ಮಡಿಕೇರಿ: ಅಂರ‍್ರಾಷ್ಟಿçÃಯ ಯೋಗ ದಿನದ ಅಂಗವಾಗಿ ೧೯ನೇ ಕರ್ನಾಟಕ ಎನ್‌ಸಿಸಿ ಬೆಟಾಲಿಯನ್ ವತಿಯಿಂದ ‘ಮಾನವೀಯತೆಗಾಗಿ ಯೋಗ’ ಸಂದೇಶದೊAದಿಗೆ ಯೋಗ ದಿನವನ್ನು ಗೌಡ ಸಮಾಜದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಸಂತ ಜೋಸೆಫರ ಶಾಲೆ ಮತ್ತು ಕಾಲೇಜು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಸಂತ ಮೈಕಲರ ಪ್ರೌಢಶಾಲೆಯ ಸುಮಾರು ೨೫೦ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

೧೯ನೇ ಬೆಟಾಲಿಯನ್‌ನ ಅಧಿಕಾರಿಗಳಾದ ಕರ್ನಲ್ ನವದೀಪ್ ಸಿಂಗ್ ಬೇಡಿ, ಮೇಜರ್ ಡಾ. ರಾಘವ ಬಿ., ಸುಬೇದಾರ್ ಪ್ರಕಾಶನ್, ಸುಬೇದಾರ್ ಚಂದ್ರಶೇಖರ್, ಚೀಫ್ ಆಫೀಸರ್ ದಾಮೋದರ್, ಹವಾಲ್ದಾರ್ ಚೇತನ್ ಗೌಡ, ನಾಯಕ್ ಬಸವರಾಜ್, ಅಭಿಲಾಷ್ ಕೆ.ಎಂ., ವಿದ್ಯಾರ್ಥಿ ನಾಯಕರಾದ ಇಂದ್ರಜಿತ್ ಎಂ.ಎಸ್., ಆದಿತ್ಯ ಎಸ್. ಇನ್ನಿತರರು ಭಾಗವಹಿಸಿದ್ದರು.ಸೋಮವಾರಪೇಟೆ: ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.

ಶಾಲಾ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಈ ಸಂದರ್ಭ ಶಾಲೆಯ ಆಡಳಿತಾಧಿಕಾರಿ ಲಿಖಿತ್ ದಾಮೋಧರ್, ಶಿಕ್ಷಕರು ಪಾಲ್ಗೊಂಡಿದ್ದರು.ಶನಿವಾರಸAತೆ: ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

೧೦ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶನಿವಾರಸಂತೆ ಕೃಷಿ ವಿಜ್ಞಾನಿ ಮೋಹನ್ ಕುಮಾರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಯೋಗಾಸನವನ್ನು ಮಾಡಿಸಿ ಅದರ ಪ್ರಯೋಜನ ಹಾಗೂ ಬೆಳೆದು ಬಂದ ಹಾದಿಯ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ ಉಪಸ್ಥಿತರಿದ್ದು, ಯೋಗ ದೇಹಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಸಂಬAಧಿಸಿದ್ದು, ಹಲವಾರು ಕಾಯಿಲೆಗಳು ಹಾಗೂ ಒತ್ತಡ ನಿದ್ರಾಹೀನತೆ ಇನ್ನೂ ಮುಂತಾದ ಚಟುವಟಿಕೆಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾದ ನಿತ್ಯ ಜೀವನದಲ್ಲಿ ಯೋಗವನ್ನು ರೂಢಿಸಿಕೊಂಡು ನಿರೋಗಿಯಾಗಿ ಬದುಕಬಲ್ಲ ಸದೃಢತೆಯನ್ನು ಗಳಿಸಬಲ್ಲ ಎಂದು ಕಿವಿಮಾತು ಹೇಳಿದರು.

ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗಾಸನ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದರು.

ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸೋಮೆಯಂಡ ದಿಲೀಪ್ ಅಪ್ಪಚ್ಚು ಹಾಗೂ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಯೋಗದ ಮಹತ್ವ ತಿಳಿಸಿದಲ್ಲದೆ ಜೀವನದಲ್ಲಿ ರೂಪಿಸಿಕೊಳ್ಳಬೇಕೆಂದು ದಿಲೀಪ್ ಅಪ್ಪಚ್ಚು ಹಾಗೂ ರತ್ತು ಚಂಗಪ್ಪ ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಖಜಾಂಚಿ ಬಟ್ಟೀರ ಕಾಳಪ್ಪ ನಿರ್ದೇಶಕರಾದ ಮುಳ್ಳಂಡ ಮಾಯಮ್ಮ, ಪಳಂಗAಡ ಗೀತಾ ಸುಬ್ಬಯ್ಯ, ಶಾಲಾ ಮುಖ್ಯೋಪಾಧ್ಯಾಯ ಜಿ.ಸಿ. ಸತ್ಯ ನಾರಾಯಣ ಹಾಗೂ ಶಿಕ್ಷಕರು ಹಾಜರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಅಂರ‍್ರಾಷ್ಟಿçÃಯ ಯೋಗ ದಿನದ ಪ್ರಯುಕ್ತ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ಇಡೀ ವಿಶ್ವಕ್ಕೆ ಯೋಗವನ್ನು ಪಸರಿಸಿ ಇಂದಿಗೆ ೮ ವರ್ಷವಾಯಿತು. ಈ ವರ್ಷವು ಕೂಡ ಮೋದೀಜಿಯವರ ಕನಸು ನನಸಾಗಿಸಿದ್ದಾರೆ ಎಂದರು.

ಯೋಗಾಸನದ ನೇತೃತ್ವವನ್ನು ಚಿಕ್ಕ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪೊಕ್ಕುಳಂಡ್ರ ಧನೋಜ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಜಿಲ್ಲಾ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೋಟಂಬೈಲು, ತಾಲೂಕು ರೈತ ಮೋರ್ಚಾ ಸದಸ್ಯ ಅನಂತ್ ಕುಮಾರ್ ತೋಟಂಬೈಲು, ಗ್ರಾಮ ಪಂಚಾಯಿತಿ ಸದಸ್ಯರಾದ ಪೆಮ್ಮಂಡ ಕಾವೇರಮ್ಮ, ಬೇಪುಡಿಯಂಡ ವಿಲಿನ್, ಓಬಿಸಿ ತಾಲೂಕು ಅಧ್ಯಕ್ಷ ಕೋಲೆಯಂಡ ಗಿರೀಶ್, ಆರ್‌ಎಂಸಿ ಮಾಜಿ ಸದಸ್ಯರಾದ ಐತಿಚಂಡ ಭೀಮಯ್ಯ, ಮುಂಡಿಯೋಳAಡ ದಿನು ಗಣಪತಿ, ಚೆಯ್ಯಂಡ ಲವ ಅಪ್ಪಚ್ಚು ಹಾಜರಿದ್ದರು.ಶ್ರೀಮಂಗಲ: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಕಾನೂರು-ಕೋತೂರು ಮಹಿಳಾ ಸಮಾಜ, ಪೊನ್ನಂಪೇಟೆ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ವತಿಯಿಂದ ವಿಶ್ವ ಯೋಗ ದಿನವನ್ನು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕಾನೂರು ಮಹಿಳಾ ಸಮಾಜದ ಅಧ್ಯಕ್ಷರಾದ ಚೊಟ್ಟೆಕ್‌ಮಾಡ ಮಧು ಬೋಪಯ್ಯ, ಅಂರ‍್ರಾಷ್ಟಿçÃಯ ಹಿರಿಯ ಅಥ್ಲೆಟ್ ಮಾರಮಾಡ ಮಾಯಮ್ಮ ಅವರು ಯೋಗಾಭ್ಯಾಸದಿಂದಾಗುವ ಪ್ರಯೋಜನದ ಬಗ್ಗೆ ವಿವರಿಸಿದರು.

ಅಂರ‍್ರಾಷ್ಟಿçÃಯ ಯೋಗ ಪಟು ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್ ಯೋಗಾರ್ಥಿಗಳಿಗೆ ವಿವಿಧ ಯೋಗಾಸನದ ಪ್ರಾತ್ಯಕ್ಷಿಕೆ ಮತ್ತು ಅವುಗಳಿಂದ ಉಪಯೋಗದ ಮಾಹಿತಿ ನೀಡಿದರು. ಸುಮಾರು ೯೫ ಯೋಗಾರ್ಥಿಗಳು ಪಾಲ್ಗೊಂಡಿದ್ದರು. ಕಾನೂರು-ಕೋತೂರು ಮಹಿಳಾ ಸಮಾಜದಿಂದ ಯೋಗ ಡ್ಯಾನ್ಸ್ ಕಾರ್ಯಕ್ರಮ ಗಮನ ಸೆಳೆಯಿತು.

ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಸಹಕಾರ್ಯದರ್ಶಿ ಆಲೇಮಾಡ ಸುಧೀರ್, ಆಡಳಿತ ಮಂಡಳಿ ನಿರ್ದೇಶಕರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ ಹಾಜರಿದ್ದರು.ಮುಳ್ಳೂರು: ಸಮೀಪದ ಶನಿವಾರಸಂತೆ ಯಶಸ್ವಿ ಸಭಾಂಗಣದಲ್ಲಿ ಶನಿವಾರಸಂತೆ ಬಿಜೆಪಿ ಪಕ್ಷದ ವತಿಯಿಂದ ಅಂರ‍್ರಾಷ್ಟಿçÃಯ ಯೋಗ ದಿನವನ್ನು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು. ಯೋಗ ಶಿಕ್ಷಕಿ ಭುವನೇಶ್ವರಿ ಹರೀಶ್ ಯೋಗದ ಮಹತ್ವ ಕುರಿತು ಮಾಹಿತಿ ನೀಡಿದರು.

ಬಿಜೆಪಿ ಪ್ರಮುಖ ಎಸ್.ಎನ್. ರಘು ಮಾತನಾಡಿ, ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಯೋಗ ಅನೇಕ ರೋಗಗಳಿಗೆ ಔಷಧಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಿನ ಮುಂಜಾನೆ ಯೋಗಾಭ್ಯಾಸ ಮಾಡುವಂತೆ ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯೆ ಸರೋಜಮ್ಮ ಮಾತನಾಡಿ, ಯೋಗಾಭ್ಯಾಸದಿಂದ ಮನುಷ್ಯನ ಆಯಸ್ಸು ಹೆಚ್ಚುವುದರ ಜೊತೆಯಲ್ಲಿ ಆರೋಗ್ಯದಾಯಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿ ಅವರು ಭಾರತದ ಪಾರಂಪರಿಕ ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಜೂ. ೨೧ರ ದಿನವನ್ನು ಅಂರ‍್ರಾಷ್ಟಿçÃಯ ಯೋಗ ದಿನವನ್ನಾಗಿ ಆಚರಿಸಲು ಬುನಾದಿ ಹಾಡಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಯೋಗಾನಂದ್, ಯತೀಶ್, ಪ್ರವೀಣ್, ಹರೀಶ್, ತನ್ಮಯ್ ಮುಂತಾದವರು ಇದ್ದರು.*ಗೋಣಿಕೊಪ್ಪ: ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ಧ್ಯಾನ, ಪ್ರಾಣಾಯಾಮಗಳ ಮೂಲಕ ಯೋಗದ ವಿವಿಧ ಕಲೆಗಳನ್ನು ತಿಳಿದುಕೊಳ್ಳುವ ಮೂಲಕ ಅರುವತ್ತೊಕ್ಲು ಗ್ರಾಮದ ಕಾಡ್ಯಮಾಡ ಐನ್‌ಮನೆಯ ಆವರಣದಲ್ಲಿರುವ ಕಾಡ್ಯಮಾಡ ಗೋಪಾಲ ಗೌರಿ ಸಭಾಂಗಣದಲ್ಲಿ ಕುಟುಂಬದ ಸದಸ್ಯರು ಅಂರ‍್ರಾಷ್ಟಿçÃಯ ಯೋಗ ದಿನವನ್ನು ಕಾಡ್ಯಮಾಡ ಗೋಪಾಲ ಹಾಗೂ ಗೌರಿ ಅವರ ಮಾರ್ಗದರ್ಶನದಲ್ಲಿ ಆಚರಿಸಿದರು.

