ಶನಿವಾರಸಂತೆ, ಜೂ. ೨೫: ಪಟ್ಟಣದ ಕಾಫಿ ಬೆಳೆಗಾರ ಕೆ.ಕೆ. ನೀಲಕಂಠಪ್ಪ ಎಂಬವರು ಯಸಳೂರಿನ ತಮ್ಮ ತೋಟಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ಬಿಳಾಹ ಗ್ರಾಮದ ತಿರುವು ರಸ್ತೆಯಲ್ಲಿ ಯಸಳೂರು ಕಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಯಸಳೂರಿನ ಯುವಕ ರೋಶನ್ ಗಾಯಗೊಂಡ ಬೈಕ್ ಸವಾರನಾಗಿದ್ದು, ಗಾಯಗೊಂಡ ಯುವಕನನ್ನು ಉಪಚರಿಸಿ, ಸಾರ್ವಜನಿಕರ ಸಹಾಯದಿಂದ ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿರುವುದಾಗಿ ಕಾರು ಮಾಲೀಕ ಕೆ.ಕೆ. ನೀಲಕಂಠಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಹೆಡ್ ಕಾನ್ಸ್ಟೇಬಲ್ ನಿಶಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಖಂಗೊAಡಿರುವ ಬೈಕ್ (ಕೆಎ-೧೪ ಕ್ಯೂ-೬೦೭೫) ಹಾಗೂ ಕಾರನ್ನು (ಜಿಜೆ-೧೨, ಜೆ-೧೬೯೬) ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.