ವೀರಾಜಪೇಟೆ, ಜೂ. ೨೬: ಪ್ರತಿಯೊಬ್ಬರ ಬದುಕಿನ ಮೊದಲ ನಾಯಕ ಅವರ ತಂದೆಯೇ ಆಗಿರುತ್ತಾರೆ. ಕುಟುಂಬಕ್ಕಾಗಿ ತಂದೆ ಸಾಕಷ್ಟು ಶ್ರಮಿಸುತ್ತಾರೆ ಎಂದು ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಪೂವಮ್ಮ ಹೇಳಿದರು.
ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪೂವಮ್ಮ ಅವರು, ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಹೆತ್ತವರು ಮಕ್ಕಳ ಪಾಲಿನ ದೇವರು. ಮಕ್ಕಳ ಏಳಿಗೆಗಾಗಿ ಶ್ರಮಿಸುವ, ಭವ್ಯ ಭವಿಷ್ಯದ ಕನಸು ಕಾಣುವ, ನಿಸ್ವಾರ್ಥ ಪ್ರೀತಿಯನ್ನು ನೀಡುವವರು ಹೆತ್ತವರು. ಇವರ ನಿಸ್ವಾರ್ಥ ಪ್ರೀತಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಆದರೆ ದುರಂತವೆAದರೆ ಇಂದಿನ ಕಾಲದಲ್ಲಿ ಗಂಡು ಮಕ್ಕಳು ಬೆಳೆಯುತ್ತಾ, ಬೆಳೆಯುತ್ತಾ ತಮ್ಮ ತಂದೆಯಿAದ ದೂರವಾಗುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ತಮ್ಮ ತಂದೆಯನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಪ್ರೀತಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.