ಬೆಂಗಳೂರು, ಜೂ.೨೭: ಚಲನಚಿತ್ರ ನಟ ನಟಿಯರು ಕೋಟಿಗಟ್ಟಲೆ ರೂಪಾಯಿ ಸಂಭಾವನೆ ಪಡೆಯುವುದು ಹೊಸ ವಿಷಯವೇನೂ ಅಲ್ಲ. ಪ್ರಖ್ಯಾತ ನಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರೂ ತಮ್ಮ ಇತ್ತೀಚಿನ ತಮಿಳು ಚಿತ್ರ ಥಳಪತಿ ೬೬ (ಣhಚಿಟಚಿಠಿಚಿಣhi ೬೬) ಕ್ಕೆ ಬರೋಬ್ಬರಿ ೫ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಸಿನಿ ಮಾದ್ಯಮಗಳು ವರದಿ ಮಾಡಿದ್ದು ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದ ನಟಿಯರಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ. ಥಳಪತಿ ೬೬ ಚಿತ್ರ ಖ್ಯಾತ ತಮಿಳು ನಟ ವಿಜಯ್ ಅವರ ೬೬ನೇ ಚಿತ್ರವಾಗಿದ್ದು ಈ ಚಿತ್ರಕ್ಕೆ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ ೧೧೮ ಕೋಟಿ ಎನ್ನಲಾಗುತ್ತಿದೆ. ಈ ಚಿತ್ರ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ.
ದಕ್ಷಿಣದ ತಮಿಳು , ತೆಲುಗು, ಕನ್ನಡ, ಮಲಯಾಳಂ ಭಾಷೆಯ ಯಾವುದೇ ನಟಿ ಚಿತ್ರರಂಗದ ಇತಿಹಾಸದಲ್ಲೇ ಈವರೆಗೆ ೫ ಕೋಟಿ ರೂಪಾಯಿ ಸಂಭಾವನೆ ಪಡೆದಿಲ್ಲ. ತೆಲುಗು ಚಿತ್ರರಂಗದ ನಟಿ ಪೂಜಾ ಹೆಗಡೆ ಅವರು ಈವರೆಗೆ ಅತೀ ಹೆಚ್ಚು ಸಂಭಾವನೆ ಪಡೆಯುತಿದ್ದ ಹೆಗ್ಗಳಿಕೆ ಹೊಂದಿದ್ದರು. ೨೦೧೦ ಎ ಮಿಸ್ ಯೂನಿವರ್ಸ್ ಸ್ಪರ್ಧೆಯ ರನ್ನರ್ ಅಪ್ ಆಗಿದ್ದ ಇವರು ಪ್ರಸ್ತುತ ಚಿತ್ರವೊಂದಕ್ಕೆ ೩.೫ ಕೋಟಿ ರೂಪಾಯಿ ಸಂಭಾವನೆ ಪÀಡೆಯುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಸಮಂತಾ ಪ್ರಭು ಮತ್ತು ಅನುಷ್ಕಾ ಶೆಟ್ಟಿ ಅವರಿದ್ದು ಅವರು ೨ ರಿಂದ ೩ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ನಟಿ ದೀಪಿಕಾ ಪಡುಕೋಣೆ ೨೦೨೨ ರಲ್ಲಿ ಮೊದಲ ಸ್ಥಾನದಲ್ಲಿದ್ದು ಇವರು ಚಿತ್ರವೊಂದಕ್ಕೆ ೨೨ ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಆಲಿಯಾ ಭಟ್ ಇದ್ದು ಇವರಿಗೆ ಚಿತ್ರವೊಂದಕ್ಕೆ ೨೦ ಕೋಟಿ ರೂಪಾಯಿ ಮತ್ತು ಕಂಗನಾ ರಣಾವತ್ ಅವರಿಗೆ ಚಿತ್ರವೊಂದಕ್ಕೆ ೧೫ ಕೋಟಿ ರೂಪಾಯಿಗಳಷ್ಟು ಸಂಭಾವನೆ ಇದೆ. ಇನ್ನು ಬಾಲಿವುಡ್ನ ಹಿಂದಿ ನಟರ ಸಂಭಾವನೆ ಯಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್ಖಾನ್, ಶಾರುಕ್ಖಾನ್ ಇವರೆಲ್ಲ ಚಿತ್ರವೊಂದಕ್ಕೆ ನೂರು ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.
ರಶ್ಮಿಕಾ ಮತ್ತು ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಎರಡು ಬಾರಿ ರಶ್ಮಿಕಾ ಸಂಭಾವನೆ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. ಪುಷ್ಪಾ ಸಿನಿಮಾಗೆ ಇವರು ಪಡೆದಿದ್ದು ಎರಡು ಕೋಟಿ
(ಮೊದಲ ಪುಟದಿಂದ) ರೂಪಾಯಿಗಳ ಸಂಭಾವನೆ ಆಗಿದ್ದು ಪುಷ್ಪಾ ಸಿನಿಮಾದ ಎರಡನೇ ಭಾಗಕ್ಕೆ ೩ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ೫ ತಿಂಗಳ ಹಿಂದೆ ಫೋರ್ಬ್ಸ್ ಮ್ಯಾಗಜೀನ್ ರಶ್ಮಿಕಾ ಅವರನ್ನು ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ನಟಿ ಎಂದು ಗುರುತಿಸಿತ್ತು. ಇವರಿಗೆ ಇನ್ಸಾ÷್ಟಗ್ರಾಂನಲ್ಲಿ ೨೨ ಮಿಲಿಯನ್ಗಿಂತಲೂ ಹೆಚ್ಚು ಫಾಲೋರ್ಸ್ ಇದ್ದಾರೆ. ಪುಷ್ಪಾ ಸಿನಿಮಾದ ಯಶಸ್ಸಿನ ನಂತರ ಇವರು ತೆಲುಗಿನ ಜನರಿಗೆ ಹತ್ತಿರವಾಗಿದ್ದು ಇಂದು ಅತ್ಯಂತ ಬಿಜಿ ನಟಿ ಆಗಿದ್ದಾರೆ. ದಕ್ಷಿಣದಲ್ಲೇ ಅಲ್ಲದೆ ಉತ್ತರ ಭಾರತದಲ್ಲೂ ಇವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಕೊಡಗು ಮೂಲದ ಈ ಯುವ ನಟಿಯ ಸಾಧನೆ ಪ್ರಶಂಶನೀಯ.
- ಕೋವರ್ಕೊಲ್ಲಿ ಇಂದ್ರೇಶ್