ಕಣಿವೆ, ಜೂ. ೨೪ : ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದಿಸೆಯಿಂದ ಇದೇ ಮೊದಲ ಬಾರಿಗೆ ಕುಶಾಲನಗರದ ಸರಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಜೆಇಇ ಪರೀಕ್ಷಾ ಘಟಕವನ್ನು ಆರಂಭಿಸಲಾಗಿದೆ.

ಕಾಲೇಜಿನ ಪ್ರಾಂಶುಪಾಲ ಡಾ.ಸೀನಪ್ಪ ಅವರ ಪರಿಶ್ರಮದ ಫಲವಾಗಿ ಕಾಲೇಜಿನ ಮೂರು ಪ್ರತ್ಯೇಕ ಕೊಠಡಿಗಳನ್ನು ಜೆಇಇ ಪರೀಕ್ಷೆಗೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಅಂದರೆ ಮೊದಲ ಹಂತದಲ್ಲಿ ನಡೆಯುತ್ತಿರುವ ಜೆಇಇ ಪರೀಕ್ಷೆ ತಾ.೨೩ ರಿಂದ ೨೯ ರವರೆಗೆ ನಡೆಯಲಿದೆ. ಜುಲೈನಲ್ಲಿ ಎರಡನೇ ಹಂತದ ಪರೀಕ್ಷೆ ನಡೆಯಲಿದೆ.

ದೇಶದಲ್ಲಿರುವ ೧೦ ಉತ್ಕೃಷ್ಟ ಮಟ್ಟದ ಇಂಜಿನಿಯರಿAಗ್ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲು ಇಂತಹ ರಾಷ್ಟಿçÃಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಇದುವರೆಗು ಈ ಜೆಇಇ, ನೀಟ್ ಮೊದಲಾದ ರಾಷ್ಟಿçÃಯ ಅರ್ಹತಾ ಪರೀಕ್ಷೆಗಳನ್ನು ಬರೆಯಲು ದೂರದ ಮೈಸೂರು ಹಾಗೂ ಮಂಗಳೂರು ನಗರಗಳಿಗೆ ತೆರಳಬೇಕಿತ್ತು. ಆದರೆ ವಿದ್ಯಾರ್ಥಿಗಳ ಈ ಪ್ರಯಾಸವನ್ನು ತಪ್ಪಿಸುವ ಸಲುವಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಪರೀಕ್ಷಾ ಕೊಠಡಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಂಡು ಗುರುವಾರದಿಂದ ಆರಂಭಿಸಲಾಯಿತು.

ವಿದ್ಯಾರ್ಥಿಗಳು ಗಣಕ ಯಂತ್ರಗಳನ್ನು ಬಳಸಿಯೇ ಪರೀಕ್ಷೆ ಬರೆಯಬೇಕಿರುವ ಕಾರಣ ವಿದ್ಯುತ್ ಕೈಕೊಡುವ ಅಪಾಯದಿಂದಾಗಿ ಪರೀಕ್ಷೆ ಮುಕ್ತಾಯದವರೆಗೂ ಜನರೇಟರ್ ಬಳಸಿಕೊಳ್ಳಲಾಯಿತು. ಮೊದಲ ದಿನ ೫೮ ವಿದ್ಯಾರ್ಥಿಗಳು ಜೆಇಇ ಪರೀಕ್ಷೆ ಬರೆದಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಸೀನಪ್ಪ ತಿಳಿಸಿದ್ದಾರೆ.