ಸೋಮವಾರಪೇಟೆ, ಜೂ.೨೫: ನ್ಯಾಯಾಲಯದ ವಾರಂಟ್ ಧಿಕ್ಕರಿಸಿ ಓಡಾಡಿಕೊಂಡಿದ್ದ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬAಧಿಸಿದ ಆರೋಪಿಗಳನ್ನು ದಿಢೀರ್ ಕಾರ್ಯಾಚರಣೆಯ ಮೂಲಕ ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.೨೫ ಪ್ರಕರಣಗಳಿಗೆ ಸಂಬAಧಿಸಿ ದಂತೆ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ, ವಾರಂಟ್ ಧಿಕ್ಕರಿಸಿ ಓಡಾಡಿ ಕೊಂಡಿದ್ದರು. ಇವರುಗಳ ವಿರುದ್ದ ಕ್ರಮಕ್ಕೆ ಮುಂದಾದ ಸೋಮವಾರಪೇಟೆ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಆರೋಪಿಗಳ ಮನೆಗೆ ತೆರಳಿ ೨೫ ಪ್ರಕರಣಗಳಿಗೆ ಸಂಬAಧಿಸಿದAತೆ ಒಟ್ಟು ೨೪ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹೊಡೆದಾಟ, ಚೆಕ್ ಬೌನ್ಸ್, ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿದAತೆ ಆರೋಪ ಎದುರಿಸುತ್ತಿರುವ ೨೪ ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿತ್ತು. ಈ ವಾರಂಟ್ನ್ನೂ ಮೀರಿ ಆರೋಪಿಗಳು ಓಡಾಡಿ ಕೊಂಡಿದ್ದರು. ಈ ಹಿನ್ನೆಲೆ ಇಂದು ಬೆಳಿಗ್ಗೆ ೫ ಗಂಟೆಯಿAದ ೮ ತಂಡಗಳಾಗಿ ಕಾರ್ಯಾಚರಣೆಗೆ ಇಳಿದ ಸೋಮವಾರಪೇಟೆ ಪೊಲೀಸರು, ಒಟ್ಟು ೨೪ ಮಂದಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಇದರಲ್ಲಿ ೧೩ ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನ್ಯಾಯಾಲಯ, ಉಳಿದ ೧೧ ಮಂದಿಗೆ ನ್ಯಾಯಾಂಗ ಬಂಧನ ವಿಧಿಸಿತು.
ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ವಿರೂಪಾಕ್ಷ, ಮುಖ್ಯಪೇದೆ ಕುಮಾರ್ ಅವರುಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.