ಕಾಡ್ಯಮಾಡ ಕುಟುಂಬಸ್ಥರ ಅಧ್ಯಕ್ಷ ಗಿರೀಶ್ ಗಣಪತಿ ಅವರ ಮುಂದಾಳತ್ವದಲ್ಲಿ ಕುಟುಂಬಸ್ಥರಿಗೆ ಪಾಲೆಕಂಡ ಕೃತಿಕಾ ಬೋಪಣ್ಣ ಅವರು ಯೋಗ ಮಾರ್ಗದರ್ಶನ ನೀಡಿದರು.

ಯೋಗಾಭ್ಯಾಸದಿಂದ ರೋಗಗಳಿಂದ ಮುಕ್ತಿ ಹೊಂದಬಹುದಾಗಿದ್ದು, ಪ್ರತಿನಿತ್ಯ ನಿಯಮಿತವಾಗಿ ಯೋಗ ಮಾಡುವುದು ಉತ್ತಮ ಬೆಳವಣಿಗೆ. ತಮ್ಮ ದೇಹದ ಸೌಂದರ್ಯವನ್ನು ಮತ್ತು ಆರೋಗ್ಯ ವೃದ್ಧಿಗೊಳಿಸಲು ಯೋಗದಿಂದ ಸಾಧ್ಯವಿದೆ. ಒತ್ತಡಗಳಿಂದ ಹೊರಬರಲು ಯೋಗದ ಕೆಲವು ಭಂಗಿಗಳನ್ನು ನಿಯಮಿತವಾಗಿ ಪಾಲನೆ ಮಾಡುವುದರಿಂದ ಸಾಧ್ಯವಿದೆ ಎಂದು ಕೃತಿಕಾ ಬೋಪಣ್ಣ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನವೀನ್, ಟ್ರಸ್ಟ್ ಅಧ್ಯಕ್ಷ ಡಾ. ಬೋಪಣ್ಣ ಮತ್ತು ಕುಟುಂಬಸ್ಥರು ಹಾಜರಿದ್ದರು. ಉದಯ್ ಸ್ವಾಗತಿಸಿ, ನಿರೂಪಿಸಿದರು.ಮುಳ್ಳೂರು: ಸಮೀಪದ ಶನಿವಾರಸಂತೆ ಯಶಸ್ವಿ ಸಭಾಂಗಣದಲ್ಲಿ ಶನಿವಾರಸಂತೆ ಬಿಜೆಪಿ ಪಕ್ಷದ ವತಿಯಿಂದ ಅಂರ‍್ರಾಷ್ಟಿçÃಯ ಯೋಗ ದಿನವನ್ನು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು. ಯೋಗ ಶಿಕ್ಷಕಿ ಭುವನೇಶ್ವರಿ ಹರೀಶ್ ಯೋಗದ ಮಹತ್ವ ಕುರಿತು ಮಾಹಿತಿ ನೀಡಿದರು.

