ನಾಪೋಕ್ಲು, ಜೂ. ೨೫: ಸಮೀಪದ ಯವಕಪಾಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸು ವಂತಾಗಿದೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.
ಗ್ರಾಮದ ಕೇಟೋಳಿರ ಮಾಚಯ್ಯ ಎಂಬವರ ಮನೆಯ ಹಿತ್ತಲಲ್ಲಿ ಕಾಡಾನೆಗಳು ಬಾಳೆ, ತೆಂಗು, ಅಡಿಕೆ ಗಿಡಗಳನ್ನು ನಾಶ ಮಾಡಿವೆ. ಕೇಟೋಳಿರ ಮಾಚಯ್ಯ ಮನೆಯಲ್ಲಿ ಒಬ್ಬರೆ ವಾಸವಾಗಿದ್ದು ಕಾಡಾನೆಗಳ ಉಪಟಳದಿಂದ ಭಯಭೀತ ರಾಗಿದ್ದಾರೆ. ರಾತ್ರಿ ತೋಟಗಳಲ್ಲಿ ಅಡ್ಡಾಡಿದ ಕಾಡಾನೆಗಳು ಕಾಫಿ, ತೆಂಗು, ಮತ್ತಿತರ ಬೆಳೆಗಳನ್ನು ನಾಶಪಡಿಸಿದ್ದು ನಷ್ಟ ಉಂಟುಮಾಡಿದೆ. ಬೆಳಗ್ಗಿನ ಜಾವ ಮನೆಯಂಗಳದಲ್ಲಿ ಆನೆಗಳು ಇದ್ದುದನ್ನು ಕಂಡು ಭಯಭೀತನಾಗಿದ್ದೇನೆ ಎಂದು ಅವರು ಹೇಳುತ್ತಾರೆ. ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ತೋಟಗಳಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆಯೂ ಹಾಗೂ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಮಾಚಯ್ಯ ಒತ್ತಾಯಿಸಿದ್ದಾರೆ.