕರು ಮಾತ್ರ ಸವಾಲಿನಿಂದಲೇ ವಾಹನ ಚಾಲಿಸಬೇಕಿದೆ. ವಯನಾಡಿನಿಂದ ಕೋಯಿಕ್ಕೋಡ್ ತೆರಳುವಾಗ ಈ ಪರ್ವತ ಮಾರ್ಗದ ಆರಂಭದಲ್ಲಿ ದೊರೆಯುವ ಲಕ್ಕಡಿ ವ್ಯೂ ಪಾಯಿಂಟ್ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಕೇವಲ ಪರ್ವತ ಮಾರ್ಗದ ಸೌಂದರ್ಯವನ್ನು ವೀಕ್ಷಿಸಲೆಂದೇ ಇಲ್ಲಿಗೆ ಬರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ಸ್ಥಳದಿಂದ ನಿಂತು ಕೆಳಗೆ ನೋಡಿದರೆ ಪರ್ವತ ಮಾರ್ಗದಲ್ಲಿ ತೆರಳುವ ವಾಹನಗಳ ಸಂಚಾರ ಮೇಲ್ಭಾಗಕ್ಕೆ ಇರುವೆಗಳು ತೆರಳುವಂತೆ ಕಾಣುತ್ತದೆ. ಈ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸದೆ ಹೋಗಲಾರರು. ಪ್ರತಿ ಹೇರ್ ಪಿನ್ ತಿರುವುಗಳಲ್ಲಿರುವ ವ್ಯೂ ಪಾಯಿಂಟ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಪರ್ವತದ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.ಮೆರವಣಿಗೆಯಲ್ಲಿ ಕೇರಳದ ಎಲ್ಲಾ ಭಾಗಗಳಿಂದ ಪಣಿಯ ಬುಡಕಟ್ಟು ಸಮುದಾಯದ ಸಾವಿರಾರು ಜನರು ಭಾಗವಹಿಸುತ್ತಾರೆ.

ಥಾಮರಶೇರಿ ಘಾಟ್ ರಸ್ತೆ

ಥಾಮರಶೇರಿ ಪರ್ವತದ ಮಧ್ಯೆ ಸರ್ಪ ಚಲಿಸುವಂತೆ ಸುರುಳಿಯಾಕಾರದಲ್ಲಿ ಹಾದುಹೋಗಿರುವ ಕರಿಂದAಡನ್ ಪತ್ತೆಹಚ್ಚಿದ ೧೪ ಕಿ. ಮೀ. ದೂರ ಉದ್ದದ ಥಾಮರಶೇರಿ ಘಾಟ್ ರಸ್ತೆಯ(ಪರ್ವತ ಮಾರ್ಗ) ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಇದು ಕೋಝಿಕ್ಕೋಡ್ ಜಿಲ್ಲೆಯ ರಾಷ್ಟಿçÃಯ ಹೆದ್ದಾರಿ ಸಂಖ್ಯೆ ೭೬೬ ರಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು ೨೬೨೫ ಅಡಿ ಎತ್ತರದಲ್ಲಿದೆ. ಈ ಮಾರ್ಗವು ಭೂದೃಶ್ಯ, ವನ್ಯಜೀವಿ ಅಭಯಾರಣ್ಯ, ಜಲಪಾತ, ಸುಂದರವಾದ ಬೆಟ್ಟದ ನೋಟ, ವನ್ಯಜೀವಿ ಮತ್ತು ವೈವಿಧ್ಯಮಯ ಸಸ್ಯ ಸಂಪತ್ತುಗಳ ವಿಶಿಷ್ಟ ಮಿಶ್ರಣವನ್ನು ಒಂದೆಡೆಯಲ್ಲಿ ನೀಡುವ ಜನಪ್ರಿಯ ಸಂಚಾರ ಮಾರ್ಗವಾಗಿದೆ. ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಪರ್ವತ ಶ್ರೇಣಿಯಲ್ಲಿರುವ ಈ ಘಾಟ್ ರಸ್ತೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯು ೯ ಹೇರ್‌ಪಿನ್ ತಿರುವುಗಳನ್ನು ಹೊಂದಿದೆ. ಕೋಯಿಕ್ಕೋಡ್ ಜಿಲ್ಲೆಯ ಅಡಿವಾರಂನಿAದ ಆರಂಭಗೊAಡು ವಯನಾಡಿನ ಲಕ್ಕಿಡಿ ಎಂಬಲ್ಲಿವರೆಗೆ ಇರುವ ಈ ಹಚ್ಚಹಸುರಿನ ಮಳೆಕಾಡಿನ ಪರ್ವತ ಮಾರ್ಗದಲ್ಲಿ ರಾತ್ರಿಯ ವಾಹನಗಳ ಸಂಚಾರದ ಬೆಳಕಿನ ದೃಶ್ಯ ನೋಡುವುದೇ ಒಂದು ಮಹಾನಂದವಾಗಿದೆ.

ಅAದಾಜು ಒಂದು ಗಂಟೆಗಳ ಈ ಪರ್ವತ ಮಾರ್ಗ ಪ್ರಯಾಣ ಪ್ರಯಾಣಿಕರಿಗೆ ರೋಮಾಂಚಕ ಅನುಭವ ನೀಡಿದರೆ, ಚಾಲಕರು ಮಾತ್ರ ಸವಾಲಿನಿಂದಲೇ ವಾಹನ ಚಾಲಿಸಬೇಕಿದೆ. ವಯನಾಡಿನಿಂದ ಕೋಯಿಕ್ಕೋಡ್ ತೆರಳುವಾಗ ಈ ಪರ್ವತ ಮಾರ್ಗದ ಆರಂಭದಲ್ಲಿ ದೊರೆಯುವ ಲಕ್ಕಡಿ ವ್ಯೂ ಪಾಯಿಂಟ್ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಕೇವಲ ಪರ್ವತ ಮಾರ್ಗದ ಸೌಂದರ್ಯವನ್ನು ವೀಕ್ಷಿಸಲೆಂದೇ ಇಲ್ಲಿಗೆ ಬರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ಸ್ಥಳದಿಂದ ನಿಂತು ಕೆಳಗೆ ನೋಡಿದರೆ ಪರ್ವತ ಮಾರ್ಗದಲ್ಲಿ ತೆರಳುವ ವಾಹನಗಳ ಸಂಚಾರ ಮೇಲ್ಭಾಗಕ್ಕೆ ಇರುವೆಗಳು ತೆರಳುವಂತೆ ಕಾಣುತ್ತದೆ. ಈ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸದೆ ಹೋಗಲಾರರು. ಪ್ರತಿ ಹೇರ್ ಪಿನ್ ತಿರುವುಗಳಲ್ಲಿರುವ ವ್ಯೂ ಪಾಯಿಂಟ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಪರ್ವತದ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.