ಜುಲೈ ೧೧ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ, ಜೂ. ೨೭: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದ ಶಿಂಧೆ ಬಣಕ್ಕೆ ಇಂದು ಸುಪ್ರೀಂ ಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಮಹಾರಾಷ್ಟç ವಿಧಾನಸಭೆ ಉಪಸಭಾಪತಿ ನರಹರಿ ಜಿರ್ವಾಲ್ ಅವರು ತಮಗೆ ಹಾಗೂ ೧೫ ಬಂಡಾಯ ಶಾಸಕರಿಗೆ ಕಳುಹಿಸಲಾದ ಅನರ್ಹತೆಯ ನೋಟಿಸ್ ವಿರುದ್ಧ ಶಿವಸೇನೆಯ ಬಂಡಾಯ ಸಚಿವ ಏಕನಾಥ್ ಶಿಂಧೆ ಭಾನುವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ಪೀಠವು ಅನರ್ಹತೆ ನೋಟೀಸ್‌ಗೆ ಉತ್ತರಿಸಲು ೧೬ ಅತೃಪ್ತ ಶಾಸಕರಿಗೆ ಉಪಸಭಾಪತಿ ನೀಡಿದ ಸಮಯವನ್ನು ಜುಲೈ ೧೧ ರವರೆಗೆ ವಿಸ್ತರಿಸಿದೆ. ಶಿಂಧೆ ಬಣದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜುಲೈ ೧೧ರಂದು ಮತ್ತೆ ವಿಚಾರಣೆ ನಡೆಸುತ್ತೇವೆ. ಏತನ್ಮಧ್ಯೆ, ಮಧ್ಯಂತರ ಕ್ರಮವಾಗಿ, ಅರ್ಜಿದಾರರು ಅಥವಾ ಇತರ ಶಾಸಕರು ತಮ್ಮ ಲಿಖಿತ ಮನವಿಯನ್ನು ಸಲ್ಲಿಸಲು ಉಪಸಭಾಪತಿಯವರು ಇಂದು ಸಂಜೆ ೫.೩೦ ರವರೆಗೆ ನೀಡಿದ್ದ ಸಮಯವನ್ನು ಜುಲೈ ೧೧ರ ಸಂಜೆ ೫.೩೦ ರವರೆಗೆ ವಿಸ್ತರಿಸಿದೆ. ಅನರ್ಹತೆ ನೋಟೀಸ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಬಾಳ ಠಾಕ್ರೆ ಮತ್ತು ಆನಂದ್ ದಿಘೆ ಅವರಿಗೆ ಸಂದ ಜಯವಾಗಿದೆ ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ಇದು ಹಿಂದುತ್ವ ಸಾಮ್ರಾಟ ಬಾಳಸಾಹೇಬ್ ಠಾಕ್ರೆ ಅವರ ಹಿಂದುತ್ವ ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಚಿಂತನೆಗೆ ಸಂದ ಗೆಲುವು ಎಂದಿದ್ದಾರೆ.

