ಪೊನ್ನಂಪೇಟೆ, ಜೂ.೨೭: ಗೋಣಿಕೊಪ್ಪಲು ಸಮೀಪದ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ೨೦೨೨ - ೨೩ ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಶಾಲೆಯ ಆವರಣದಲ್ಲಿ ನಡೆಯಿತು. ಶಾಲಾ ಟ್ರಸ್ಟೀ ರಕ್ಷಿತ್ ಅಯ್ಯಪ್ಪ, ಹಿರಿಯರಾದ ವಿ.ವಿ.ರತ್ನಮ್ಮ ಮತ್ತು ಶಿಕ್ಷಕಿ ಫೆಲ್ಸಿಟ ಕ್ಲಾಮಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶಾಲಾ ನಾಯಕನಾಗಿ ವಿ.ವಿ. ಸಂಕೇತ್, ನಾಯಕಿಯಾಗಿ ಟಿ. ಮೃಧುಲ್ಯ ಮಹೇಶ್, ಕ್ರೀಡಾ ನಾಯಕನಾಗಿ ದಿಗಂತ್.ಎಲ್. ಗೌಡ, ಸಹ ಕ್ರೀಡಾ ನಾಯಕಿಯಾಗಿ ಬಿ.ಕೆ. ಶ್ರಾವ್ಯ, ಸಾಂಸ್ಕೃತಿಕ ನಾಯಕಿಯಾಗಿ ಎಂ.ಎA. ಲಕ್ಷಿö್ಮಪ್ರಿಯ, ಶಿಸ್ತಿನ ನಾಯಕಿಯಾಗಿ ಜುಹೈನಾ ಅಮೀರ್, ನಾಕ್ಟಾ ತಂಡದ ನಾಯಕಿಯಾಗಿ ಎ.ಬಿ. ಅಶ್ವಿನಿ, ಉಪ ನಾಯಕನಾಗಿ ಸಿ.ಟಿ. ಧ್ರುವ ದೇವಯ್ಯ, ಫಿನಿಕ್ಸ್ ತಂಡದ ನಾಯಕಿಯಾಗಿ ಎಂ.ಡಿ.ಅAಜಲಿ, ಉಪ ನಾಯಕನಾಗಿ ಎ.ಎಸ್.ದೇವಯ್ಯ, ಪೆಗಾಸಸ್ ತಂಡದ ನಾಯಕಿಯಾಗಿ ಎಂ. ಸಿ. ಬೋಜಮ್ಮ, ಉಪ ನಾಯಕಿಯಾಗಿ ಕೆ.ರಕ್ಷಾ, ಅಕ್ವಿಲಾ ತಂಡದ ನಾಯಕಿಯಾಗಿ ಸಿ.ಲವಿನ ಮುತ್ತಪ್ಪ, ಉಪ ನಾಯಕಿಯಾಗಿ ಕೆ.ಎಸ್. ಲೀಶ ಆಯ್ಕೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಎಂ.ಎA.ತಾನ್ಯ ಸ್ವಾಗತಿಸಿದರೆ, ಅಲೀನ ಸೈಯದ್ ಅಲಿ ಪದಾಧಿಕಾರಿಗಳ ಪರಿಚಯ ಮಾಡಿದರು, ಆಸ್ಟಿನ್ ಟಿ ವಿಲ್ಸನ್ ಮತ್ತು ಸುವಿಕ್ಷ ನಿರೂಪಿಸಿ, ವಿ.ಜೆ.ಮಾಳವಿಕಾ ವಂದಿಸಿದರು.