ವೀರಾಜಪೇಟೆ,ಜೂ.೨೬: ಇಲ್ಲಿನ ಕೊಡವ ಸಮಾಜದ ೨೦೨೨-೨೫ ರ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕುಂಬೇರ ಮನು ಕುಮಾರ್ ಆಯ್ಕೆಯಾದರು.
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಕುಂಬೇರ ಮನುಕುಮಾರ್ (೩೭೯) ಜಯಸಾಧಿಸಿದರು. ಅಮ್ಮುಣಿಚಂಡ ಉತ್ತಪ್ಪ (೩೬೪) ಚಂಬಾAಡ ಕರುಣ್ ಕಾಳಯ್ಯ (೨೬೦) ಮತ ಗಳಿಸಿ ಪರಾಭವಗೊಂಡರು.
ಉಪಾಧ್ಯಕ್ಷರಾಗಿ ಕುಯಿಮಂಡ ಕಿರಣ್, ಗೌರವ ಕಾರ್ಯದರ್ಶಿಯಾಗಿ ಮಾಳೇಟಿರ ಶ್ರೀನಿವಾಸ್ (೬೦೧) ಮರಣ ನಿಧಿ ಕಾರ್ಯದರ್ಶಿಯಾಗಿ ಮಾದೇಯಂಡ ಸಂಪಿ ಪೂಣಚ್ಚ, (೮೪೧) ಆಟೋಟ ಕಾರ್ಯದರ್ಶಿಯಾಗಿ ಅಮ್ಮಣಿಚಂಡ ರತ್ನ ಸುಬ್ರಮಣಿ (೫೧೯) ನಿರ್ದೇಶಕರಾಗಿ, ಬಾಚಿರ ಜಗದೀಶ್, ಕೂತಂಡ ಸಚಿನ್, ಪಟ್ಟಡ ರಾಮಚಂದ್ರ, ಅಂಜಪರವAಡ ಅನಿಲ್ , ಪುಲಿಯಂಡ ಪೊನ್ನಣ್ಣ, ಚೇಮಿರ ಅರ್ಜುನ್, ತಾತಂಡ ಕಬೀರ್, ಚೋಕಂಡ ಪುಷ್ಪಾವತಿ, ಮೇರಿಯಂಡ ಗಾಯತ್ರಿ(೬೮೧) ಮುಲ್ಲೇಂಗಡ ಶೀಲಾ ಅಪ್ಪಯ್ಯ (೫೭೬) ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಮಂಡೇಪAಡ ದಿನೇಶ್ ಕಾರ್ಯನಿರ್ವಹಿಸಿದರು. ೨೨೪೯ ಸದಸ್ಯರಲ್ಲಿ ೧೦೬೫ ಸದಸ್ಯರು ಮತ ಚಲಾಯಿಸಿದರು.