ಸೋಮವಾರಪೇಟೆ, ಜೂ. ೨೫: ಶತಮಾನೋತ್ಸವ ಸಂಭ್ರಮ ಆಚರಿಸಿ ಕೊಂಡಿರುವ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ ರೂ. ೧.೨೧ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದ ಅವರು, ಸಂಘದಲ್ಲಿ ೬,೬೪೩ ಲಕ್ಷ ದುಡಿಯುವ ಬಂಡವಾಳವಿದ್ದು, ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಎ ಶ್ರೇಣಿ ಪಡೆದುಕೊಂಡಿದೆ. ಸಂಘದ ಸದಸ್ಯರಿಗೆ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸ ಲಾಗಿದೆ ಎಂದರು.
ಸAಘದ ಒಟ್ಟು ವ್ಯವಹಾರ ೩೪೧.೮೨ ಕೋಟಿಯಾಗಿದ್ದು, ೪೬೩೦ ಮಂದಿ ಸದಸ್ಯರಿದ್ದಾರೆ. ಗ್ರಾಹಕರಿಗೆ ಒಟ್ಟು ೪೪೪೨.೦೯ಲಕ್ಷ ಸಾಲ ವಿತರಿಸಲಾಗಿದೆ. ೨೮೫೯.೨೪ ಲಕ್ಷ ಠೇವಣಿಯಿದೆ. ಸಂಘದಲ್ಲಿ ೨೫ ಸಾವಿರ ಮರಣ ನಿಧಿ ಯೋಜನೆಯು ಜಾರಿಯಲ್ಲಿದ್ದು, ೨೦೨೧-೨೨ನೇ ಸಾಲಿನಲ್ಲಿ ೫೩ ಮಂದಿಗೆ ೮,೭೧,೪೧೮ ರೂಪಾಯಿ ಮರಣ ನಿಧಿ ವಿತರಿಸಲಾಗಿದೆ. ಜಾಮೀನು ಸಾಲದ ವಿಮಾ ಯೋಜನೆಯೂ ಇದ್ದು, ಒಟ್ಟಾರೆ ಸಾಲ ಮರುಪಾವತಿಯು ಶೇ. ೯೭.೪೭ರಷ್ಟಿದೆ ಎಂದು ಮಾಹಿತಿಯಿತ್ತರು.
ಸ್ವಸಹಾಯ ಗುಂಪುಗಳ ಯೋಜನೆಯನ್ನೂ ಸಂಘದ ಮೂಲಕ ಜಾರಿಗೆ ತರಲಾಗಿದೆ. ೮ ಗುಂಪುಗಳಿಗೆ ಈವರೆಗೆ ೩೭.೨೦ ಲಕ್ಷ ಸಾಲ ನೀಡಲಾಗಿದೆ. ಜಂಟಿ ಬಾಧ್ಯತಾ ಗುಂಪುಗಳ ಯೋಜನೆ ಮೂಲಕ ೫೬ ಗುಂಪುಗಳಿಗೆ ಸಾಲ ನೀಡಲಾಗಿದೆ. ೮೫.೬೧ ಲಕ್ಷ ಹೊರ ಬಾಕಿಯಿದೆ. ಸದಸ್ಯರಿಗೆ ವೈಯುಕ್ತಿಕ ಅಪಘಾತ ವಿಮೆ ಯೋಜನೆ ಚಾಲ್ತಿಯಲ್ಲಿದೆ. ಜಾಮೀನು ಸಾಲ ಮತ್ತು ಪಿಗ್ಮಿ ಓವರ್ ಡ್ರಾಫ್ಟ್ ಸಾಲಗಳಿಗೂ ವಿಮಾ ಸೌಲಭ್ಯವಿದೆ ಎಂದರು.
ಸದಸ್ಯರ ಗರಿಷ್ಠ ಸಾಲದ ಮಿತಿಯನ್ನು ೪೦ ರಿಂದ ೬೦ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಲ್ಯಾಪ್ಟಾಪ್ ಸಾಲ ನೀಡ ಲಾಗುತ್ತಿದೆ. ಕೃಷಿ ಯಂತ್ರೋಪಕರಣ ಸಾಲ, ಎಲೆಕ್ಟಿçಕ್ ವಾಹನ ಸಾಲ ನೀಡುತ್ತಿದ್ದು, ಹೊಸದಾಗಿ ವ್ಯಾಪಾರ ಓ.ಡಿ. ಸಾಲವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷ ಸಂಘದ ಶತಮಾನೋತ್ಸವ ಸಮಾರಂಭವನ್ನು ಆಚರಿಸಲಾಗಿದ್ದು, ಸದಸ್ಯರಿಗೆ ತಲಾ ೧೦ ಗ್ರಾಂ ಬೆಳ್ಳಿ ನಾಣ್ಯ ವಿತರಿಸಲಾಗಿದೆ. ತಾ. ೨೬ ರಂದು (ಇಂದು) ಪೂರ್ವಾಹ್ನ ೧೦ ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರುಗಳಿಗೆ ಶೇ.೨೨ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೆಚ್.ಕೆ. ಮಾದಪ್ಪ ಹೇಳಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ, ಕೆ.ಕೆ. ಚಂದ್ರಿಕಾ ಅವರುಗಳು ಉಪಸ್ಥಿತರಿದ್ದರು.