ತೀಸ್ತಾ ಸೆಟಲ್ವಡ್ ಬಂಧನ ವಿರೋಧಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ

ನವದೆಹಲಿ, ಜೂ. ೨೭: ಗುಜರಾತ್ ಭಯೋತ್ಪಾದನಾ ನಿಗ್ರಹ ದಳದಿಂದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಡ್ ಬಂಧನ ವಿರೋಧಿಸಿ ರಾಷ್ಟç ರಾಜಧಾನಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಸೆಟಲ್ವಡ್ ಅವರ ಬಂಧನ ಇತರ ಸಾಮಾಜಿಕ ಹೋರಾಟಗಾರರ ಧ್ವನಿಯನ್ನು ಅಡಗಿಸುವ ಪ್ರಯತ್ನ, ಪೂರ್ವ ಯೋಜಿತ ಸಂಚು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಜೈರಾಮ್ ರಮೇಶ್ ಹಾಗೂ ಅಜಯ್ ಮಾಕೆನ್ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜಂಥರ್ ಮಂತರ್‌ನಲ್ಲಿ ಜಮಾಯಿಸಿದ್ದ ಸುಮಾರು ೩೦೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಸೆಟಲ್ವಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್, ಸಂಜೀವ್ ಭಟ್ ಅವರ ಬಿಡುಗಡೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಕಾಂಗ್ರೆಸ್ ಪಕ್ಷ ಈ ಮೂವರನ್ನು ಬೆಂಬಲಿಸಲಿದ್ದು, ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಅಜಯ್ ಮಾಕನ್ ಹೇಳಿದರು. ಕೇಂದ್ರ ಸರ್ಕಾರ ದೇಶದಲ್ಲಿನ ಇತರ ಸಾಮಾಜಿಕ ಹೋರಾಟಗಾರರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ಸೆಟಲ್ವಡ್ ಅವರ ಬಂಧನ ಪೂರ್ವ ಯೋಜಿತ ಸಂಚು ಆಗಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ್ತಿ ಶಬ್ಮಾಮ್ ಹಸ್ಮಿ ಆಕ್ರೋಶ ವ್ಯಕ್ತಪಡಿಸಿದರು.

ಅಗ್ನಿಪಥ್ ಯೋಜನೆ : ಕೇವಲ ನಾಲ್ಕು ದಿನಗಳಲ್ಲಿ ೯೪,೦೦೦ ಅರ್ಜಿ!

ನವದೆಹಲಿ, ಜೂ. ೨೭: ಕೇಂದ್ರದ 'ಅಗ್ನಿಪಥ್' ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಭಾರತೀಯ ವಾಯುಪಡೆಗೆ (ಐಎಎಫ್) ೯೦,೦೦೦ ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜೂನ್ ೧೪ ರಂದು ಯೋಜನೆಗೆ ಚಾಲನೆಗೆ ನೀಡಿದ ನಂತರ ದೇಶದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಯೋಜನೆ ವಾಪಸ್ ಪಡೆಯುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಈ ಮಧ್ಯೆ ಇಂದು ಬೆಳಗ್ಗೆ ೧೦-೩೦ರವರೆಗೂ ಒಟ್ಟಾರೇ ೯೪,೨೮೧ ಅಗ್ನಿವೀರ್ ವಾಯು ಆಕಾಂಕ್ಷಿಗಳು ನೋಂದಾಯಿಸಿಕೊAಡಿದ್ದಾರೆ. ಜುಲೈ ೫ ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ನೂತನ ಸೇನಾ ನೇಮಕಾತಿ ಯೋಜನೆಯಡಿ ಹದಿನೇಳೂವರೆ ವರ್ಷದಿಂದ ೨೧ ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಆದರೆ, ಅವರಲ್ಲಿ ಶೇ.೨೫ ರಷ್ಟು ಮಂದಿಯನ್ನು ಮಾತ್ರ ಸೇನೆಯಲ್ಲಿ ಮುಂದುವರೆಸಲಾಗುತ್ತದೆ. ಜೂನ್ ೧೬ ರಂದು ಸರ್ಕಾರ ಯೋಜನೆಯಡಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು ೨೦೨೨ಕ್ಕೆ ೨೧ ರಿಂದ ೨೩ ವರ್ಷಗಳಿಗೆ ಹೆಚ್ಚಿಸಿತ್ತು. ತದನಂತರ ಕೇಂದ್ರ ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಅನ್ನಿವೀರ್‌ಗಳಿಗೆ ಆದ್ಯತೆಯಂತಹ ಕ್ರಮಗಳನ್ನು ಘೋಷಿಸಿತ್ತು.

