ಗೋಣಿಕೊಪ್ಪಲು, ಜೂ.೨೫ : ಬಿಟ್ಟಂಗಾಲ ಸಮೀಪದ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ೨ನೇ ರುದ್ರಗುಪ್ಪೆಯಿಂದ ಕುಟ್ಟಂದಿಗೆ ಸಂಪರ್ಕ ರಸ್ತೆ, ಸೇತುವೆ ನಿರ್ಮಾಣದಿಂದ ವಿ.ಬಾಡಗದಿಂದ ಕುಟ್ಟಂದಿ ಭಾಗಕ್ಕೆ ಬರುವ ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ. ಇದರಿಂದ ಕೇವಲ ೪೦೦ಮೀ.ನಲ್ಲಿ ಗ್ರಾಮವನ್ನು ಸೇರಿಕೊಳ್ಳಬಹುದಾಗಿದೆ. ಈ ಭಾಗದ ಎರಡು ಬದಿಯಲ್ಲಿರುವ ರೈತರಿಗೆ ಇಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಯೋಜನೆಯಿಂದ ನೀರಾವರಿ ಸೌಲಭ್ಯ ದೊರೆಯಲಿದ್ದು ಈ ಭಾಗದ ನಾಗರಿಕರ, ರೈತರ, ಕೃಷಿಕರ ಬಹು ಕಾಲದ ಬೇಡಿಕೆ ಈಡೇರಿದಂತಾಗಿದೆ.

ರೂ. ೧.೬೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು, ಸೇತುವೆ ನಿರ್ಮಾಣ ಹಾಗೂ ೩೦೦ ಮೀ. ರಸ್ತೆ ಕಾಮಗಾರಿಯೂ ಬರದಿಂದ ಸಾಗುತ್ತಿದ್ದು ಮಳೆಗಾಲದ ನಂತರ ಈ ಯೋಜನೆಯ ಪ್ರಯೋಜನವನ್ನು ಈ ಸುತ್ತಮುತ್ತಲಿನ ಗ್ರಾಮದ ಜನತೆ ಪಡೆಯಲಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವತಿಯಿಂದ ವಿಶೇಷ ಯೋಜನೆಯಡಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಗೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ೧.೬೦ ಕೋಟಿ ಹಣವನ್ನು ಮಂಜೂರು ಮಾಡಿದ್ದರು. ಇತ್ತೀಚೆಗೆ ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕರು ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವುದಾಗಿ ತಿಳಿಸಿದರು.

ಈ ಭಾಗದ ಕುಟ್ಟಂದಿಯಿAದ ವಿ,ಬಾಡಗಕ್ಕೆ ೭.೫ ಕಿ.ಮೀ.ದೂರವಿದ್ದು ಸೇತುವೆ ನಿರ್ಮಾಣದಿಂದಾಗಿ ಸಂಪರ್ಕ ರಸ್ತೆ ಆಗಲಿರುವುದರಿಂದ ೪೦೦ ಮೀ.ದೂರದಲ್ಲಿ ಈ ಸಂಪರ್ಕವನ್ನು ಪಡೆದು ನಾಗರಿಕರು ತಮ್ಮ ಗ್ರಾಮಗಳಿಗೆ ತೆರಳಬಹುದಾಗಿದೆ. ಸಂಪರ್ಕ ಸೇತುವೆ ಹಾಗೂ ರಸ್ತೆ, ಕಿಂಡಿ ಅಣೆಕಟ್ಟು ಕಾಮಗಾರಿಯಿಂದಾಗಿ ಈ ಭಾಗದ ರೈತರು ಬೆಳೆಯುವ ಬೆಳೆಗಳಿಗೆ ಸದಾ ಕಾಲ ನೀರಿನ ಸೌಲಭ್ಯ ದೊರೆಯಲಿದೆ. ಮಳೆಗಾಲದಲ್ಲಿ ನೀರನ್ನು ಸಂಗ್ರಹಣೆ ಮಾಡುವ ಯೋಜನೆ ಇದಾಗಿರುವುದಿಲ್ಲ.

ಗೇಟ್‌ಗಳ ಮೂಲಕ ನೀರನ್ನು ಹೊರಬಿಡÀಬಹುದಾಗಿದೆ. ಮಾರ್ಚ್,ಏಪ್ರಿಲ್ ತಿಂಗಳಿನಲ್ಲಿ ಈ ಭಾಗದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟು ನೀರಿನ ಸೌಲಭ್ಯ ದೊರೆಯಲಿದೆ. ಈ ಭಾಗದ ಜನರಲ್ಲಿ ಹಲವು ವರ್ಷಗಳ ಬೇಡಿಕೆ ಇದಾಗಿದ್ದು ಕಿರು ನೀರಾವರಿ ಯೋಜನೆಯಿಂದ ಈ ಭಾಗದ ಅಂತರ್ಜಲ ಹೆಚ್ಚಾಗಲಿದೆ. ರೈತರ ಬಾವಿ ಹಾಗೂ ಕೆರೆಗಳಲ್ಲಿ ಸದಾ ನೀರು ತುಂಬಿರುತ್ತದೆ. ಬೇಸಿಗೆ ಕಾಲದಲ್ಲಿ ತಮ್ಮ ತೋಟಗಳಿಗೆ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂದರು. ಮುಂದಿನ ಮಳೆಗಾಲದ ನಂತರ ಇದರ ಕಾಮಗಾರಿಯೂ ಪೂರ್ಣಗೊಳ್ಳಲಿದ್ದು ಇದರ ಪ್ರಯೋಜನ ಈ ಗ್ರಾಮದ ಜನತೆ ಪಡೆದುಕೊಳ್ಳಲಿ ಎಂದರು.

ಸ್ಥಳ ಪರಿಶೀಲನೆ ವೇಳೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಕಾಡ್ಯಮಾಡ ಗಿರೀಶ್ ಗಣಪತಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ತೀತಿಮಾಡ ಲಾಲಾ ಭೀಮಯ್ಯ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಮೂಕಚಂಡ ಪ್ರಸನ್ನ ಸುಬ್ಬಯ್ಯ, ಬಿ.ಶೆಟ್ಟಿಗೇರಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಬಲ್ಲಡಿಚಂಡ ವಿಜು ಕುಶಾಲಪ್ಪ,

ಕಂಜಿತAಡ ಸಂದ್ಯ ಉತ್ತಪ್ಪ, ಬಿಜೆಪಿ ಬೂತ್ ಅಧ್ಯಕ್ಷರಾದ ಮೇಚಂಡ ಉತ್ತಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಂ.ಕಾವೇರಮ್ಮ, ಕೆ.ಎಂ. ಜಗದೀಶ್, ಬಿಜೆಪಿ ಕೃಷಿ ಮೋರ್ಚಾದ ಸದಸ್ಯರಾದ ಪಂದಿಮಾಡ ರಮೇಶ್, ಬೂತ್ ಅಧ್ಯಕ್ಷರಾದ ಕೊಲ್ಲೀರ ಸಂಜು ಮಾಚಯ್ಯ, ಬಿಜೆಪಿ ಮುಖಂಡರಾದ ಕಿಟ್ಟು ಸುಬ್ಬಯ್ಯ, ಮುಲ್ಲೆಂಗಡ ಕುಟ್ಟಪ್ಪ, ಬಾನಂಡ ಅಶೋಕ್, ಸೇರಿದಂತೆ ಗ್ರಾಮಸ್ಥರು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್