ವೀರಾಜಪೇಟೆ, ಜೂ. ೨೪ : ವೆಬ್‌ಸೀರೀಸ್‌ನಲ್ಲಿ ಬರುವ ಚಲನಚಿತ್ರಗಳನ್ನು ವೀಕ್ಷಿಸಿ ತಂತ್ರಗಳನ್ನು ಅರಿತು ತುತ್ತು ನೀಡುವ ಸಂಸ್ಥೆಯಲ್ಲಿ ನಗದು ಅಪಹರಿಸಿ ಬಂಧನವಾದ ಘಟನೆ ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮದ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್ (೨೦) ಮತ್ತು ಸೆಬಾಸ್ಟಿನ್ ಡಿಸೋಜಾ (೨೦) ವರ್ಷ ಬಂಧಿತ ಆರೋಪಿಗಳು.

ಘಟನೆಯ ವಿವರ: ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಇನ್ಫಾಕಾರ್ಟ್ ಸರ್ವಿಸಸ್ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ತಾ. ೧೨ ರಂದು ರಾತ್ರಿ ನಡೆದ ನಗದು ಕಳ್ಳತನ ಪ್ರಕರಣದ ಈರ್ವರು ಆರೋಪಿಗಳು ಯುವಕರಾಗಿದ್ದು, ಬಡ ಕುಟುಂಬದಿAದ ಬಂದಿರುವವ ರಾಗಿದ್ದಾರೆ. ಡೆಲಿವರಿ ಬಾಯ್ಸ್ಗಳಾಗಿ ಪ್ರಸ್ತುತ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

(ಮೊದಲ ಪುಟದಿಂದ) ಮೊದಲಿಗೆ ಸೆಬಾಸ್ಟಿನ್ ಕೆಲಸ ಗಿಟ್ಟಿಸಿಕೊಂಡು ಸೇವೆಯಲ್ಲಿ ಮುಂದುವರೆಯುತ್ತಾನೆ. ನಂತರದಲ್ಲಿ ಸ್ನೇಹಿತನಾದ ಸಿವಿನ್ ಕೆಲಸಕ್ಕೆ ಸೇರ್ಪಡೆಯಾಗುತ್ತಾನೆ. ಒಂದೇ ಊರಿನವರಾದ ಈರ್ವರು ಸೇವೆಯಲ್ಲಿ ಮುಂದುವರೆಯುತ್ತಾರೆ. ಸಿವಿನ್‌ಗೆ ಮೊಬೈಲ್‌ನಲ್ಲಿ ಬರುವ ಮನಿ ಹ್ಯಾಕ್ ವೆಬ್ ಸೀರೀಸ್ ನೋಡುವ ಹುಚ್ಚು ತಲೆಗೇರುತ್ತದೆ. ಸೀರೀಸ್‌ನಿಂದ ಪ್ರಭಾವಿತನಾದ ಸಿವಿನ್ ತನ್ನ ಮಿತ್ರನಿಗೂ ತಿಳಿಸಿಕೊಡುತ್ತಾನೆ. ನಂತರದಲ್ಲಿ ಯೋಜನೆ ಸಿದ್ಧವಾಗುತ್ತದೆ. ದಿನನಿತ್ಯ ಸಂಸ್ಥೆಗೆ ಲಕ್ಷದ ವ್ಯವಹಾರ ನಡೆಯುತ್ತಿದೆ. ಹೇಗಾದರೂ ಮಾಡಿ ಹಣ ಲಪಟಾಯಿಸಬೇಕು ಎಂಬುದು ಈರ್ವರ ವಿವೇಚನೆಗೆ ಬರುತ್ತದೆ.