ಮೂಸೆವಾಲಾ ಹತ್ಯೆ ಪ್ರಕರಣ: ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವಂತೆ ಅರ್ಜಿ

ನವದೆಹಲಿ, ಜೂ. ೨೭: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ತಂದೆ ಪಂಜಾಬ್ ಪೊಲೀಸರ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಜುಲೈ ೧೧ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಗಾಯಕನ ಹತ್ಯೆ ಪ್ರಕರಣದಲ್ಲಿ ಯಾವುದೇ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಸ್ಥಳೀಯ ವಕೀಲರ ಸಂಘ ನಿರ್ಧರಿಸಿದೆ. ಹೀಗಾಗಿ ಪಂಜಾಬ್‌ನ ಮಾನ್ಸಾ ನ್ಯಾಯಾಲಯದಲ್ಲಿ ದರೋಡೆಕೋರರ ಪರ ವಕೀಲರನ್ನು ಹುಡುಕಲಾಗುತ್ತಿಲ್ಲ ಎಂದು ಲಾರೆಲ್ಸ್ ತಂದೆ ಲವಿಂದರ್ ಬಿಷ್ಣೋಯ್ ಪರ ವಕೀಲ ಸಂಗ್ರಾಮ್ ಸಿಂಗ್ ಮನವಿಯಲ್ಲಿ ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯಿಯನ್ನು ಪಂಜಾಬ್‌ಗೆ ವರ್ಗಾಯಿಸಲು ಕಾರಣವಾದ ದೆಹಲಿ ನ್ಯಾಯಾಲಯ ಹೊರಡಿಸಿದ ಟ್ರಾನ್ಸಿಟ್ ರಿಮಾಂಡ್ ಅನ್ನು ಬಿಷ್ಣೋಯ್ ಅವರ ತಂದೆ ಪ್ರಶ್ನಿಸಿದ್ದಾರೆ. ಇನ್ನೊಂದು ಪ್ರಕರಣದ ಹಿಂದಿನ ತೀರ್ಪಿನಲ್ಲಿ ಲಾರೆನ್ಸ್ ಬಿಷ್ಣೋಯಿಯನ್ನು ಪಂಜಾಬ್‌ಗೆ ಕರೆದೊಯ್ಯಬಾರದು ಎಂಬ ಅಂಶವನ್ನು ಅರ್ಜಿದಾರರು ವಾದಿಸಿದ್ದಾರೆ. ಬಿಷ್ಣೋಯಿಯನ್ನು ರಾಷ್ಟç ರಾಜಧಾನಿಯಲ್ಲೂ ವಿಚಾರಣೆ ನಡೆಸಬಹುದು ಎಂದು ಅವರ ತಂದೆ ಹೇಳಿದ್ದಾರೆ. ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ಪೀಠವು, ಪಂಜಾಬ್‌ನಲ್ಲಿ ಕೊಲೆ ನಡೆದಾಗ, ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದರು. ಅರ್ಜಿದಾರರು ಕಾನೂನು ಸಹಾಯಕ್ಕಾಗಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ಅರ್ಜಿಯನ್ನು ಜುಲೈ ೧೧ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.

ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ದಾಖಲೆ ಪರಿಶೀಲಿಸುವಂತಿಲ್ಲ

ಬೆAಗಳೂರು, ಜೂ. ೨೭: ನಗರದಲ್ಲಿ ಕೇವಲ ದಾಖಲೆ ಪರಿಶೀಲನೆಗೆ ಇನ್ಮುಂದೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ನಿಲ್ಲಿಸಬಾರದು. ಕೇವಲ ಟ್ರಾಫಿಕ್ ರೂಲ್ಸ್ ಅನ್ನು ಉಲ್ಲಂಘಿಸಿದವರ ವಾಹನಗಳನ್ನು ಮಾತ್ರ ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸರಿಗೆ ಖುದ್ದು ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಸೂಚನೆ ಹೊರಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ನಗರದಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ರಸ್ತೆಯಲ್ಲಿ ಬರುವ ವಾಹನಗಳನ್ನು ಸುಖಾಸುಮ್ಮನೆ ತಡೆದು ವಾಹನಗಳ ಪರಿಶೀಲನೆ ನಡೆಸುವಂತಿಲ್ಲ. ‘ಡ್ರಿಂಕ್ ಆಂಡ್ ಡ್ರೆöÊವ್’ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ನಡೆಸಿ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡುವಂತಹ ವಾಹನಗಳನ್ನು ತಡೆದು ಪರಿಶೀಲಿಸಿ ಎಂದು ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಡಿಜಿಪಿ ಟ್ವೀಟ್ ಮಾಡಿದ್ದಾರೆ.