ಬಿಜೆಪಿ ಪ್ರಮುಖ ಎಸ್.ಎನ್. ರಘು ಮಾತನಾಡಿ, ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಯೋಗ ಅನೇಕ ರೋಗಗಳಿಗೆ ಔಷಧಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಿನ ಮುಂಜಾನೆ ಯೋಗಾಭ್ಯಾಸ ಮಾಡುವಂತೆ ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯೆ ಸರೋಜಮ್ಮ ಮಾತನಾಡಿ, ಯೋಗಾಭ್ಯಾಸದಿಂದ ಮನುಷ್ಯನ ಆಯಸ್ಸು ಹೆಚ್ಚುವುದರ ಜೊತೆಯಲ್ಲಿ ಆರೋಗ್ಯದಾಯಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿ ಅವರು ಭಾರತದ ಪಾರಂಪರಿಕ ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಜೂ. ೨೧ರ ದಿನವನ್ನು ಅಂರ‍್ರಾಷ್ಟಿçÃಯ ಯೋಗ ದಿನವನ್ನಾಗಿ ಆಚರಿಸಲು ಬುನಾದಿ ಹಾಡಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಯೋಗಾನಂದ್, ಯತೀಶ್, ಪ್ರವೀಣ್, ಹರೀಶ್, ತನ್ಮಯ್ ಮುಂತಾದವರು ಇದ್ದರು.ಕಣಿವೆ: ಗುರುವಿಲ್ಲದ ಯೋಗಾಭ್ಯಾಸ ಸರಿಯಾದ ಕ್ರಮವಲ್ಲ. ದೈಹಿಕ, ಮಾನಸಿಕ ಒತ್ತಡ ನಿವಾರಣೆ ಮಾಡುತ್ತದೆ. ವೈದ್ಯಾಧಿಕಾರಿ ಡಾ. ಶ್ಯಾಮ ಪ್ರಸಾದ್ ಅಭಿಪ್ರಾಯಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ವಿಜ್ಞಾನ ಸಂಕೀರ್ಣದ ಒಳಾಂಗಣದಲ್ಲಿ ಯೋಗ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಗ ಎಂಬುದರಲ್ಲಿ ಕಲೆ ಮತ್ತು ವಿಜ್ಞಾನ ಎರಡೂ ಇದೆ. ಸಾತ್ವಿಕ ಆಹಾರ ಸೇವನೆ ಒಳ್ಳೆಯದು. ದಿನನಿತ್ಯ ನಾವು ಸೇವಿಸುವಂತಹ ಆಹಾರ ಜೀರ್ಣ ಕ್ರಿಯೆಗೆ ಪೂರಕ ಮತ್ತು ಮನಸ್ಸಿಗೆ ಉಲ್ಲಾಸ ದೊರಕುವಂತೆ ಇರಬೇಕು. ಪ್ರತಿಯೊಬ್ಬರೂ ಆಹಾರ ಸೇವನೆಯ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ. ಬ್ರಾಹ್ಮಿ ಮುಹೂರ್ತದಲ್ಲಿ ಓದುವುದು ರಾತ್ರಿ ಓದುವ ವಿಧಾನಕ್ಕಿಂತ ಅತ್ಯಂತ ಪರಿಣಾಮಕಾರಿಯಾಗಿದೆ. ಕ್ರಮಬದ್ಧ ದಿನಚರಿ ವ್ಯಕ್ತಿಯ ಮನಸ್ಸು ಮತ್ತು ದೇಹವನ್ನು ಕ್ರಿಯಾಶೀಲವಾಗಿಡುತ್ತದೆ. ಪ್ರಪಂಚದ ಗಮನವೇ ಭಾರತದೆಡೆಗೆ ನೋಡುವುದಕ್ಕೆ ಕಾರಣ ಯೋಗ. ಈ ಜೀವನ ಏತಕ್ಕಾಗಿ ಎಂಬ ಅಂಶಗಳನ್ನು ಯೋಗ ಒಳಗೊಂಡಿದೆ. ಯೋಗದಿಂದ ಹಲವಾರು ಉಪಯೋಗಗಳಿವೆ ಎಂದು ತಿಳಿಸಿದರು.

ಈ ಸಂದರ್ಭ ಕಾರ್ಯಕ್ರಮದ ಕುರಿತು ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಜೆ. ಶ್ಯಾಮಾ ಸುಂದರ ಮಾತನಾಡಿದರು. ಕೇಂದ್ರದ ಪ್ರೊ. ಕೆ.ಎಸ್. ಚಂದ್ರಶೇಖರಯ್ಯ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಜೀವರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಡಾ. ಕೆ.ಕೆ. ಧರ್ಮಪ್ಪ, ಸೂಕ್ಷಾö್ಮಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಬಿ.ಎಸ್. ಗುಣಶ್ರೀ ಮಾತನಾಡಿದರು.

ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ಎಂ. ವೆಂಕಟಾಚಲಪತಿ ಮತ್ತು ಸಂಶೋಧನಾ ವಿದ್ಯಾರ್ಥಿ ಭೀಮರಾಯ ಎಂ. ದೊಡ್ಮನಿ ಅವರ ಸಂಪಾದಕತ್ವದ ಸದೃಢ ಆರೋಗ್ಯಕ್ಕೆ ಸೂರ್ಯ ನಮಸ್ಕಾರ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ವಿಶ್ವಯೋಗ ದಿನಾಚರಣೆ ಅಂಗವಾಗಿ ಯೋಗಾಸನ ಮಾಡಿದರು.ಶನಿವಾರಸಂತೆ: ಪಟ್ಟಣದ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸನ್ನರಾವ್ ಅವರು ಯೋಗಾಸನ ಹಾಗೂ ಪ್ರಾಣಾಯಾಮದ ಬಗ್ಗೆ ಉಪನ್ಯಾಸ ನೀಡಿದರು.