ತಾ. ೧೨ ರ ರಾತ್ರಿ ಭಾನುವಾರ ದಿನವಾಗಿರುವುದರಿಂದ ಬ್ಯಾಂಕ್ ರಜೆಯಾಗಿತ್ತು. ಶನಿವಾರದ ಹಣ ಮತ್ತು ಭಾನುವಾರದ ಹಣವನ್ನು ಬ್ಯಾಂಕ್‌ಗೆ ಸಂದಾಯ ಮಾಡಲು ಅಸಾಧ್ಯವಾಗಿತ್ತು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿ ಅಂಬಿಕ ಅವರು ಒಟ್ಟು ರೂ. ೧,೦೨,೩೬೨ ಹಣವನ್ನು ನಗದು ಪೆಟ್ಟಿಗೆಯಲ್ಲಿರಿಸಿ ಸಂಸ್ಥೆಯ ವ್ಯವಸ್ಥಾಪಕರಿಗೆ ಹೇಳಿ ಸಂಜೆ ವೇಳೆಗೆ ಹಿಂದಿರುಗಿದರು. ಸಂಸ್ಥೆಯ ಗುಮಾಸ್ತ ಕಚೇರಿಗೆ ಬೀಗ ಹಾಕಿ ಹಿಂದಿರುಗಿದರು.

ಈ ವೇಳೆಯಲ್ಲಿ ಯಾರಿಗೂ ಸಂಶಯಬಾರದ ರೀತಿಯಲ್ಲಿ ಸ್ನೇಹಿತರು ಈರ್ವರು ನೆಲ್ಲಿಹುದಿಕೇರಿಯಲ್ಲಿ ಕೈಗವಸು ಖರೀದಿ ಮಾಡಿ ನಗರದ ಅಂಗಡಿಯೊAದರಲ್ಲಿ ರೈನ್‌ಕೋಟ್ ಮತ್ತು ಮಾಂಸ ಮಾರುಕಟ್ಟೆಯ ಅಂಗಡಿಯೊAದರಲ್ಲಿ ಸ್ಪೆçÃಯೊಂದು ಖರೀದಿಸಿ ಸ್ಥಳಕ್ಕೆ ಆಗಮಿಸುತ್ತಾರೆ. ರಾತ್ರಿ ಸುಮಾರು ೧೨ ರಿಂದ ೧ ರ ಸಮಯದಲ್ಲಿ ಕಚೇರಿಯ ಬೀಗವನ್ನು ಒಡೆದು ಒಳನುಗ್ಗಿ ಸಿ.ಸಿ ಕ್ಯಾಮರಾಗೆ ಸ್ಪೆçà ಮಾಡಿ ಕೃತ್ಯ ಎಸಗುವುದನ್ನು ಮರೆಮಾಚುತ್ತಾರೆ. ಮುಖ ಮತ್ತು ಕೈ ರೇಖೆಗಳು ಅಚ್ಚು ದೊರಕದ ರೀತಿಯಲ್ಲಿ ಗ್ಲೌಸ್ ಮತ್ತು ಮುಖ ಮರೆಮಾಚಿಕೊಂಡು ಲಾಕರ್ ಒಡೆಯುತ್ತಾರೆ. ಹಣವನ್ನು ದೋಚಿ ಪರಾರಿಯಾಗುತ್ತಾರೆ. ತಾ. ೧೩ ರ ಬೆಳಿಗ್ಗೆ ಕಚೇರಿಯ ಗುಮಾಸ್ತ ಅನೀಶ್ ಕಚೇರಿಗೆ ಆಗಮಿಸಿದ ವೇಳೆ ಬೀಗ ಒಡೆದಿರುವುದು ಗೋಚರಿಸಿದೆ. ತಕ್ಷಣವೇ ಸಂಸ್ಥೆಯ ಉದ್ಯೋಗಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಂಬಿಕ ಅವರು ಕಚೇರಿಗೆ ಬಂದು ನೋಡಿದಲ್ಲಿ ನಗದು ಬಾಕ್ಸ್ನಲ್ಲಿರಿಸಲಾದ ಹಣ ಮಾಯವಾಗಿದೆ. ವ್ಯವಸ್ಥಾಪಕ ಸುದರ್ಶನ್ ಶೆಟ್ಟಿ ಅವರು ವೀರಾಜಪೇಟೆ ನಗರ ಠಾಣೆಯಲ್ಲಿ ನಗದು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸುತ್ತಾರೆ. ಸಂಸ್ಥೆಯ ಕಚೇರಿಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಾರೆ. ತನಿಖೆಯನ್ನು ಕೈಗೊಂಡ ಪೊಲೀಸರು ಎಲ್ಲಾ ವಿಭಾಗಗಳಲ್ಲಿ ಪರಿಶೀಲನೆಗೆ ಮುಂದಾಗುತ್ತಾರೆ. ಸಿ.ಸಿ ಕ್ಯಾಮರಾ ಫೂಟೇಜ್ ಮತ್ತು ಆರೋಪಿಗಳ ಚಲನವಲನಗಳನ್ನು ಗ್ರಹಿಸಿದ ಪೊಲೀಸರು ದಿನಾಂಕ ತಾ. ೨೩ರಂದು ರಾತ್ರಿ ಅಮ್ಮತ್ತಿ ಕಾವಾಡಿ ರಸ್ತೆಯಲ್ಲಿ ಬೈಕ್‌ನಲ್ಲಿ ( ಕೆಎ-೧೨ಯು-೯೦೮೩) ವೀರಾಜಪೇಟೆ ನಗರಕ್ಕೆ ಆಗಮಿಸುತ್ತಿದ್ದ ವೇಳೆಯಲ್ಲಿ ಸಂಶಯದಿAದ ಈರ್ವರನ್ನು ಬಂಧಿಸಿ ತನಿಖೆಗೆ ಒಳಪಡಿಸುತ್ತಾರೆ.

