ಪಾಲಿಬೆಟ್ಟ, ಜೂ. ೨೫: ವೀರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ ವತಿಯಿಂದ ಜಿಲ್ಲೆಯ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ತಾ. ೨೬ ರಂದು (ಇಂದು) ಸಿ.ಇ.ಟಿ, ಜೆ.ಇ.ಇ. ಹಾಗೂ ನೀಟ್ ಪರೀಕ್ಷೆಯ ಕುರಿತು ಉಚಿತ ಆನ್ಲೈನ್ ಕಾರ್ಯಾಗಾರ ನಡೆಯಲಿದೆ ಎಂದು ಚಾಣಕ್ಯ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಕವಿತಾ ತಿಳಿಸಿದ್ದಾರೆ. ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಕಾರ್ಯಾಗಾರ ನಡೆಯಲಿದೆ. ಮಂಗಳೂರಿನ ಎಕ್ಸ್ರ್ಟ್ ಪಿಯು ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಶಾಂತ್ ರಾವ್ ಕಾರ್ಯಾಗಾರವನ್ನು ನಡೆಸಿ ಕೊಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಟೀಚ್ಮಿಂಟ್ ಆಪ್ನಲ್ಲಿ ಐ.ಡಿ ಸಂಖ್ಯೆ : ೫೮೭೩೭೦೪೪೭ ಮೂಲಕ ಬೆಳಿಗ್ಗೆ ೧೦ ಗಂಟೆಯ ಮೊದಲು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. ೮೨೭೭೪೯೬೦೦೭ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದ್ದಾರೆ.