ಯೋಗದ ಮಹತ್ವದ ಬಗ್ಗೆ ಅವರು ತಿಳಿಸಿದರು. ಯೋಗ ಗುರು ಚಿದಾನಂದ್, ಎ.ಡಿ. ಮೋಹನ್ ಕುಮಾರ್ ಹಾಗೂ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿದರು. ಶಿಬಿರಾರ್ಥಿ ಬಿದರೂರು ಸರೋಜಮ್ಮ ೨೧ ಅಷ್ಟಾಂಗ ಯೋಗಾಸನಗಳನ್ನು ಪ್ರದರ್ಶಿಸಿದರು. ಉಪನ್ಯಾಸ ನೀಡಿದ ಪುರೋಹಿತ ಪ್ರಸನ್ನರಾವ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಯೋಗಾಪಟುಗಳಾದ ಬಿ.ಎಸ್. ಪ್ರತಾಪ್, ಸೋಮಣ್ಣ, ಹರೀಶ್, ಕೃಷಿ ವಿಜ್ಞಾನಿ ಮೋಹನ್, ಜಯಕುಮಾರ್, ಜಯಸ್ವಾಮಿ, ಮೂರ್ತಿ, ವೆಂಕಟೇಶ್, ಸಿ.ಎಂ. ಪುಟ್ಟಸ್ವಾಮಿ, ಸುರೇಶ್, ಸುದೀಪ್ ಹಾಜರಿದ್ದರು.ವೀರಾಜಪೇಟೆ: ಕಾವೇರಿ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ. ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮ ತನವನ್ನು ಒಂದಾಗಿಸುವ ವಿದ್ಯೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಸಹ ಶಿಕ್ಷಕಿ ಅಮ್ರಿತಾ ಅರ್ಜುನ್ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಆರೋಗ್ಯ ನಾಯಕಿ ದೀಪ್ನಾ ಪೂವಯ್ಯ ಯೋಗ ದಿನÀದ ಮಹತ್ವದ ಕುರಿತು ಮಾತನಾಡಿದಳು.

ಶಾಲೆಯ ಯೋಗ ತರಬೇತುದಾರ ವಿ.ಟಿ. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಯೋಗಾಸನದಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಿದರು. ನಂತರ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರಾಣಯಾಮ, ಸೂರ್ಯ ನಮಸ್ಕಾರ ಹಾಗೂ ಇನ್ನಿತರ ಹಲವಾರು ಆಸನಗಳನ್ನು ಪ್ರದರ್ಶಿಸಿದರು.

ಈ ಸಂದರ್ಭ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಇದ್ದರು.ಶನಿವಾರಸಂತೆ: ಪಟ್ಟಣದ ಖಾಸಗಿ ರೆಸಾರ್ಟ್ನಲ್ಲಿ ಸುರಭಿ ಯೋಗ ಸ್ಟೂಡಿಯೋ ವತಿಯಿಂದ ಬೀನಾ ಅರವಿಂದ್ ತಂಡದವರು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು.

ಬೀನಾ ಅರವಿಂದ್ ಹಾಗೂ ತಂಡದವರು ವೃಕ್ಷಾಸನ, ತಾಡಾಸನ, ಭದ್ರಾಸನ ಮತ್ತಿತರ ಆಸನಗಳ ಜೊತೆಗೆ ಪ್ರಾಣಾಯಾಮವನ್ನು ಪ್ರದರ್ಶಿಸಿದರು. ಉದ್ಯಮಿ ಎಸ್.ವಿ. ಜಗದೀಶ್, ತಂಡದ ಸುರಭಿ, ಚೈತ್ರಾ, ಶೋಭಾ, ಗೀತಾ, ಭುವನೇಶ್ವರಿ, ಅನುಪಮಾ, ಗುಣಶ್ರೀ, ಭಾರತಿ, ಸೌಮ್ಯ, ಜ್ಯೋತಿ, ಶ್ರೇಯಾ, ದೃಶ್ಯಾ, ಧಾತ್ರಿ, ಪ್ರತೀಕ್ಷ ಹಾಜರಿದ್ದರು.