ಚೆಯ್ಯಂಡಾಣೆ, ಜೂ. ೨೭: ಆಲ್ ಇಂಡಿಯನ್ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವೀರಾಜಪೇಟೆ ತಾಲೂಕು ಹಾಗೂ ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿ ಕಡಂಗ ಇವರ ಜಂಟಿ ಆಶ್ರಯದಲ್ಲಿ ಅಲ್ ಅನ್ಸಾರ್ ಆಸ್ಪತ್ರೆ ಮೈಸೂರು ಇದರ ಸಹಯೋಗ ದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾಂಗಣದಲ್ಲಿ ಶಿಬಿರವು ಅಲ್ ಇಂಡಿಯ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವೀರಾಜಪೇಟೆ ತಾಲೂಕು ಅಧ್ಯಕ್ಷ ಫತಾಯಿ ಸಿ.ಎ. ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಉದ್ಘಾಟಿಸಿ ಎರಡು ಸಂಘಟನೆ ಹಾಗೂ ಅಲ್ ಅನ್ಸಾರ್ ಆಸ್ಪತ್ರೆಯ ಕಾರ್ಯವೈಖರಿಗಳನ್ನು ಶ್ಲಾಘಿಸಿ ಬಡಜನರು ಪಟ್ಟಣಕ್ಕೆ ತೆರಳಿ ಆರೋಗ್ಯ ಕೇಂದ್ರಗಳಿಗೆ ಅಲೆಯುವು ದನ್ನು ತಪ್ಪಿಸುವಂತೆ ಮಾಡಿ ಜನೋಪಯೋಗಿ ಕಾರ್ಯಕ್ರಮವನ್ನು ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫಾರಂ ರಾಷ್ಟಿçÃಯ ಕಾರ್ಯಾಧ್ಯಕ್ಷ ಅಬೂಬಕರ್ ಸಜಿಪ ಮಾತನಾಡಿ ಆಲ್ ಇಂಡಿಯಾ ಡೆವಲಪ್ಮೆಂಟ್ ಫೋರಂನ ಕಾರ್ಯ ವೈಖರಿಗಳನ್ನು ಸವಿಸ್ತಾರವಾಗಿ ಸಾರ್ವಜನಿಕರಿಗೆ ವಿವರಿಸಿದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸನ್ನ ತಮ್ಮಯ್ಯ ಮಾತನಾಡಿ ಆಲ್ ಇಂಡಿಯನ್ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಹಾಗೂ ಕೆಡಿಎಸ್ ಚಾರಿಟಿಯು ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮೆಹಬೂಬ್ ಸಾಬ್ ನಾಪೋಕ್ಲು ಮಾತನಾಡಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶಾಂತಿ ಮಾತನಾಡಿ ಈ ಮಟ್ಟದ ವೈದ್ಯಕೀಯ ತಪಾಸಣೆ ನಡೆಸುವುದರಿಂದ ಬಡ ಹಾಗೂ ಹಿಂದುಳಿದ ವರ್ಗಗಳಿಗೆ ಉಪಕಾರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ೩೦೦ ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ವೈದ್ಯಕೀಯ ತಪಾಸಣ ಶಿಬಿರ ನಡೆಸಲಾಯಿತು ಹಾಗೂ ಉಚಿತವಾಗಿ ಮಾತ್ರೆ ಹಾಗೂ ಔಷಧಿ ಗಳನ್ನು ಕೂಡ ಸಂಘಟನೆಯ ವತಿಯಿಂದ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಾಮಾಜಿಕ, ರಾಜ್ಯಕೀಯ ನೇತಾರರು ಭಾಗವಹಿಸಿ ದ್ದರು. ಎಐಎಂಡಿಎಫ್ ಹಾಗೂ ಕೆಡಿಎಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾಗತವನ್ನು ಕೆಡಿಎಸ್ ಚಾರಿಟಿ ಕಾರ್ಯದರ್ಶಿ ಆಶಿಕ್ ಸಿ.ಎಂ. ಹಾಗೂ ವಂದನೆ ಯನ್ನು ಎಐಎಂಡಿಎಫ್ ನಾ ಕೋಶಾಧಿಕಾರಿ ಅಶ್ರಫ್ ಸಿ.ಎ. ನಡೆಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಎಐಎಂಡಿಎಫ್ ಕಾರ್ಯದರ್ಶಿ ಅಬ್ದುಲ್ ಮಜೀದ್ ಚೊಕ್ಕಂಡಳ್ಳಿ ಸವಿಸ್ತಾರವಾಗಿ ನೆರವೇರಿಸಿದರು.