ಸೋಮವಾರಪೇಟೆ,ಜೂ.೨೭ : ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಕುಶಾಲನಗರ ನಾಡಕಚೇರಿಯ ಗ್ರಾಮ ಸಹಾಯಕರಾಗಿದ್ದ ವೆಂಕಟೇಶ್ ಅವರಿಗೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಮೂಲಕ ಧನ ಸಹಾಯ ವಿತರಿಸಲಾಯಿತು.

ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರ ಮೂಲಕ ವೆಂಕಟೇಶ್ ಅವರ ಚಿಕಿತ್ಸೆಗಾಗಿ ಅವರ ಪುತ್ರನಿಗೆ ೯ ಸಾವಿರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸುರೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.