ಮಡಿಕೇರಿ, ಜೂ.೨೭: ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ವತಿಯಿಂದ ಜಿಲ್ಲೆಯ ೧೫ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸುವ ಕಾರ್ಯಕ್ರಮವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು. ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕÀ ಚಂದ್ರಶೇಖರ್ ಅವರು ಅರ್ಜಿ ಸಲ್ಲಿಸಿದ ೧೫ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

೨೦೨೧-೨೨ ನೇ ಸಾಲಿನ ಕ್ರಿಯಾ ಯೋಜನೆಯು ಸರ್ಕಾರದಿಂದ ಅನುಮೋದನೆಗೊಂಡಿದೆ. ಆ ನಿಟ್ಟಿನಲ್ಲಿ ಅರ್ಹರಿಗೆ ೮ ನೇ ತರಗತಿಯಿಂದ ಪಿಯುಸಿ, ಐಟಿಐ, ಡಿಪ್ಲೋಮಾ, ಎಂಜಿನಿಯರಿAಗ್, ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಗುತ್ತಿದೆ ಎಂದರು. ನಿಗಮದ ಏಜಾಸ್ ಬಾನು ಇದ್ದರು.

ಟ್ಯಾಬ್ ಪಡೆದ ವಿದ್ಯಾರ್ಥಿಗಳ ವಿವರ ಇಂತಿದೆ. ಮಡಿಕೇರಿ ತಾಲ್ಲೂಕಿನ ರಿಫಾತ್ ಬಾನು, ರಿಲ್ವಾನ್, ಸೋಮವಾರಪೇಟೆ ತಾಲ್ಲೂಕಿನ ಗುಣಶೇಖರ್, ಭೂಮಿಕಾ, ಅನಿತಾ, ಕುಮಾರಸ್ವಾಮಿ, ಉಷಾ, ನಿತಿನ್, ನೂತನ್, ಭರತ್, ವೀರಾಜಪೇಟೆ ತಾಲೂಕಿನ ವಿಕಾಸ್, ಪ್ರೀತಮ್, ರಶ್ಮಿತ, ಸ್ವಾತಿ ಮತ್ತು ಸ್ಪೂರ್ತಿ.