ಮಡಿಕೇರಿ, ಜೂ.೨೭: ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ರಫೀಕ್ ಸುಂಟಿಕೊಪ್ಪ ಹಾಗೂ ಸಂಯೋಜಕರಾಗಿ ಜೆ.ಎಲ್.ಜನಾರ್ಧನ್ ಕೊಡ್ಲಿಪೇಟೆ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ರಮಾನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸದಸ್ಯರಾಗಿ ರಮಾನಾಥ್ ಕರಿಕೆ, ಸಂದೀಪ್ ಹಾರೆಹೊಸೂರು, ಇಂದ್ರೇಶ್ ಕೊಡ್ಲಿಪೇಟೆ, ಸಬಾಸ್ಟಿನ್, ನಾಗೇಶ್ ಪೂಜಾರಿ ಹಾಗೂ ಫಿರೋಜ್ ರೆಹಮಾನ್ ಆಯ್ಕೆಯಾಗಿದ್ದಾರೆ.

ಸಂಘದ ಕಾರ್ಯಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗದೇ ಇರುವುದರಿಂದ ನೂತನ ಜಿಲ್ಲಾ ಸಂಚಾಲಕರ ನೇಮಕದ ಬಗ್ಗೆ ಪ್ರಸ್ತಾಪಿಸಿದ ಅಧ್ಯಕ್ಷರು ಅಡಾಕ್ ಸಮಿತಿ ರಚಿಸುವುದು ಸೂಕ್ತವೆಂದು ಅಭಿಪ್ರಾಯಟ್ಟರು. ಈ ಹಿನ್ನೆಲೆ ನೂತನ ಸಮಿತಿಯನ್ನು ರಚಿಸಲಾಯಿತು.

ಸಧ್ಯದಲ್ಲೇ ರಫೀಕ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಪ್ರತಿ ತಾಲೂಕಿನಲ್ಲಿ ಎರಡು ಸಭೆಗಳನ್ನು ನಡೆಸಲು ಮತ್ತು ತಾಲೂಕು ಸಮಿತಿಗಳನ್ನು ರಚಿಸಲು ಸಭೆ ನಿರ್ಣಯ ಕೈಗೊಂಡಿತು.

ಪೂರ್ಣ ಪ್ರಮಾಣದ ಜಿಲ್ಲಾ ಸಮಿತಿಯನ್ನು ಆ.೧೫ ರೊಳಗೆ ಮರು ವಿಂಗಡಿಸಿ ಜಿಲ್ಲಾ ಮಟ್ಟದ ಸಮಾವೇಶವನ್ನು ಸಂಸ್ಥಾಪಕ, ಮಾರ್ಗದರ್ಶಕ ಸತೀಶ್ ಜಾರಕಿಹೊಳಿ ಅವರ ಉಪಸ್ಥಿತಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ವೀಕ್ಷಕರಾಗಿ ವಿಭಾಗೀಯ ಸಂಚಾಲಕ ಸತೀಶ್ ಕುಮಾರ್ ಉಪಸ್ಥಿತರಿದ್ದರು