ವಿಚಾರಣೆ ಸಂದರ್ಭ

ಪ್ರಸ್ತುತ ಸಂಸ್ಥೆಯಲ್ಲಿ ಡೆಲಿವರಿ ಬಾಯ್‌ಗಳಾಗಿ ಕೆಲಸದಲ್ಲಿದ್ದೆವು. ತಾ. ೧೨ ರ ರಾತ್ರಿ ಕಚೇರಿಯಿಂದ ನಗದು ಕಳ್ಳತನ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ತನಿಖೆ ವೇಳೆಯಲ್ಲಿ ಸಿವಿನ್ ಕಿಸೆಯಲ್ಲಿರಿಸಿದ್ದ ೮೦೦೦ ರೂ. ನಗದು ಮತ್ತು ಸೆಬಾಸ್ಟಿನ್ ಬಳಿ ೪,೦೦೦ ರೂ. ನಗದು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಯಾರಿಗೂ ಸಂಶಯಬಾರದ ರೀತಿಯಲ್ಲಿ ಸಿವಿನ್ ಮನೆಗೆ ಹೊಂದಿಕೊAಡಿರುವ ಕಾಫಿ ತೋಟದ ಬಾಳೆಗಿಡ ಪೊದೆಯಲ್ಲಿ ಪಿವಿಸಿ ಪೈಪ್‌ನಲ್ಲಿ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಇರಿಸಲಾಗಿದ್ದ ಹಣ ರೂ. ೭೦,೦೦೦ ನಗದು ಸೇರಿದಂತೆ ಒಟ್ಟು ೮೨,೦೦೦ ರೂ. ನಗದು ವಶಕ್ಕೆ ಪಡೆದಿದ್ದಾರೆ. ಉಳಿದ ಹಣವನ್ನು ಮೋಜಿಗಾಗಿ ವ್ಯಯ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮೋಟಾರ್ ಬೈಕ್ ಇದೀಗ ಪೊಲೀಸರ ವಶದಲ್ಲಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ಈರ್ವರು ಆರೋಪಿಗಳ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ ೪೫೭, ೩೮೦ ಐ.ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡುವAತೆ ಆದೇಶ ಮಾಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮತ್ತು ವೀರಾಜಪೇಟೆ ಉಪ ವಿಭಾಗ ಅಧೀಕ್ಷಕ ನಿರಂಜನ್‌ರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರÀ್ರ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ನಗರ ಠಾಣಾಧಿಕಾರಿಗಳಾದ ಸಿ.ವಿ. ಶ್ರೀಧರ್, ಎಎಸ್‌ಐ ಎಂ.ಎA. ಮೊಹಮ್ಮದ್, ಸುಬ್ರಮಣಿ, ಗಿರೀಶ್, ರಜನ್‌ಕುಮಾರ್, ಧರ್ಮ, ಗೀತಾ, ಮಧು, ಕಿರಣ್, ಮಹಂತೇಶ್ ಪೂಜಾರಿ, ಸಂತೋಷ್ ಮತ್ತು ಚಾಲಕ ರಮೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ಕಿಶೋರ್ ಕುಮಾರ್ ಶೆಟ್ಟಿ